ಉಡುಪಿ ಜಿಲ್ಲೆಯಲ್ಲಿ ಜನೌಷಧಿಗಳನ್ನು ಶಿಫಾರಸು ಮಾಡುವ ವೈದ್ಯರ ಸಂಖ್ಯೆ ಹೆಚ್ಚಿದ್ದು, ಉಡುಪಿ ಜಿಲ್ಲೆ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ರಾಜ್ಯದ ಜನೌಷಧಿ ನೋಡಲ್ ಅಧಿಕಾರಿ ಡಾ.ಅನಿಲಾ ಮಾಹಿತಿ ನೀಡಿದ್ದಾರೆ.
ಬ್ರಹ್ಮಾವರ (ಮಾ.08): ಖಾಸಗಿ ವೈದ್ಯರು ತಮ್ಮ ರೋಗಿಗಳಿಗೆ ಸರ್ಕಾರಿ ಜನೌಷಧಿ ಕೇಂದ್ರಗಳ ಔಷಧಿಗಳನ್ನು ಶಿಫಾರಸು ಮಾಡುವುದಿಲ್ಲ ಎಂಬ ದೂರಿದೆ.
ಆದರೆ, ಉಡುಪಿ ಜಿಲ್ಲೆಯಲ್ಲಿ ಜನೌಷಧಿಗಳನ್ನು ಶಿಫಾರಸು ಮಾಡುವ ವೈದ್ಯರ ಸಂಖ್ಯೆ ಹೆಚ್ಚಿದ್ದು, ಉಡುಪಿ ಜಿಲ್ಲೆ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ರಾಜ್ಯದ ಜನೌಷಧಿ ನೋಡಲ್ ಅಧಿಕಾರಿ ಡಾ.ಅನಿಲಾ ತಿಳಿಸಿದ್ದಾರೆ.
undefined
ಮಂಗಳೂರು ವೈದ್ಯ ಪದ್ಮನಾಭ ಕಾಮತ್ ಶ್ಲಾಘಿಸಿದ ಪ್ರಧಾನಿ ಮೋದಿ ..
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು ಜನೌಷಧಿ ಕೇಂದ್ರಗಳ ಸಂಖ್ಯೆ, ಜನೌಷಧಿಗಳ ಮಾರಾಟ ಪ್ರಮಾಣ ಮತ್ತು ಅತ್ಯುತ್ತಮ ಜನೌಷಧಿ ಕೇಂದ್ರಗಳಿಂದಾಗಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.
ಅತ್ಯುತ್ತಮ ಜನೌಷಧಿ ಕೇಂದ್ರಗಳು ಮತ್ತು ಜನೌಷಧಿಗೆ ಶಿಫಾರಸು ಮಾಡುವ ವೈದ್ಯರ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.