ಶಾಮನೂರು ಶಿವಶಂಕರಪ್ಪ ಅವರಿಗೆ ಲಾಟರಿ ಹೊಡೆದಿತ್ತಂತೆ!

Published : Aug 13, 2018, 07:19 PM ISTUpdated : Sep 09, 2018, 10:21 PM IST
ಶಾಮನೂರು ಶಿವಶಂಕರಪ್ಪ ಅವರಿಗೆ ಲಾಟರಿ ಹೊಡೆದಿತ್ತಂತೆ!

ಸಾರಾಂಶ

ಅತೀ ದುಖ‌: ಆದಾಗ ಅಥವಾ ಸಂತೋಷವಾದಾಗ ಕಣ್ಣಲ್ಲಿ ನೀರು ಬರುತ್ತೆ. ನಮ್ಮ ಮುಖ್ಯಮಂತ್ರಿ ರೈತರಿಗೆ ಆದ ಕಷ್ಟಕ್ಕೆ ಕಣ್ಣಲ್ಲಿ ನೀರು ಹಾಕಿದ್ದಾರೆ. ಕೆಲವರಿಗೆ ಅಂತ:ಕರಣ ಇರಲ್ಲ, ನಮ್ಮ ಸಿಎಂ ಹಾಗಿಲ್ಲ ಎಂದು ತೋಟಗಾರಿಕೆ ಇಲಾಖೆ ಸಚಿವ ಎಂ ಸಿ ಮನಗೂಳಿ ಹೇಳಿದ್ದಾರೆ.

ಧಾರವಾಡ[ಆ.13]  ಯಾವ ಸಿಎಂ ರೈತರ ಸಾಲ‌ ಮನ್ನಾ ಮಾಡಿದ್ದರು. ಹೆರಿಗೆ ಸವಲತ್ತು ಕೊಟ್ಟಿದ್ದರು. ಜನರು ಗಣನೆಗೆ ಅದನ್ನ ತೆಗೆದುಕೊಂಡಿಲ್ಲ ಎಂದು ತೋಟಗಾರಿಕೆ ಇಲಾಖೆ ಸಚಿವ ಎಂ ಸಿ ಮನಗೂಳಿ ಹೇಳಿದ್ದಾರೆ.

ಯಡಿಯೂರಪ್ಪ ಬೇರೆ ಪಕ್ಷದ ಬಗ್ಗೆ ಮಾತನಾಡ್ತಾರೆ, ಅವರು ತಮ್ಮ ಪಕ್ಷದ ದುರಸ್ತಿ  ಮಾಡಲಿ ಎಂದ ಸಚಿವರು ನಮ್ಮ ಸರ್ಕಾರ 5 ವರ್ಷ ಪೂರೈಸುತ್ತೆ, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲ ಸಚಿವರು ತಮ್ಮ ತಮ್ಮ ಇಲಾಖೆಯ ಅಭಿವೃದ್ಧಿ ಕೆಲಸ ಮಾಡುತಿದ್ದಾರೆ. ಉತ್ತರ ಕರ್ನಾಟಕಕ್ಕೆ ಏನು ಅನ್ಯಾಯವಾಗಿಲ್ಲ, ಇದು ಬಿಜೆಪಿಯ ರಾಜಕೀಯ ಗಿಮಿಕ್  ಎಂದು ಆರೋಪಿಸಿದ್ದಾರೆ.

ಹಿಂದಿನ ಯೋಜನೆಗಳನ್ನು ನಾವು ಕಟ್ ಮಾಡಿಲ್ಲ, ಎಲ್ಲ ಜಾರಿಗೆ ತರುವ ಕೆಲಸ ಮಾಡುತಿದ್ದೇವೆ. ಮುಂದಿನ ಲೋಕಸಭಾ ಚುನಾವಣೆ ಮೈತ್ರಿ‌ ಬಗ್ಗೆ ಹಿರಿಯರು ತೀರ್ಮಾನ ಮಾಡುತ್ತಾರೆ ಎಂದರು.

ತೋಟಗಾರಿಕೆ ಇಲಾಖೆ ಸಚಿವ ಸ್ಥಾನ ಅತ್ಯಂತ ಹಿರಿಯರಿಗೆ ಯಾಕೆ ಕೊಡಲಾಗುತ್ತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅದು ಲಾಟರಿ ಹೊಡದಿದೆ, ಶಾಮನೂರ ಶಿವಶಂಕರಪ್ಪನವರಿಗೂ ಲಾಟರಿ ಹೊಡೆದಿತ್ತು ಎಂದು ನಕ್ಕು ಸುಮ್ಮನಾದರು.

PREV
click me!

Recommended Stories

BREAKING: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಪುತ್ರನ ಕಾರ್ಖಾನೆಗೆ ಮಶಿನ್ ತರುವಾಗ ದುರಂತ; ವಿದ್ಯುತ್ ಸ್ಪರ್ಶಿಸಿ ಯುವಕ ಸಾವು
ಪಲ್ಲವಿ ಕಗ್ಗಲ್ ದುರಂತ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನೇಮಕಾತಿ ವಿಳಂಬದ ಸುದ್ದಿ ಸುಳ್ಳು ಎಂದ ಕಮಿಷನರ್!