Karnataka Politics : 23 ಕಡೆಯಲ್ಲಿ ಜನಾಶೀರ್ವಾದ ಯಾತ್ರೆಗೆ ಚಾಲನೆ

Published : Dec 20, 2022, 06:07 AM IST
Karnataka Politics :  23 ಕಡೆಯಲ್ಲಿ ಜನಾಶೀರ್ವಾದ ಯಾತ್ರೆಗೆ ಚಾಲನೆ

ಸಾರಾಂಶ

ಪಟ್ಟಣದ 6ನೇ ವಾರ್ಡ್‌ನ ಕಂಠೇನಹಳ್ಳಿಯಲ್ಲಿ ಆರಂಭವಾದ 23 ವಾರ್ಡ್‌ಗಳ ವ್ಯಾಪ್ತಿಯ ಜನಾಶೀರ್ವಾದ ಯಾತ್ರೆಗೆ ಕಾಂಗ್ರೆಸ್‌ ಮುಖಂಡ ಡಿ. ರವಿಶಂಕರ್‌ ಅವರು ಪಟ್ಟಲದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

  ಕೆ.ಆರ್‌.ನಗರ (ಢಿ.20): ಪಟ್ಟಣದ 6ನೇ ವಾರ್ಡ್‌ನ ಕಂಠೇನಹಳ್ಳಿಯಲ್ಲಿ ಆರಂಭವಾದ 23 ವಾರ್ಡ್‌ಗಳ ವ್ಯಾಪ್ತಿಯ ಜನಾಶೀರ್ವಾದ ಯಾತ್ರೆಗೆ ಕಾಂಗ್ರೆಸ್‌ ಮುಖಂಡ ಡಿ. ರವಿಶಂಕರ್‌ ಅವರು ಪಟ್ಟಲದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳ ದುರಾಡಳಿತ ಮತ್ತು ಜನ ವಿರೋಧಿ ನೀತಿಯಿಂದ ಬೇಸತ್ತಿರುವ ಜನರು ಪರ್ಯಾಯವಾಗಿ ಕಾಂಗ್ರೆಸ್‌ಗೆ ಅಧಿಕಾರದ ಚುಕ್ಕಾಣಿ ನೀಡಲು ನಿರ್ಧರಿಸಿದ್ದು, ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಲಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹ ಮತದಾರರ ಮನೆಗಳಿಗೆ ಹೋಗಿ ದೇಶ ಮತ್ತು ರಾಜ್ಯಕ್ಕೆ ಕಾಂಗ್ರೆಸ್‌ ನೀಡಿರುವ ಕೊಡುಗೆ ಹಾಗೂ ಮಾಡಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ತಿಳಿಸಿ ಪಕ್ಷದ ಪರವಾಗಿ ಬೆಂಬಲ ಯಾಚಿಸಬೇಕೆಂದು ಅವರು ಸಲಹೆ ನೀಡಿದರು.

Mandya: ಡಿ.24ಕ್ಕೆ ಮೇಲುಕೋಟೆಗೆ ಪಂಚರತ್ನ ರಥಯಾತ್ರೆ: ಶಾಸಕ ಸಿ.ಎಸ್‌.ಪುಟ್ಟರಾಜು

ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್‌. ಕುಮಾರ್‌ ಮಾತನಾಡಿ, ಕ್ಷೇತ್ರಾದ್ಯಂತ ಕಾಂಗ್ರೆಸ್‌ ಪರವಾದ ಅಲೆ ಇದ್ದು, ಜನರು ಪಕ್ಷವನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹ ಅತ್ಯಂತ ಪ್ರಾಮಾಣಿಕವಾಗಿ ದುಡಿದು ರವಿಶಂಕರ್‌ ಅವರ ಗೆಲುವಿಗೆ ಟೊಂಕ ಕಟ್ಟಿನಿಂತಿದ್ದು, ಇದಕ್ಕೆ ಮತದಾರ ಪ್ರಭುಗಳು ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್‌ ಎಸ್ಟಿವಿಭಾಗದ ಉಪಾಧ್ಯಕ್ಷ ಶ್ರೀನಿವಾಸ್‌, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಕೆ.ಜಿ. ಸುಬ್ರಹ್ಮಣ್ಯ, ಪಾರ್ವತಿ ನಾಗರಾಜು, ಪ್ರಕಾಶ್‌, ಗೀತಾ ಮಹೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರಸ್ವಾಮಿ, ಸದಸ್ಯರಾದ ವಸಂತಮ್ಮ, ಜಾವೀದ್‌ಪಾಷಾ, ಸೈಯದ್‌ಸಿದ್ದಿಕ್‌, ಶಿವುನಾಯಕ್‌, ನಟರಾಜು, ಅಶ್ವಿನಿ ಪುಟ್ಟರಾಜು, ಮಾಜಿ ಸದಸ್ಯರಾದ ಕೆ.ಎಲ್‌. ಕುಮಾರ್‌, ಗುರುಶಂಕರ್‌, ಕೆ. ವಿನಯ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌. ಮಹದೇವ್‌, ಉದಯಶಂಕರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಎಂ.ಜೆ. ರಮೇಶ್‌, ನಗರ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುಕೆಂಚಿ, ಕಾರ್ಯದರ್ಶಿ ರಾಜೇಗೌಡ, ವಕ್ತಾರ ಸೈಯದ್‌ಜಾಬೀರ್‌, ತಾಲೂಕು ಒಕ್ಕಲಿಗರ ಸಂಘದ ಹಿರಿಯ ಉಪಾಧ್ಯಕ್ಷ ಎಚ್‌.ಪಿ. ಪರಶುರಾಂ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಗ್ರಾಪಂ ಮಾಜಿ ಸದಸ್ಯ ಎಂ.ಎಸ್‌. ಅನಂತ್‌, ಎಪಿಎಂಸಿ ಮಾಜಿ ನಿರ್ದೇಶಕ ಎಲ್‌.ಪಿ. ರವಿಕುಮಾರ್‌ ಇದ್ದರು.

ಡಿಕೆಶಿ ವಿರುದ್ಧ ವಾಗ್ದಾಳಿ

ರಾಮ​ನ​ಗರ (ಡಿ.19): ನಾನು ರಾಜ​ಕಾ​ರ​ಣ​ದಲ್ಲಿ ಬೇರೆ​ಯ​ವ​ರಂತೆ ಗಣಿ​ಗಾ​ರಿಕೆ ಮಾಡಿ ಸಂಪತ್ತು ಲೂಟಿ ಮಾಡಿಲ್ಲ. ಶಾಪಿಂಗ್‌ ಮಾಲ್‌, ಶಿಕ್ಷಣ ಸಂಸ್ಥೆ​ಗ​ಳನ್ನು ಕಟ್ಟಲು ಹಣ ಮಾಡ​ಲಿಲ್ಲ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಪರೋ​ಕ್ಷ​ವಾಗಿ ವಾಗ್ದಾಳಿ ನಡೆ​ಸಿ​ದರು. ಪಂಚ​ರತ್ನ ರಥ​ಯಾತ್ರೆಯಲ್ಲಿ ಆಗ​ಮಿಸಿ ಹಾರೋ​ಹ​ಳ್ಳಿ​ - ಮರ​ಳ​ವಾ​ಡಿಯಲ್ಲಿ ಬಹಿ​ರಂಗ ಸಭೆ​ಯಲ್ಲಿ ಮಾತ​ನಾ​ಡಿದ ಅವರು, ರಾಜ​ಕಾ​ರ​ಣಕ್ಕೆ ಬರು​ವು​ದಕ್ಕೂ ಮುಂಚೆ ಬಿಡ​ದಿಯ ಕೇತ​ಗಾ​ನ​ಹ​ಳ್ಳಿ​ಯಲ್ಲಿ ಕೃಷಿ ಮಾಡಿ ಸಂಪಾ​ದನೆ ಮಾಡಿ​ದಷ್ಟೇ ಆಸ್ತಿ ನನ್ನದು. 

ಶಾಪಿಂಗ್‌ ಮಾಲ್‌, ಕಟ್ಟಡ ಕಟ್ಟಲು ರಾಜ​ಕಾ​ರ​ಣ​ದಲ್ಲಿ ಹಣ ಮಾಡಿಲ್ಲ ಎಂದ​ರು. ನಾನು ಯಾವ ರೀತಿ ಬದು​ಕಿ​ದ್ದೇನೆ ಎಂಬು​ದನ್ನು ನೀವೇ ನೊಂಡಿ​ದ್ದೀರಿ. ಇಲ್ಲಿ ಪ್ರತಿ​ಯೊಂದು ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳಿಗೂ ಅಡ್ಡಿ ಮಾಡು​ತ್ತಾರೆ. ಆದರೂ ನಿಮ್ಮ ಕಷ್ಟಮತ್ತು ಸಮ​ಸ್ಯೆ​ಗ​ಳಿಗೆ ನಾವಿ​ದ್ದೇವೆ. ನಿಮ್ಮ ಮಡಿ​ಲಿಗೆ ನಿಖಿಲ್‌ ನನ್ನು ಹಾಕಿ​ದ್ದೇನೆ. ಅವ​ನನ್ನು ಯಾವ ರೀತಿ​ಯಲ್ಲಿ ಬೆಳೆ​ಸು​ತ್ತೀರಾ ಎಂಬುದು ನಿಮಗೆ ಬಿಟ್ಟಿದ್ದು. ನನ್ನ ಹಾಗೂ ನಮ್ಮ ತಂದೆ​ಯ​ವ​ರಂತೆ ಅವ​ನನ್ನು ನಿಮ್ಮ ಮನೆ ಮಗ​ನಾಗಿ ಬೆಳೆ​ಸಿ ಎಂದು ಮನವಿ ಮಾಡಿ​ದ​ರು.

ರಾಮ​ನ​ಗರ ಕ್ಷೇತ್ರ​ದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಶಕ್ತಿ ಪ್ರದ​ರ್ಶನ

ನನ್ನ ಅಧಿ​ಕಾರ ದುರ್ಬಳಸಿ​ಕೊಂಡಿಲ್ಲ: ಈ ರಾಜ್ಯದಲ್ಲಿ ಮುಖ್ಯ​ಮಂತ್ರಿ​ಯಾ​ಗಿ​ದ್ದ​ವರ ಹಲವರ ಮಕ್ಕಳು ಅಧಿ​ಕಾ​ರ​ವನ್ನು ಯಾವರೀತಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬು​ದನ್ನು ನೋಡಿ​ದ್ದೀರಿ. ಆದರೆ ನಿಖಿಲ್ ಕುಮಾರಸ್ವಾಮಿ ಯಾವತ್ತೂ ಸಹ ನಾನು ಮುಖ್ಯ​ಮಂತ್ರಿ ಆಗಿ​ದ್ದಾಗ ಬರಲಿಲ್ಲ. ಆ ರೀತಿಯಲ್ಲಿ ನನ್ನ ಮಗ​ನನ್ನು ಬೆಳೆ​ಸಿ​ದ್ದೇನೆ. ಅವ​ನನ್ನು ಬೆಳೆ​ಸುವುದು ನಿಮ್ಮ ಜವಾ​ಬ್ದಾರಿ ಎಂದು ಹೇಳಿ​ದ​ರು. ಮತ್ತೊಂದು ಪಕ್ಷದ ಜೊತೆಗೆ ಸೇರಿ ಕೆಲಸ ಮಾಡಲು ಆಗುವು​ದಿಲ್ಲ. ಈಗಾ​ಗಲೇ ಬಿಜೆ​ಪಿ​ಯ​ವರು ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ. ನೀವು ಕಟ್ಟುವ ತೆರಿಗೆ ಹಣ ಲೂಟಿ ಆಗದಂತೆ ಕಾಪಾಡುತ್ತೇನೆ. ಈ ಬಾರಿ ಸ್ವತಂತ್ರವಾಗಿ ಕೆಲಸ ಮಾಡಲು ಸ್ಪಷ್ಟಬಹುಮತ ನೀಡು​ವಂತೆ ಕುಮಾ​ರ​ಸ್ವಾಮಿ ಜನ​ರಲ್ಲಿ ಕೋರಿ​ದರು.

PREV
Read more Articles on
click me!

Recommended Stories

ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?
Hubballi-Ankola National Highway ಅತಿಕ್ರಮಣದ ಪರಿಣಾಮ, ಮೃತ್ಯಕೂಪವಾದ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ!