ಐವರು ಲಿಂಗಾಯಿತರು ಯಾವ ಪಕ್ಷದಿಂದ ಸಿಎಂ ಆಗಿದ್ರು? ದೇವೇಗೌಡರಿಗೆ ಪ್ರಶ್ನೆ

Published : Aug 14, 2018, 03:15 PM ISTUpdated : Sep 09, 2018, 08:56 PM IST
ಐವರು ಲಿಂಗಾಯಿತರು ಯಾವ ಪಕ್ಷದಿಂದ ಸಿಎಂ ಆಗಿದ್ರು? ದೇವೇಗೌಡರಿಗೆ ಪ್ರಶ್ನೆ

ಸಾರಾಂಶ

ಐದು ಜನ ಲಿಂಗಾಯತರು ಮುಖ್ಯಮಂತ್ರಿಗಳಾಗಿದ್ದು ಯಾವ ಪಕ್ಷದಿಂದ ದೇವೇಗೌಡರಿಗೆ ಗೊತ್ತಿಲ್ವಾ? ಎಂದು ಮಾಜಿ ಸಿಎಂ, ಬಿಜೆಪಿ ನಾಯಕ ಜಗದೀಶ ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿ(ಆ.14) ಕಾಂಗ್ರೆಸ್-ಜೆಡಿಎಸ್ ವಿರುದ್ಧ ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದ ಶೆಟ್ಟರ್, ಉತ್ತರ ಕರ್ನಾಟಕ ಹಿಂದುಳಿಯಲು ಜೆಡಿಎಸ್ ಕಾಂಗ್ರೆಸ್ ಕಾರಣ. ರಾಜ್ಯದಲ್ಲಿ ಅತಿಹೆಚ್ಚು ಕಾಲ ಆಳ್ವಿಕೆ ನಡೆಸಿದ್ದೇ ಅವರು. ಆದರೆ ಲಿಂಗಾಯುತ ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದಾರೆ ಎಂದು ಹೇಳುತ್ತಾರೆ. ಈ ಮೂಲಕ ಜನರ ದಾರಿ ತಪ್ಪಿಸುವೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಲಿಂಗಾಯತರು- ಒಕ್ಕಲಿಗರು ಅಂತ ಬೇರೆ ಮಾಡುವುದು ಸರಿಯಲ್ಲ. ಈ ದೇಶವನ್ನು ಹಾಳುಮಾಡಿದ್ದು ಕಾಂಗ್ರೆಸ್, ರಾಜ್ಯವನ್ನು ಹಾಳುಮಾಡಿದ್ದು ಕಾಂಗ್ರೆಸ್. ಈಗ ಅವರ ಜೊತೆ ಸೇರಿ ಸರ್ಕಾರ ನಡೆಸುತ್ತಿದೀರಿ ಎಂದು ದೂರಿದರು.

ಉತ್ತರ ಕರ್ನಾಟಕದ ಸಿಎಂ ಆಗಿ ಗುರುತಿಸಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ಕೇವಲ ಹೇಳಿಕೆ ಮಾತ್ರ ನೀಡುತ್ತಿದ್ದಾರೆ.ಯಾವುದೇ ಅಭಿವೃದ್ಧಿ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡುವದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಈಗ ಬೆಳಗಾವಿಯಲ್ಲಿದ್ದ ಈಗ ಅಲ್ಲಿದ್ದ ಕೆ-ಶಿಪ್ ಕಚೇರಿಯನ್ನ ಹಾಸನಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ತೀರ್ಪು ನಮ್ಮ ಪರವಾಗಿ ಬರುವ ನಿರೀಕ್ಷೆ ಇದೆ. ನಮ್ಮ ವಕೀಲರು ಸಮರ್ಥ ವಾದ ಮಂಡನೆ ಮಾಡಿದ್ದಾರೆ. ನಮಗೆ ವಿಶ್ವಾಸ ಇದೆ. ರಾಜ್ಯದ ಏರ್ ಶೋ ಸ್ಥಳಗಳಲ್ಲಿ ಮಾಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಕೇಂದ್ರ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಆದರೆ ರಾಜ್ಯ ಸರಕಾರ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

 

PREV
click me!

Recommended Stories

BREAKING: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಪುತ್ರನ ಕಾರ್ಖಾನೆಗೆ ಮಶಿನ್ ತರುವಾಗ ದುರಂತ; ವಿದ್ಯುತ್ ಸ್ಪರ್ಶಿಸಿ ಯುವಕ ಸಾವು
ಪಲ್ಲವಿ ಕಗ್ಗಲ್ ದುರಂತ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನೇಮಕಾತಿ ವಿಳಂಬದ ಸುದ್ದಿ ಸುಳ್ಳು ಎಂದ ಕಮಿಷನರ್!