ಕುಮಟಳ್ಳಿ ಕೈ ಬಿಟ್ಟ ಯಡಿಯೂರಪ್ಪ: ಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ

By Suvarna NewsFirst Published Feb 6, 2020, 10:12 AM IST
Highlights

ಮಹೇಶ ಕುಮಟಳ್ಳಿ ಕೈ ಬಿಟ್ಟಿರುವುದಕ್ಕೆ ಪಂಚಮಸಾಲಿ ಸಮುದಾಯದ ಜನ ಅಸಮಾಧಾನ| ಕೂಡಲಸಂಗಮದ ಕುಮಟಳ್ಳಿ ಅವರ ಹೆಸರು ಸೇರಿಸಿ ಸಚಿವರನ್ನಾಗಿಸಬೇಕು ಬಸವ ಜಯ ಮೃತ್ಯುಂಜಯ ಸ್ವಾಮೀಜಿ| 

ಬಾಗಲಕೋಟೆ(ಫೆ.06): ಉಪ ಚುನಾವಣೆಯಲ್ಲಿ ಗೆದ್ದ 11 ಜನರಿಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿತ್ತು, 10 ಜನರಿಗೆ  ಕೊಟ್ಟು ಒಬ್ಬರನ್ನ ಬಿಟ್ಟಿರೋದು ಚರ್ಚೆಗೆ ಗ್ರಾಸವಾಗಿದೆ. ಮಹೇಶ ಕುಮಟಳ್ಳಿ ಅವರನ್ನು ಕೈ ಬಿಟ್ಟಿರುವುದಕ್ಕೆ ನಮ್ಮ ಸಮುದಾಯದ ಜನ ಅಸಮಾಧಾನಗೊಂಡಿದ್ದಾರೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಂದು ಹೇಳಿದ್ದಾರೆ. 

"

10 ಶಾಸಕರ ಪೈಕಿ 8 ಮಂದಿ ಇದೇ ಮೊದಲ ಸಲ ಮಂತ್ರಿ!

ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಹೇಶ ಕುಮಟಳ್ಳಿ ನಮ್ಮ ಸಮುದಾಯವರೆಂದು ಕೇಳುತ್ತಿಲ್ಲ. ನ್ಯಾಯ, ನೀತಿ, ವಿಶ್ವಾಸದಿಂದ ಗೆದ್ದವರಲ್ಲಿ ಒಬ್ಬರನ್ನ ಕೈಬಿಟ್ಟಿದ್ದು ಸಮಾಜಕ್ಕೆ ಬೇಸರ ತಂದಿದೆ. ಸಿಎಂ ಯಡಿಯೂರಪ್ಪ ಕೊಟ್ಟ ಪಟ್ಟಿಯಲ್ಲಿ ಅವರ ಹೆಸರಿತ್ತು. ಈಗ ಕೈ ಬಿಟ್ಟಿದ್ದಾರೆ. ಈಗ ಕುಮಟಳ್ಳಿ ಅವರ ಹೆಸರು ಸೇರಿಸಿ ಸಚಿವರನ್ನಾಗಿಸಬೇಕು ಎಂದು ಹೇಳಿದ್ದಾರೆ.

ಯೋಗೇಶ್ವರ್‌ ಕಾರಣದಿಂದ ಕತ್ತಿ, ಲಿಂಬಾವಳಿಗೂ ತಪ್ಪಿತು ಮಂತ್ರಿಗಿರಿ!

ಸಾಕಷ್ಟು ಜನ ಭಕ್ತರು ನಮಗೂ ಕರೆ ಮಾಡುತ್ತಾರೆ. ಹೀಗಾಗಿ ಕುಮಟಳ್ಳಿ ಅವರಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡುತ್ತೇನೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಅವರು ಸರ್ಕಾರಕ್ಕೆ ಈ ಹಿಂದೆಯೇ ಮನವಿ ಮಾಡಿದ್ದರು. ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಅಂತ ಹೇಳಿದ್ದರು. ಇಬ್ಬರ ಗೆಲುವಿಗೂ ಒಬ್ಬರಿಗೊಬ್ಬರು ಕಾರಣರಾಗಿದ್ದಾರೆ. ಆರಂಭದಿಂದಲೂ ರಮೇಶ್ ಹಿಂದೆ ಹೋದಂತವರು ಕುಮಟಳ್ಳಿ ಅವರುಉಳಿದವರು ನಂತರದಲ್ಲಿ ಬಂದವರು. ಈಗಲೂ ರಮೇಶ್ ಜಾರಕಿಹೊಳಿ ಸಿಎಂ ಯಡಿಯೂರಪ್ಪಗೆ ಹೇಳಿದ್ದಾರಂತೆ ಆದರೂ ಮಾಡಿಲ್ಲ. ಆದ್ರೂ ಈಗ ಯಾಕೆ ಹೀಗಾಯ್ತು ಅನ್ನೋದೆ ಗೊತ್ತಾಗುತ್ತಿಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗೋದು ಬೇಡ. ಆದಷ್ಟು ಸರಿಪಡಿಸುವ ಅವಕಾಶವಿದೆ, ಸಿಎಂಗೆ ಸಚಿವ ಸ್ಥಾನ ತೆಗೆದುಕೊಳ್ಳುವ ಪರಮಾಧಿಕಾರ ಇದೆ. ಗೆದ್ದವರಿಗೆಲ್ಲರಿಗೂ ಸಚಿವ ಸ್ಥಾನ ನೀಡಿ ಸರಿಪಡಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. 

click me!