ರಾಸಲೀಲೆ ಸಿಡಿಯಿಂದ ಕೆಲವರಿಗೆ ಕರೆಂಟ್‌ ಹೊಡೆಯುತ್ತಿದೆ: ಎಂದ ಮುಖಂಡ

By Kannadaprabha NewsFirst Published Mar 7, 2021, 4:06 PM IST
Highlights

ರಾಜ್ಯದಲ್ಲಿ ಸದ್ಯ ರಾಸಲೀಲೆ ಸಿ ಡಿ ಪ್ರಕರಣಗಳ  ಸದ್ದು ಜೋರಾಗಿದ್ದು ಕೆಲವರಿಗೆ ಕರೆಂಟ್ ಹೊಡೆಯುತ್ತಿದೆ ಎಂದು ಮುಖಂಡರೋರ್ವರು ವ್ಯಂಗ್ಯವಾಡಿದ್ದಾರೆ. 

 ಶ್ರೀರಂಗಪಟ್ಟಣ (ಮಾ.07):  ರಾಸಲೀಲೆ ಸಿಡಿ ವಿಷಯವಾಗಿ ಇದೀಗ ಯಾರ್ಯಾರಿಗೆ ಕರೆಂಟ್‌ ಹೊಡೆಯುತ್ತಿದೆಯೋ ಅವರೆಲ್ಲರೂ ತಡೆಕೋರಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ  ಟೀಕಿಸಿದ್ದಾರೆ.

ತಾಲೂಕಿನ ಮಹದೇವಪುರ ಗ್ರಾಮದಲ್ಲಿ 90 ಲಕ್ಷ ವೆಚ್ಚದ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಬಾಂಬೆಗೆ ತೆರಳಿದ್ದವರು ಸದ್ಯ ಸಿಡಿ ಬಹಿರಂಗಪಡಿಸದಂತೆ ತಡೆಕೋರಿ ನ್ಯಾಯಾಲಯ ಮೆಟ್ಟಿಲೇರಿರುವುದು ಬಹಳ ಆಶ್ಚರ್ಯ ತಂದಿದೆ ಎಂದರು.

ಜಾರಕಿಹೊಳಿ ರಾಸಲೀಲೆ ಸಿ.ಡಿ. ಕೇಸ್ ವಾಪಸ್ ಪಡೆದಿದ್ಯಾಕೆ? ಕಾರಣ ಕೊಟ್ಟ ಕಲ್ಲಹಳ್ಳಿ ...

ಜನರಿಂದ ಆಯ್ಕೆಯಾದವರು ಸಮಾಜ ಸೇವೆಗೆ ತೊಡಗಿಕೊಂಡು ಜನತೆಯ ಹಿತಕಾಯಬೇಕು. ರಾಸಲೀಲೆಯಂತಹ ಪ್ರಕರಣದಲ್ಲಿ ಭಾಗಿಯಾಗುವುದು ಸರಿಯಲ್ಲ. ತಡೆಕೋರಿ ನ್ಯಾಯಾಲಯ ಮೊರೆ ಹೋಗುತ್ತಿರುವುದು ಜನಪ್ರತಿನಿಧಿಗಳಿಗೆ ತಲೆ ತಗ್ಗಿಸುವ ವಿಷಯವಾಗಿದೆ. ಜೆಡಿಎಸ್‌ ಪಕ್ಷದಿಂದ ಗೆದ್ದು ತಮ್ಮ ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹವೆಸಗಿ ಹೋಗಿರುವವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆಇದೆ. ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಗಳು ಕೇಳಿ ಬಂದ ಹಿನ್ನೆಲೆ ಸ್ಥಳದಲ್ಲೇ ಅಧಿಕಾರಿಗೆ ಕರೆ ಮಾಡಿ ಗ್ರಾಮದಲ್ಲಿನ ಸಮಸ್ಯೆಗಳನ್ನು ಕೂಡಲೇ ನಿವಾರಿಸಿ ಇಲ್ಲಾ ಕೆಲಸ ಬಿಟ್ಟು ಮನೆಗೆ ತೆರಳುವಂತೆ ಕಟುವಾಗಿ ಎಚ್ಚರಿಕೆ ನೀಡಿದರು.

ಬಳಿಕ ಅವರ ಕನಸಿನ ಯೋಜನೆಯಾದ ಬಹುಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲಿಸಿದರು. ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು.

ಇದೇ ಮೊದಲ ಬಾರಿಗೆ ವಿಶಿಷ್ಟರೀತಿಯ ಪೈಪ್‌ಗಳನ್ನು ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ಪೈಪ್‌ ಗುಣಮಟ್ಟದ ಬಗ್ಗೆ ಸಂಬಂಧಪಟ್ಟಅಧಿಕಾರಿಗಳಿಂದ ಮಾಹಿತಿ ಪಡೆದರು.

click me!