ಮಾಂಸಾಹಾರ ಪ್ರಿಯರಿಗೆ ಸಂತಸದ ಸುದ್ದಿ: ನೀವು ಇದ್ದಲ್ಲಿಗೆ ಬರಲಿದೆ ರುಚಿ ರುಚಿಯಾದ ಖಾದ್ಯ

Published : Feb 16, 2020, 02:58 PM ISTUpdated : Feb 16, 2020, 03:04 PM IST
ಮಾಂಸಾಹಾರ ಪ್ರಿಯರಿಗೆ ಸಂತಸದ ಸುದ್ದಿ: ನೀವು ಇದ್ದಲ್ಲಿಗೆ ಬರಲಿದೆ ರುಚಿ ರುಚಿಯಾದ ಖಾದ್ಯ

ಸಾರಾಂಶ

ಮಾಂಸಾಹಾರ ಪ್ರಿಯರಿಗೆ ಸಂತಸದ ಸುದ್ದಿ ನೀಡಿದ ಪಶು ಸಂಗೋಪನಾ ಇಲಾಖೆ| ಹುಬ್ಬಳ್ಳಿಯಲ್ಲಿ ಆರಂಭವಾದ ಸಂಚಾರಿ ಮಾರಾಟ ಮಳಿಗೆ| ಮಾರಾಟ ಮಳಿಗೆಯಲ್ಲಿ ಆರೋಗ್ಯಕರ ಹಾಗೂ ಶುಚಿಯಾದ ಮಾಂಸದ ಖಾದ್ಯ ಲಭ್ಯ|  

ಹುಬ್ಬಳ್ಳಿ(ಫೆ.16): ವಾಣಿಜ್ಯ ನಗರಿ ಹುಬ್ಬಳ್ಳಿ ನಗರದ ಮಾಂಸಾಹಾರ ಪ್ರಿಯರಿಗೆ ಪಶು ಸಂಗೋಪನಾ ಇಲಾಖೆ ಸಂತಸದ ಸುದ್ದಿಯೊಂದನ್ನ ನೀಡಿದೆ. ಹೌದು, ನಗರದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರಿ ಮಾರಾಟ ಮಳಿಗೆಯೊಂದನ್ನ ಪರಿಚಯಿಸಿದೆ. 

ಈ ಮೊಬೈಲ್ ಸಂಚಾರಿ ಮಾರಾಟ ಮಳಿಗೆಯಲ್ಲಿ ರುಚಿಕರವಾದ ಮಾಂಸಾಹಾರ ಖಾದ್ಯಗಳನ್ನ ಮಾಡಿಕೊಡಲಾಗುತ್ತದೆ. ಮೊಬೈಲ್ ಸಂಚಾರಿ ಮಾರಾಟ ಮಳಿಗೆಯಿಂದ ಮಾಂಸಾಹಾರ ಪ್ರಿಯರಿಗೆ ಎಲ್ಲಿಲ್ಲದ ಖುಷಿಯಾಗಿದೆ. ಸಂಚಾರಿ ಮಾರಾಟ ಮಳಿಗೆ ನಗರದಾದ್ಯಂತ ಸುತ್ತಾಡಲಿದೆ. ಇದರಿಂದ ನೀವು ಇದ್ದಲಿಗೆ ಈ ವಾಹನ ಬರಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂಚಾರಿ ಮಾರಾಟ ಮಳಿಗೆಯಲ್ಲಿ ಆರೋಗ್ಯಕರ ಹಾಗೂ ಶುಚಿಯಾದ ಮಾಂಸದ ಖಾದ್ಯಗಳನ್ನ ಪೂರೈಸಲಾಗುವುದು ಎಂದು ಪಶು ಸಂಗೋಪನಾ ಇಲಾಖೆ ಹೇಳಿಕೊಂಡಿದೆ. ಈ ನೂತನ ಯೋಜನೆಯಿಂದ ಜಿಲ್ಲೆಯಲ್ಲಿ ಉದ್ಯೋಗ ಹೆಚ್ಚಿಸುವ ನಿರೀಕ್ಷೆಯಲ್ಲಿದೆ ಪಶು ಸಂಗೋಪನಾ ಇಲಾಖೆ.
 

PREV
click me!

Recommended Stories

Bengaluru; ತಿಂಗಳಿಗೆ 2 ಲಕ್ಷ ಸಂಪಾದನೆ, ಆದರೂ ಸಿಗದ 2BHK ಮನೆ; ಬೆಂಗಳೂರಿನಲ್ಲಿ ಹಳೆಯ ಮನೆಗಳತ್ತ ಜನರ ಒಲವು!
ಪ್ರದೂಷ್ ಮಾಫಿ ಸಾಕ್ಷಿ ತಡೆಯುವ ದರ್ಶನ್ ಪ್ರಯತ್ನಕ್ಕೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಕೋರ್ಟ್