ದೇವರಾಜ ಮಾರುಕಟ್ಟೆ ಕೆಡುವುದು ಸರಿಯಲ್ಲ: ಯದುವೀರ್‌

Kannadaprabha News   | Asianet News
Published : Feb 16, 2020, 02:58 PM ISTUpdated : Feb 16, 2020, 02:59 PM IST
ದೇವರಾಜ ಮಾರುಕಟ್ಟೆ ಕೆಡುವುದು ಸರಿಯಲ್ಲ: ಯದುವೀರ್‌

ಸಾರಾಂಶ

ನಗರದ ಪ್ರತಿಷ್ಠಿತ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಕೆಡವಲು ನಗರ ಪಾಲಿಕೆ ತೀರ್ಮಾನಿಸಿರುವ ಕ್ರಮ ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.  

ಮೈಸೂರು(ಫೆ.16): ನಗರದ ಪ್ರತಿಷ್ಠಿತ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಕೆಡವಲು ನಗರ ಪಾಲಿಕೆ ತೀರ್ಮಾನಿಸಿರುವ ಕ್ರಮ ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ದೇವರಾಜ ಮಾರುಕಟ್ಟೆಕೆಡವಬೇಕು ಎಂದು ತಜ್ಞರ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದೆ. ಮೇಯರ್‌ ಮತ್ತು ನಗರ ಪಾಲಿಕೆ ಆಯುಕ್ತರಿಗೂ ಸರಿಯಾದ ಜ್ಞಾನವಿಲ್ಲ. ದೇವರಾಜ ಮಾರುಕಟ್ಟೆಸುಣ್ಣ ಮತ್ತು ಗಾರೆ ಬಳಸಿ ನಿರ್ಮಿಸಿದ ಪಾರಂಪರಿಕ ಕಟ್ಟಡ ಎಂದಿದ್ದಾರೆ.

ಪಾವಗಡಕ್ಕೆ ಕರ್ನಾಟಕದ ಪಾಲಿನ ನೀರು..!

ದೇವರಾಜ ಮಾರುಕಟ್ಟೆಯ ವಾಸ್ತವ ಸ್ಥಿತಿ ಪರಿಶೀಲಿಸಲು ನೇಮಿಸಿದ್ದ ತಜ್ಞರ ಸಮಿತಿಯಲ್ಲಿನ ಪ್ರೊ. ರಂಗರಾಜು ಅವರನ್ನು ಹೊರತುಪಡಿಸಿ ಬೇರೆ ಯಾರೂ ನುರಿತ ಪಾರಂಪರಿಕ ತಜ್ಞರು ಇರಲಿಲ್ಲ. ಹಾಗಾಗಿ ದೇವರಾಜ ಮಾರುಕಟ್ಟೆಕೆಡವಬೇಕು ಎಂದು ತಜ್ಞರ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದೆ ಎಂದರು.

ದೇವರಾಜ ಮಾರುಕಟ್ಟೆವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಹಾಗಾಗಿ ಜಿಲ್ಲಾಡಳಿತ ದೇವರಾಜ ಮಾರುಕಟ್ಟೆಉಳಿಸಲು ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದರು.

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ