ಕೇಂದ್ರ ಬಿಜೆಪಿ ವಿರುದ್ಧ ಶಾಸಕ ವಾಗ್ದಾಳಿ

Published : Oct 03, 2019, 10:15 AM IST
ಕೇಂದ್ರ ಬಿಜೆಪಿ ವಿರುದ್ಧ ಶಾಸಕ  ವಾಗ್ದಾಳಿ

ಸಾರಾಂಶ

ಕೇಂದ್ರದ ವಿರುದ್ಧ ಶಾಸಕ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪ್ರವಾಹ ಪೀಡಿತರಿಗೆ ಪರಿಹಾರ ನೀಡದೇ ಪರಿತಪಿಸುವಂತೆ ಮಾಡಿದ್ದಾರೆ ಎಂದರು. 

ಪಾಂಡವಪುರ [.03]: ರಾಜ್ಯದಲ್ಲಿ ಪ್ರವಾಹ ಬಂದು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದ ಜನಸಾಮಾನ್ಯರು ಗೋಳಾಡುತ್ತಿದ್ದರೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದುವರೆವಿಗೂ ಯಾವುದೇ ಪರಿಹಾರ ನೀಡದೇ ಪ್ರವಾಹ ಪೀಡಿತರು ಪರಿತಪಿಸುವಂತಾಗಿದೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.

ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಸಾರ್ವಜನಿಕರ ಅಹವಾಲು ಹಾಗೂ ಕುಂದುಕೊರತೆ ಆಲಿಸಿದ ಬಳಿಕ ಮಾತನಾಡಿ, ನನ್ನ ಕ್ಷೇತ್ರವೂ ಸೇರಿದಂತೆ ರಾಜ್ಯದಲ್ಲಿ ಲಕ್ಷಾಂತರ ಮನೆಗಳು ಪ್ರವಾಹದಿಂದ ಜಖಂಗೊಂಡಿವೆ, ಅವರ ಪುನರ್ವಸತಿಗೆ ಇದುವರೆಗೂ ಸೂಕ್ತ ಪರಿಹಾರ ನೀಡದೇ ಪ್ರವಾಹ ಪೀಡಿತ ಜನರು ಇನ್ನೂ ಸಹ ದೇವಾಲಯಗಳಲ್ಲಿ ವಾಸಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ರಾಜ್ಯದ 25 ಮಂದಿ ಸಂಸದರೂ ಸೇರಿದಂತೆ ಬಿಜೆಪಿಯ ಮಂತ್ರಿ ಮಹೋದಯರು, ಹಾಗೂ ರಾಜ್ಯ ಮುಖಂಡರುಗಳು, ಅವರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಪಂ ಉಪಾಧ್ಯಕ್ಷ ಹೆಜ್ಜಿಗೆ ಆರ್‌.ಗೋವಿಂದರಾಜನ್‌, ಸೇರಿದಂತೆ ಹಲವಾರು ಮುಖಂಡರುಗಳು ಹಾಜರಿದ್ದರು.

PREV
click me!

Recommended Stories

ಗಣಿನಾಡಲ್ಲಿ ರೆಡ್ಡಿಗಳ ರಕ್ತಚರಿತ್ರೆ: ಜನಾರ್ದನ ರೆಡ್ಡಿ ತಲೆಗೆ ಗುರಿ ಇಟ್ಟಿದ್ದಾರಾ ಬಿಹಾರದ ರೌಡಿಗಳು? ಬಳ್ಳಾರಿಯಲ್ಲಿ ಬುಲೆಟ್ ಸದ್ದು!
ಗಲಾಟೆ ಪ್ರಕರಣದಲ್ಲಿ ಗುಂಡಿನ ದಾಳಿ, ತನ್ನ ಹತ್ಯೆಗೆ ಯತ್ನ ಎಂದು ಆರೋಪಿಸಿದ ಜನಾರ್ಧನ ರೆಡ್ಡಿ