ನೋ ಟೆನ್ಷನ್, ಹ್ಯಾಪಿ ಎಂದ ಸಿಎಂ

Published : Sep 07, 2018, 06:26 PM ISTUpdated : Sep 09, 2018, 08:53 PM IST
ನೋ ಟೆನ್ಷನ್, ಹ್ಯಾಪಿ ಎಂದ ಸಿಎಂ

ಸಾರಾಂಶ

ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ವಿಚಾರದಲ್ಲಿ ನಾನು ಟೆನ್ಶನ್ ನಲ್ಲಿ ಇದ್ದಿದ್ದರೆ ಉಡುಪಿಗೆ ಬರದೆ ಬೆಂಗಳೂರಿನಲ್ಲಿ ಬರುತ್ತಿರಲಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ನನ್ನ ಜೊತೆ ಎಲ್ಲರೂ ಸುಮಧರ ಬಾಂಧವ್ಯದಿಂದ ಇದ್ದಾರೆ. ಚುನಾವಣೆಯಲ್ಲಿ ಜಯವಾಗಿರುವುದು ಯಾವುದೇ ಬಣಕ್ಕೆ ಅಲ್ಲ ಕಾಂಗ್ರೆಸ್ ಪಕ್ಷಕ್ಕೆ - ಸಿಎಂ ಕುಮಾರಸ್ವಾಮಿ 

ಉಡುಪಿ[ಸೆ.07]: ನಾನು ಯಾವತ್ತೂ ಟೆನ್ಶನ್ ಮಾಡಿಕೊಂಡವನಲ್ಲ, ನಾನೇಕೆ ಟೆನ್ಶನ್ ಮಾಡ್ಕೋಬೇಕು ಎಂದು ಮಾಧ್ಯಮದವರನ್ನೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ ಪ್ರಸಂಗ ಉಡುಪಿಯನ್ನು ನಡೆಯಿತು.

ಕೃಷ್ಣ ಮಠದಿಂದ ವಾಪಸಾದ ಬಳಿಕ ಪಿಎಲ್ ಡಿ ಬ್ಯಾಂಕ್ ಬಗ್ಗೆ ಸುದ್ದಿಗಾರರೊಂದಿಗೆ ಉತ್ತರಿಸಿದ ಅವರು, ನಾನು ಟೆನ್ಶನಲ್ಲಿ ಇದ್ದಿದ್ದರೆ ಉಡುಪಿಗೆ ಬರ್ತಾನೇ ಇರಲಿಲ್ಲ. ಮಾದ್ಯಮಗಳಲ್ಲಿ ಬಂದಂತೆ ಬೆಳಗಾವಿಯಲ್ಲಿ ಅಂತದ್ದೇನಾಗಿದೆ. 13 ಜನ ರೆಬೆಲ್ ಆದವರು ಯಾರು? ರೆಬೆಲ್ ಇದ್ದಾರೆ ಅಂತ ನಿಮಗೆ ಯಾರು ಹೇಳಿದವರು, ಈ ಬಗ್ಗೆ ರಮೇಶ ಜಾರಕಿಹೋಳಿ ಅವರನ್ನೇ ಕೇಳಿ ಎಂದು ಪತ್ರಕರ್ತರಿಗೆ ಪ್ರಶ್ನೆಗಳ ಸುರಿಮಳೆಯನ್ನು ಎಸೆದರು.

ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ವಿಚಾರದಲ್ಲಿ ನಾನು ಟೆನ್ಶನ್ ನಲ್ಲಿ ಇದ್ದಿದ್ದರೆ ಉಡುಪಿಗೆ ಬರದೆ ಬೆಂಗಳೂರಿನಲ್ಲಿ ಬರುತ್ತಿರಲಿಲ್ಲ. ನನ್ನ ಸರ್ಕಾರ ಸುಭದ್ರವಾಗಿದೆ. ನನ್ನ ಜೊತೆ ಎಲ್ಲರೂ ಸುಮಧರ ಬಾಂಧವ್ಯದಿಂದ ಇದ್ದಾರೆ. ಚುನಾವಣೆಯಲ್ಲಿ ಜಯವಾಗಿರುವುದು ಯಾವುದೇ ಬಣಕ್ಕೆ ಅಲ್ಲ ಕಾಂಗ್ರೆಸ್ ಪಕ್ಷಕ್ಕೆ. ಮಾಧ್ಯಮಗಳಲ್ಲಿ ಅಸಾಧ್ಯವಾದುದು ಚರ್ಚೆಯಾಗಿ ಅನಗತ್ಯವಾಗಿ ಸರ್ಕಾರಕ್ಕೆ ಗಡುವು ನೀಡಲಾಗುತ್ತಿದೆ ಎಂದು ಪಿಎಲ್ ಡಿ ಬ್ಯಾಂಕ್ ವಿವಾದ ಕೇವಲ ಊಹಾಪೋಹ ಎಂದು ನುಣಿಚಿಕೊಂಡಿದ್ದರು. 

ಸಿದ್ದರಾಮಯ್ಯವನರ ವಿದೇಶ ಪ್ರವಾಸದ ಬಗ್ಗೆ ಮಾತನಾಡಿದ ಸಿಎಂ, ಸಿದ್ದರಾಮಯ್ಯ ವಿದೇಶಕ್ಕೆ ಹೋಗೋದು ತಪ್ಪಾ ಅವರೇನು ಒಬ್ಬರೇ ಹೊಗಿದ್ದಾರಾ ಮಾಧ್ಯಮ ಮಿತ್ರರು ಅರ್ಥ ಮಾಡಿಕೊಳ್ಳಬೇಕು. ನೀವು ಮಾಡುವ ವರದಿಗಳು ಅಸಹಜವಾದದ್ದು ನಿಮ್ಮ ಖುಷಿಯಂತೆ ಸುದ್ದಿ ಮಾಡಿಕೊಳ್ಳಿ ಎಂದು ಸರ್ಕಾರಕ್ಕೆ ಯಾವುದೇ ಅಭದ್ರತೆ ಕಾಡುತ್ತಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

PREV
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಮುಸ್ಲಿಂ ವ್ಯಕ್ತಿಯ ಕಿರುಕುಳ; ವಿವಾಹಿತ ಮಹಿಳೆ ಆತ್ಮ*ಹತ್ಯೆ