* ಅಂಬೇಡ್ಕರ್ ಹೆಸರನ್ನು ವಿರೋಧಿಸುವ ಸನಾತನಿಗಳು ಈ ಹಿಂದೆಯೋ ಇದ್ದರು, ಈಗಲೂ ಇದ್ದಾರೆ
* ಡಾ.ಅಂಬೇಡ್ಕರ್ ಸಂವಿಧಾನ ಜನತೆಗೆ ಇನ್ನು ಅರ್ಥವಾಗಿಲ್ಲ
* ಪ್ರತಿಯೊಬ್ಬರು ಸಹ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ
ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ(ಮೇ.27): ಆಂಧ್ರಪ್ರದೇಶದಲ್ಲಿ ಹೊಸದಾಗಿ ರಚನೆಯಾಗಿರುವ ಕೋನಸೀಮಾ ಜಿಲ್ಲೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮಾ ಎಂದು ಮರುನಾಮಕರಣ ಮಾಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಜೈಭೀಮ್ ಸಿನಿಮಾದ ನೈಜ ಹೀರೊ ತಮಿಳುನಾಡು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
undefined
ಗುರುವಾರ ಹಾವೇರಿಯ ಗೆಳೆಯರ ಬಳಗದ ಮಣಿಬಾಯಿ ಲೋಡಾಯಿ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ-ಕರ್ನಾಟಕ, ಹಾವೇರಿ ಜಿಲ್ಲಾ ಸಮಿತಿ “ದಮನಿತರ ಸಮುದಾಯಗಳ ಸಂವಿಧಾನಿಕ ಹಕ್ಕುಗಳು ಮತ್ತು ಸವಾಲುಗಳು” ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಶಿಗ್ಗಾವಿಯಲ್ಲಿ ಮತ್ತೆ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ..!
ಅಂಬೇಡ್ಕರ್ ಅವರ ಹೆಸರನ್ನು ವಿರೋಧಿಸುವ ಸನಾತನಿಗಳು ಈ ಹಿಂದೆಯೋ ಇದ್ದರು, ಈಗಲೂ ಇದ್ದಾರೆ. ಅಂಬೇಡ್ಕರ್ ಅವರ ಹೆಸರನ್ನು ಹೊಸದಾಗಿ ರಚಿಸಿರುವ ಜಿಲ್ಲೆಗೆ ನಾಮಕರಣ ಮಾಡಿರುವುದನ್ನು ವಿರೋಧಿಸಿ ಸಚಿವರು ಹಾಗೂ ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದರೆ ಡಾ.ಅಂಬೇಡ್ಕರ್ ಅವರ ಸಂವಿಧಾನ ಜನತೆಗೆ ಇನ್ನು ಅರ್ಥವಾಗಿಲ್ಲ ಎಂದು ಅವರು ಹೇಳಿದರು.
ಜೈಭೀಮ ಸಿನೇಮಾ ಓಟಿಪಿಯಲ್ಲಿ ಬಿಡುಗಡೆಯಾದ ತರವಾಯು ವಕೀಲರಿಗೆ ಗೌರವ ಹೆಚ್ಚಿತು. ಜೈಭೀಮ ಚಿತ್ರದಿಂದ ನ್ಯಾಯಾಧೀಶರ ಬಗ್ಗೆಯು ಸಹ ಗೌರವಭಾವನೆ ಹೆಚ್ಚಿದೆ. ಮಹಾತ್ಮಾ ಗಾಂಧೀಜಿಯವರು, ಡಾ.ಬಿ.ಆರ್.ಅಂಬೇಡ್ಕರ ಅವರು ವಕೀಲರಾಗಿ ಘನವೆತ್ತ ಕಾರ್ಯಮಾಡಿದರು ಹಣ ಗಳಿಸಲಿಲ್ಲ. ವಕೀಲರು ಹಣಕ್ಕಾಗಿ ಹಾತೊರೆಯಬಾರದು, ನಿತ್ಯ ಸಾವಿರಾರು ಜನ ನ್ಯಾಯಕ್ಕಾಗಿ ಹಾತೋರೆಯುತ್ತಾರೆ. ಅಂತವರಿಗೆ ನ್ಯಾಯಸಿಗಬೇಕು. ನಿಸ್ವಾರ್ಥ ಸೇವೆ ಮಾಡಿ ಸೇವೆಗೆ ತಕ್ಕ ಹಣ ಪಡೆಯಬೇಕೆಂದು ಕೆ. ಚಂದ್ರು ಅವರು ತಿಳಿಸಿದರು.
“ಜೈಭೀಮ” ಚಿತ್ರ ನೋಡಿದ ಅನಂತಪುರದ ಓರ್ವ ಮಹಿಳೆ ಸಹಾಯಕ್ಕಾಗಿ ಚೆನ್ನೈಗೆ ನನ್ನ ಭೇಟಿಯಾಗಲು ಬಂದಿದ್ದಳು. ಅವಳಿಗೆ ಆಶ್ರಯ ನೀಡಿ, ಹಿರಿಯ ವಕೀಲರಿಗೆ ವಕಾಲತ್ತು ವಹಿಸಲು ಅನುವು ಮಾಡಿಕೊಟ್ಟ, ಹಣಕೊಟ್ಟು ಮಹಿಳೆಯನ್ನು ವಾಪಾಸ್ಸು ಊರಿಗೆ ಕಳಿಸಿದ್ದೆ ಎಂದ ತಮ್ಮ ವೃತ್ತಿಯಲ್ಲಿನ ಅನೇಕ ಅನುಭವಗಳನ್ನು ಹಂಚಿಕೊಂಡರು. ತಾವು ವಕೀಲರಾಗಿ ಅಲೆಮಾರಿ ಜನಾಂಗದ ಕಟುಂಬಕ್ಕೆ ನ್ಯಾಯಕೊಡಿಸಿದ ಅನುಭವ ಹಾಗೂ ಎದುರಿಸಿದ ಆತಂಕದ ಕ್ಷಣಗಳನ್ನು ಹಂಚಿಕೊಂಡ ಅವರು, ಪ್ರತಿಯೊಬ್ಬರು ಸಹ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಮಕ್ಕಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಿ, ಬಾಲ್ಯದಲ್ಲಿ ಮಕ್ಕಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಿದರೆ ಅವರು ಉತ್ತಮ ಪ್ರಜೆಗಳಾಗುತ್ತಾರೆ ಎಂದರು.
ಅತ್ಯಾಚಾರಕ್ಕೆ, ದೌರ್ಜನ್ಯಗಳಿಗೆ ಬಲಿಯಾದ ಮಹಿಳೆಗೆ ಸರಕಾರಿ ನೌಕರಿ ಕೊಡಿಸದರು ತುರ್ತು ನ್ಯಾಯದಾನ ಸಾಧ್ಯವಿಲ್ಲ. ಕೂಲಂಕುಶವಾಗಿ ಚಿಂತಿಸಿ, ವಿಶ್ಲೇಷಿಸಿ ತೀರ್ಪು ನೀಡಬೇಕು. ನೀತಿ ಮಾರ್ಗದಲ್ಲಿ ನ್ಯಾಯದಾನಮಾಡಬೇಕೆಂದು ತಮಿಳುನಾಡು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ತಿಳಿಸಿದರು.
KGF-2 ಪ್ರದರ್ಶನ ವೇಳೆ ಗುಂಡಿನ ದಾಳಿ, ಆರೋಪಿ ಅರೆಸ್ಟ್, 1 ತಿಂಗಳಿನಿಂದ ನಡೆದಿತ್ತು ಸರ್ಚ್ ಆಪರೇಷನ್
ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಹಾದಿಮನಿ ಮಾತನಾಡಿ ಸಂವಿಧನವೇ ನಮಗೆ ಧರ್ಮಗ್ರಂಥವಾಗಬೇಕಿದೆ. ತಮ್ಮ ನ್ಯಾಯದಾನದ ಮೂಲಕ ಶೋಷಿತರ ಪರವಾಗಿ ಧ್ವನಿ ಎತ್ತಿರುವ ಚಂದ್ರು ಅವರು ಹೊಸಮುನ್ನುಡಿ ಬರೆದಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಚಂದ್ರಕಾಂತ ಅಂಗಡಿ, ಕೆ.ಹೆಚ್. ಪಾಟೀಲ್, ಬಸವರಾಜ ಹಾದಿಮನಿ, ಎಸ್.ಜಿ. ಹೊನ್ನಪ್ಪನವರ್, ನಿವೃತ್ತ ಪಬ್ಲಿಕ್ ಪ್ರಾಸ್ಯಿಕ್ಯೂಟರ್ ಎಸ್. ವಿ. ಪಾಟೀಲ, ಪ್ರಮುಖರಾದ ಈರಪ್ಪ ಲಮಾಣಿ, ಪ್ರಸನ್ನ ಹಿರೇಮಠ, ಚಂದ್ರಣ್ಣ ಬೇಡರ್, ನಾರಾಯಣ ಕಾಳೆ, ಅಕ್ಷತಾ ಕೆ.ಸಿ. ಮತ್ತಿತರರು ಹಾಜರಿದ್ದರು.