ಮಳಲಿ ಮಸೀದಿ ಉತ್ಖನನಕ್ಕೆ ಕೋರ್ಟ್‌ಗೆ ಅರ್ಜಿ?: ಕಾನೂನು ಹೋರಾಟಕ್ಕೆ ಮುಂದಾದ ಜಂಗಮ ಮಠ..!

By Girish Goudar  |  First Published May 27, 2022, 12:41 PM IST

*  ತಾಂಬೂಲ ಪ್ರಶ್ನೆ ಬೆನ್ನಲ್ಲೇ ಕಾನೂನು ಹೋರಾಟಕ್ಕೆ ಮಸೀದಿ ವಿವಾದ ಸಾಕ್ಷಿಯಾಗುವ ಸಾಧ್ಯತೆ
*   ಕಾನೂನು ಹೋರಾಟಕ್ಕೆ ವಿಎಚ್‌ಪಿ ಸಾಥ್ 
*  ಕಟ್ಟೆಮಾರ್ ಜಾಗದಲ್ಲಿ ಸಿಕ್ಕ ವೀರಶೈವರ ಮುದ್ರೆ ಇದ್ದ ಕಲ್ಲುಗಳು 


ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ಮೇ.27):  ವಿವಾದಿತ ಮಳಲಿ ಮಸೀದಿ ಉತ್ಖನನ ನಡೆಸಲು ಮಂಗಳೂರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ತಾಂಬೂಲ ಪ್ರಶ್ನೆ ಬೆನ್ನಲ್ಲೇ ಕಾನೂನು ಹೋರಾಟಕ್ಕೆ ಮಸೀದಿ ವಿವಾದ ಸಾಕ್ಷಿಯಾಗುವ ಸಾಧ್ಯತೆಗಳಿವೆ. 

Tap to resize

Latest Videos

ಗುರುಪುರದ ವೀರಶೈವ ಜಂಗಮ ಮಠದ ಸ್ವಾಮೀಜಿ ಕಾನೂನು ಹೋರಾಟಕ್ಕೆ ಸಾಥ್ ನೀಡಿದ್ದು, ವಿಶ್ವ ಹಿಂದೂ ಪರಿಷತ್ ಹೋರಾಟಕ್ಕೆ ಗುರುಪುರದ ಜಂಗಮ ಮಠ ಸಾಥ್ ನೀಡಿದೆ. ವಿಎಚ್‌ಪಿ ಕಾನೂನು ಹೋರಾಟಕ್ಕೆ ಬಲ ತಂದ ಜಂಗಮ ಮಠದ ರುದ್ರಮುನಿ ಸ್ವಾಮೀಜಿ, ಮಸೀದಿ ಉತ್ಖನನ ಮತ್ತು ಮಸೀದಿ ಜಾಗದ ಸತ್ಯಾಸತ್ಯತೆ ಪರಿಶೀಲನೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. 

News Hour: ಟಿಪ್ಪು ಸಹಚರನಿಂದ ಮಳಲಿ ಮಠ ನಾಶ? ನೀಲಕಂಠ ವೈಭವ ಪುಸ್ತಕದಲ್ಲಿರುವ ಸತ್ಯವೇನು?

ಗುರುಪುರ ಜಂಗಮ ಮಠಕ್ಕೆ ನಿನ್ನೆ ಭೇಟಿ ನೀಡಿ ಸ್ವಾಮೀಜಿ ಜೊತೆ ವಿಎಚ್‌ಪಿ ಮುಖಂಡರು ಚರ್ಚಿಸಿದ್ದು, ಮಠದ ಇತಿಹಾಸ ಮತ್ತು ಮುಂದಿನ ಹೋರಾಟಕ್ಕೆ ಬೆಂಬಲ ಕೇಳಿದ್ದರು. ಈಗಾಗಲೇ ಮಂಗಳೂರು ಕೋರ್ಟ್‌ನಲ್ಲಿ ವಿಎಚ್‌ಪಿ ಅರ್ಜಿ ವಿಚಾರಣೆಯಲ್ಲಿದ್ದು, ಇದೇ ವಿವಾದ ಸಂಬಂಧ ಮಠದ ವತಿಯಿಂದ ಮತ್ತೊಂದು ಅರ್ಜಿ ಸಲ್ಲಿಕೆಯಾಗಲಿದೆ. ಗುರುಪುರ ಮಠದ ಸ್ವಾಮೀಜಿಯಿಂದ ವಿವಾದ ಸಂಬಂಧ ಅರ್ಜಿ ಸಲ್ಲಿಕೆಯಾಗಲಿದೆ. ಗುರುಪುರ ಜಂಗಮ ಮಠಕ್ಕೆ ಮಳಲಿ ಮಠ ಸೇರಿದೆ ಎನ್ನಲಾಗಿದ್ದು, ತಾಂಬೂಲ ಪ್ರಶ್ನೆಯಲ್ಲೂ ಮಸೀದಿ ಜಾಗದಲ್ಲಿ ಶಿವ ಸಾನಿಧ್ಯ ಇದ್ದ ಬಗ್ಗೆ ಮಾಹಿತಿ ಇತ್ತು. ಗುರುಪುರ ಮಠದ ಪುಸ್ತಕದಲ್ಲೂ ಮಳಲಿಯಲ್ಲಿ ವೀರಶೈವ ಮಠ ಇದ್ದ ಬಗ್ಗೆ ಮಾಹಿತಿ ಇದ್ದು, ಹೀಗಾಗಿ ಮಠದ ನೆರವು ಪಡೆದು ಹೋರಾಟಕ್ಕೆ ಮುಂದಾಗಿದೆ ವಿಎಚ್‌ಪಿ. 

ಉತ್ಖನನ ಮಾಡಿದ್ರೆ ದಾಖಲೆ ಸಿಗುತ್ತೆ: ಜಂಗಮ ಮಠದ ಸ್ವಾಮೀಜಿ

ವಿವಾದಿತ ಮಳಲಿ ಮಸೀದಿ ಉತ್ಖನನಕ್ಕೆ ಕೋರ್ಟ್‌ಗೆ ಅರ್ಜಿ ವಿಚಾರಕ್ಕೆ ಸಂಬಂಧಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ವಿಎಚ್ ಪಿ ಕಾನೂನು ಹೋರಾಟಕ್ಕೆ ನನ್ನ ಪೂರ್ಣ ಸಹಕಾರ ಇದೆ. ಈ ಜಾಗದ ವಿಚಾರದಲ್ಲಿ 300-400 ವರ್ಷಗಳ ಇತಿಹಾಸ ಇದೆ. ಈ ಬಗ್ಗೆ ಹಿಂದೂಗಳು ಅಥವಾ ಮುಸಲ್ಮಾನರಲ್ಲಿ ದಾಖಲೆ ಇಲ್ಲ. ಈ ಮಸೀದಿ ಉತ್ಖನನ ಮಾಡಬೇಕು, ಆಗ ಸತ್ಯ ಹೊರ ಬರುತ್ತದೆ. ಕಾನೂನು ಹೋರಾಟಕ್ಕೆ ದಾಖಲೆ ಬೇಕು, ಉತ್ಖನನ ಮಾಡಿದ್ರೆ ಸಾಕಷ್ಟು ದಾಖಲೆ ಸಿಗುತ್ತೆ. ವೀರಶೈವರು ಇದ್ದರು ಎಂಬ ಬಗ್ಗೆ ಎಲ್ಲಾ ದಾಖಲೆ ಅಲ್ಲಿ ಸಿಗುತ್ತೆ. ವಿಎಚ್ ಪಿ ಈ ಕುರಿತು ಮಾಡುವ ಕಾನೂನು ಹೋರಾಟಕ್ಕೆ ಬೆಂಬಲ ಇದೆ. ಮಠದಿಂದ ಈ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ.‌ ಮಳಲಿ ಮಠದ ಜಾಗದ ಉತ್ಖನನಕ್ಕೆ ಕೋರ್ಟ್ ಗೆ ಅರ್ಜಿ ಹಾಕ್ತೇವೆ‌. ಈ ಹಿಂದೆಯೇ ಮಳಲಿಯ ಕಟ್ಟೆಮಾರ್ ಕುಟುಂಬದ ತೋಟದಲ್ಲಿ ಲಿಂಗಾಯತ ಮುದ್ರೆಯ ಕಲ್ಲು ಸಿಕ್ಕಿತ್ತು‌. ಟಿಪ್ಪು ಸುಲ್ತಾನ್ ಕಾಲದಲ್ಲಿ ಮಳಲಿ ಮಠದ ಜಾಗಗಳನ್ನು ಕಟ್ಟೆಮಾರ್ ಕುಟುಂಬಕ್ಕೆ ಕೊಡಲಾಗಿತ್ತು. ಆಗ ಅದರ ತೆರಿಗೆ ರೂಪದಲ್ಲಿ ಆ ಕುಟುಂಬ ಮಠಕ್ಕೆ ವಾರ್ಷಿಕ ಹಣ ಕೊಡ್ತಿತ್ತು. ಇದಕ್ಕೆ ಸಂಬಂಧಿಸಿದ ರಶೀದಿ ನಮ್ಮಲ್ಲಿತ್ತು, ಅದನ್ನ ‌ನಾವು ಹುಡುಕಬೇಕು. ಹೀಗಾಗಿ ಕಟ್ಟೆಮಾರ್ ಜಾಗದಲ್ಲಿ ವೀರಶೈವರ ಮುದ್ರೆ ಇದ್ದ ಕಲ್ಲುಗಳು ಸಿಕ್ಕಿವೆ‌. ಇದರ ಬಗ್ಗೆ ‌ನಮಗೆ ಮೊದಲೇ ಗೊತ್ತಿತ್ತು, ಆದರೆ ಕೆದಕಲು ಹೋಗಿರಲಿಲ್ಲ ಎಂದಿದ್ದಾರೆ.
 

click me!