'ಸಿದ್ಧರಾಮಯ್ಯ ವಿಪಕ್ಷ ನಾಯಕನಾದ್ರೆ ರಾಜ್ಯದ ಸಮಸ್ಯೆ ಪರಿಹಾರ'

By Kannadaprabha NewsFirst Published Oct 7, 2019, 11:34 AM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಆದರೆ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದು ಮಾಜಿ ಸಚಿವ ಎನ್. ಚಲುವರಾಯ ಸ್ವಾಮಿ ಹೇಳಿದ್ದಾರೆ. ಅವರಿಗೆ ಎಲ್ಲ​ರನ್ನೂ ವಿಶ್ವಾ​ಸಕ್ಕೆ ತೆಗೆ​ದು​ಕೊಂಡು ಹೋಗುವ ಶಕ್ತಿ ಮತ್ತು ಎದೆ​ಗಾ​ರಿಕೆ ಇದೆ. ಭವಿ​ಷ್ಯ​ದಲ್ಲಿ ಕಾಂಗ್ರೆಸ್‌ ಪಕ್ಷದ ಸಂಘ​ಟ​ನೆಗೆ ಹೆಚ್ಚಿನ ಅನು​ಕೂ​ಲ​ವಾ​ಗ​ಲಿದೆ ಎಂದಿದ್ದಾರೆ.

ಮಂಡ್ಯ(ಅ.07): ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವ​ರನ್ನು ವಿರೋಧ ಪಕ್ಷದ ನಾಯ​ಕ​ರ​ನ್ನಾಗಿ ಆಯ್ಕೆ ಮಾಡಿ​ದಲ್ಲಿ ರಾಜ್ಯದ ಸಮ​ಸ್ಯೆ​ಗ​ಳಿಗೆ ಪರಿ​ಹಾರ ಸಾಧ್ಯ ಎಂದು ಮಾಜಿ ಸಚಿ​ವ ಎನ್‌.ಚಲು​ವ​ರಾ​ಯ​ಸ್ವಾಮಿ ಭಾನು​ವಾರ ಮದ್ದೂರಿನಲ್ಲಿ ಹೇಳಿದ್ದಾರೆ.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ವರಿ​ಷ್ಠರು ಸಿದ್ದ​ರಾ​ಮಯ್ಯ ಅವ​ರಿಗೆ ಸಾಮೂ​ಹಿಕ ನಾಯ​ಕ​ತ್ವದ ಜವಾ​ಬ್ದಾರಿ ನೀಡ​ಬೇಕು. ಅವರಿಗೆ ಎಲ್ಲ​ರನ್ನೂ ವಿಶ್ವಾ​ಸಕ್ಕೆ ತೆಗೆ​ದು​ಕೊಂಡು ಹೋಗುವ ಶಕ್ತಿ ಮತ್ತು ಎದೆ​ಗಾ​ರಿಕೆ ಇದೆ. ಭವಿ​ಷ್ಯ​ದಲ್ಲಿ ಕಾಂಗ್ರೆಸ್‌ ಪಕ್ಷದ ಸಂಘ​ಟ​ನೆಗೆ ಹೆಚ್ಚಿನ ಅನು​ಕೂ​ಲ​ವಾ​ಗ​ಲಿದೆ ಎಂದಿದ್ದಾರೆ.

ದಸರಾ ಉದ್ಯೋಗ ಮೇಳದಲ್ಲಿ 49 ಜನಕ್ಕೆ ಕೆಲಸ

ಪ್ರಸ್ತುತ ಪರಿ​ಸ್ಥಿ​ತಿ​ಯ​ಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಿದ್ದ​ರಾ​ಮಯ್ಯ ಅನಿ​ವಾರ‍್ಯ. ಅವರು ವಿರೋಧ ಪಕ್ಷದ ನಾಯ​ಕ​ರಾಗಿ ಆಯ್ಕೆ​ಯಾ​ಗು​ವು​ದ​ರಿಂದ ರಾಜ್ಯದ ರೈತರು ಮತ್ತು ಜನ​ಸಾ​ಮಾ​ನ್ಯರ ಸಮ​ಸ್ಯೆ​ಗ​ಳಿಗೆ ಸದ​ನ​ದಲ್ಲಿ ಹೋರಾಟ ನಡೆ​ಸ​ಲಿ​ದ್ದಾರೆ ಎಂದು ಅಭಿ​ಪ್ರಾ​ಯ​ಪ​ಟ್ಟರು. ಕಾಂಗ್ರೆಸ್‌ ಪಕ್ಷದ ಹಿರಿಯ ನಾಯ​ಕ​ರಾದ ಮಲ್ಲಿ​ಕಾರ್ಜುನ ಖರ್ಗೆ ಸೇರಿ​ದಂತೆ ಪಕ್ಷದ ಹಿರಿಯ ನಾಯ​ಕ​ರು​ಗಳು ಒಂದೆಡೆ ಕಲೆತು ಸಣ್ಣ ಪುಟ್ಟಭಿನ್ನಾ​ಭಿ​ಪ್ರಾ​ಯ​ಗ​ಳನ್ನು ಮಾತು​ಕತೆ ಮೂಲಕ ಬಗೆ​ಹ​ರಿ​ಸಿ​ಕೊ​ಳ್ಳ​ಬೇಕು ಎಂದಿದ್ದಾರೆ.

ಅನುಕಂಪ ಗಿಟ್ಟಿಸೋದು ಇನ್ನಾದ್ರು ಬಿಡಿ: ಎಚ್‌ಡಿಕೆ ನಡೆಗೆ ಚೆಲುವರಾಯಸ್ವಾಮಿ ಕಿಡಿ

ಈ ಬಗ್ಗೆ ಹೈಕ​ಮಾಂಡ್‌ ಸಿದ್ದ​ರಾ​ಮಯ್ಯ ಅವರನ್ನು ಸಾಮೂ​ಹಿಕ ನಾಯ​ಕ​ತ್ವ​ದ​ಲ್ಲಿ ಹೋಗು​ವಂತೆ ನಿರ್ದೇಶನ ನೀಡ​ಬೇಕು ಎಂದು ಒತ್ತಾ​ಯಿ​ಸಿ​ದರು. ಮುಂದಿನ ದಿನ​ಗ​ಳಲ್ಲಿ ವಿಧಾನ ಸಭೆ ಸಾರ್ವತ್ರಿಕ ಚುನಾ​ವಣೆ ಎದು​ರಾ​ಗ​ಲಿ​ರುವ ಸಾಧ್ಯತೆ ಇದೆ. ಸಿದ್ದ​ರಾ​ಮ​ಯ್ಯ​​ರಿಗೆ ವಿರೋಧ ಪಕ್ಷದ ನಾಯ​ಕ​ರ​ನ್ನಾಗಿ ಆಯ್ಕೆ ಮಾಡು​ವುದು ಸೂಕ್ತ ಎಂದು ಮಾಜಿ ಸಚಿವ ಚಲು​ವ​ರಾ​ಯ​ಸ್ವಾಮಿ ಮನವಿ ಮಾಡಿ​ದರು.

ಮಂಡ್ಯ: 'ಮೋದಿ- ಬಿಎಸ್‌ವೈ ಸಂಬಂಧ ಹಳಸಿದೆ'..!

click me!