'ಯತ್ನಾ​ಳಗೆ ನೋಟಿಸ್‌ ನೀಡಿದ್ದು ಸರಿಯಾಗಿಯೇ ಇದೆ'

By Web Desk  |  First Published Oct 7, 2019, 11:46 AM IST

ಪರಿಹಾರ ಕೇಳುವ ಅಬ್ಬರದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ತಪ್ಪೇನಿಲ್ಲ ಎಂದ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ| ಬಿಜೆಪಿ ಶಿಸ್ತಿನ ಪಕ್ಷ. ಆದರೆ ಆ ಶಿಸ್ತು ಉಲ್ಲಂಘಿಸಿದ್ದಾರೆ| ಅದಕ್ಕಾಗಿ ಅವರಿಗೆ ಪಕ್ಷ ನೋಟಿಸ್‌ ಜಾರಿಗೊಳಿಸಿದೆ| ಬಸನಗೌಡ ಪಾಟೀಲ ಯತ್ನಾಳ ಅವರು ನೆರೆ ಪರಿಹಾರಕ್ಕಾಗಿ ಧ್ವನಿ ಎತ್ತಿರುವುದು ಸ್ವಾಗತಾರ್ಹ| ಆದರೆ ಪಕ್ಷದ ರಾಷ್ಟ್ರೀಯ, ರಾಜ್ಯಾಧ್ಯಕ್ಷ ಹಾಗೂ ಪ್ರಧಾನಿ ಅವರಿಗೆ ಮುಜುಗರ ಉಂಟು ಮಾಡಿರುವುದು ಸರಿಯಲ್ಲ| 


ವಿಜಯಪುರ(ಅ.7): ಪರಿಹಾರ ಕೇಳುವ ಅಬ್ಬರದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಬಿಜೆಪಿ ಶಿಸ್ತಿನ ಪಕ್ಷ. ಆದರೆ ಆ ಶಿಸ್ತು ಉಲ್ಲಂಘಿಸಿದ್ದಾರೆ. ಅದಕ್ಕಾಗಿ ಅವರಿಗೆ ಪಕ್ಷ ನೋಟಿಸ್‌ ಜಾರಿಗೊಳಿಸಿದ್ದರಲ್ಲಿ ತಪ್ಪೇನಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೆರೆ ಪರಿಹಾರಕ್ಕಾಗಿ ಧ್ವನಿ ಎತ್ತಿರುವುದು ಸ್ವಾಗತಾರ್ಹ. ಆದರೆ ಪಕ್ಷದ ರಾಷ್ಟ್ರೀಯ, ರಾಜ್ಯಾಧ್ಯಕ್ಷ ಹಾಗೂ ಪ್ರಧಾನಿ ಅವರಿಗೆ ಮುಜುಗರ ಉಂಟು ಮಾಡಿರುವುದು ಸರಿಯಲ್ಲ. ಹೀಗಾಗಿ ಅವರ ಪಕ್ಷ ನೋಟಿಸ್‌ ಜಾರಿ ಮಾಡಿರುವ ನಿರ್ಣಯವನ್ನೂ ಸ್ವಾಗತಿಸುತ್ತೇವೆ ಎಂದರು.

Latest Videos

undefined

ಪಕ್ಷಕ್ಕೆ ಮುಜುಗುರವನ್ನುಂಟು ಮಾಡುವ ಹೇಳಿಕೆಗಳನ್ನು ಯಾರೇ ನೀಡಿದರೂ, ಅವರನ್ನು ಪ್ರಶ್ನಿಸಿ ಸಮರ್ಪಕ ಉತ್ತರ ಪಡೆಯುವುದು ಪಕ್ಷದ ನಿಯಮಾವಳಿ ಸಹ ಹೌದು. ಈ ನಿಯಮದನ್ವಯ ಯತ್ನಾಳ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಬಿಜೆಪಿಯಲ್ಲಿದ್ದ ಯಾರೇ ಆಗಲಿ ಪಕ್ಷಕ್ಕೆ ಅಥವಾ ಪಕ್ಷದ ನಾಯಕರಿಗೆ ಮುಜಗುರವಾಗುಂತಹ ವಿರೋಧ ಪಕ್ಷದವರಂತೆ ಹೇಳಿಕೆ ನೀಡುವುದನ್ನು ಬಿಜೆಪಿ ಎಂದೂ ಸಹಿಸಲ್ಲ ಎಂದು ಹೇಳಿದ್ದಾರೆ.

ನೆರೆ ಸಂತ್ರಸ್ತರಿಗೆ 1200 ಕೋಟಿ:

ರಾಜ್ಯದಲ್ಲಿ ಪ್ರಸಕ್ತ ವರ್ಷ ವಿಪರೀತ ಮಳೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರ ನಿರೀಕ್ಷೆಯಂತೆ ಪರಿಹಾರ ಕಾರ್ಯ ಕೈಗೊಂಡಿವೆ. ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ . 1200 ಕೋಟಿ ಬಿಡುಗಡೆ ಮಾಡಿದೆ. ಇದು ಕೇವಲ ಮಧ್ಯಂತರ ಪರಿಹಾರವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಹಾರಧನ ಬಿಡುಗಡೆ ಮಾಡಲಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ಆದ ತಕ್ಷಣ ನೆರೆ ಹಾವಳಿ ಆಗಿರುವ ಆಯಾ ಜಿಲ್ಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ​ದ್ದ​ಲ್ಲದೆ ಕೂಲಂಕಷವಾಗಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರದಿಂದಲೂ ವಿಶೇಷ ಅಧ್ಯಯನ ತಂಡ ರಾಜ್ಯಕ್ಕೆ ಆಗಿಮಿಸಿ ಹಾನಿಗೊಳಗಾದ ಎಲ್ಲ ವಿವರವನ್ನು ಕೇಂದ್ರಕ್ಕೆ ನೀಡಿದೆ. ಈಗಾಗಲೇ ರಾಜ್ಯ ಸರ್ಕಾರ ತಕ್ಷಣ ಪ್ರತಿ ಸಂತ್ರಸ್ತರ ಕುಟುಂಬಗಳಿಗೆ 10 ಸಾವಿರ ನೀಡಿದ್ದಲ್ಲದೆ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡಲು ತಲಾ 5 ಲಕ್ಷ ನೀಡುವುದಾಗಿ ಮತ್ತು ತಾತ್ಕಾಲಿಕವಾಗಿ ಬಾಡಿಗೆ ಮನೆ ಮಾಡಿದವರಿಗೆ ಪ್ರತಿ ತಿಂಗಳು 5 ಸಾವಿರ ಬಾಡಿಗೆ ಹಣವನ್ನೂ ಭರಿಸುತ್ತಿದೆ ಎಂದು ಹೇಳಿ​ದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪರಸ್ಪರ ಸಮಾಲೋಚನೆ ನಡೆಸಿ ಪರಿಹಾರ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಸಹಕರಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್‌ ಅಭಿನಂದನಾರ್ಹರು ಎಂದರು.
 

click me!