ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಜಮಖಂಡಿ ಬಂದ್: ನೀರಸ ಪ್ರತಿಕ್ರಿಯೆ

By Web Desk  |  First Published Oct 3, 2019, 10:29 AM IST

ಜಮಖಂಡಿ ಪಟ್ಟಣವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ| ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ| ಬಸ್ ಸಂಚಾರ ಸ್ಥಗಿತ| ಎಂದಿನಂತೆ ಅಟೋ ಸಹಿತ ಹಾಗೂ ಖಾಸಗಿ ವಾಹನಗಳ ಸಂಚಾರ| ಶಾಲಾ ಕಾಲೇಜುಗಳೂ ಕೂಡ ಎಂದಿನಂತೆ ಆರಂಭವಾಗಿವೆ| ಬೆಳಗ್ಗೆ 11 ಗಂಟೆಗೆ ನಗರದ ಹನುಮಾನ ವೃತ್ತದಿಂದ ದೇಸಾಯಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ| 


ಬಾಗಲಕೋಟೆ(ಅ.3): ಜಿಲ್ಲೆಯ ಜಮಖಂಡಿ ಪಟ್ಟಣವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಜಮಖಂಡಿ ಬಂದ್ ಗೆ ಕರೆ ನೀಡಿವೆ. ಆದರೆ, ಬಂದ್  ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಹೂವಿನಹಡಗಲಿ ಜಿಲ್ಲೆಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ

Tap to resize

Latest Videos

ನಗರದಲ್ಲಿ  ಬಸ್ ಸಂಚಾರ ಸ್ಥಗಿತವಾಗಿದೆ. ಆದರೆ ಎಂದಿನಂತೆ ಅಟೋ ಸಹಿತ ಹಾಗೂ ಖಾಸಗಿ ವಾಹನಗಳು ಓಡಾಡುತ್ತಿವೆ. ಶಾಲಾ ಕಾಲೇಜುಗಳೂ ಕೂಡ ಎಂದಿನಂತೆ ಆರಂಭವಾಗಿವೆ. 

11 ಗಂಟೆಗೆ ಪ್ರತಿಭಟನಾ ರ‍್ಯಾಲಿ

ಬೆಳಗ್ಗೆ 11 ಗಂಟೆಗೆ ನಗರದ ಹನುಮಾನ ವೃತ್ತದಿಂದ ದೇಸಾಯಿ ವೃತ್ತದವರೆಗೆ ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. 

'ಬಸವನಬಾಗೇವಾಡಿಯನ್ನೂ ಜಿಲ್ಲಾ ಕೇಂದ್ರ ಮಾಡಿ'

ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರ(ಹೊಸಪೇಟೆ) ಜಿಲ್ಲೆ ರಚನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ರಾಜ್ಯದ ಕೆಲವಡೆ ಜಿಲ್ಲೆ ರಚನೆ ಮಾಡಿ ಎಂದು ಕೂಗು ಕೇಳಿ ಬರುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಇಂಡಿ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಲಾಗಿದೆ. 

click me!