ದಾಮೋಧರ ಭಟ್ಟ
ಶಹಾಬಾದ (ಸೆ.17) : ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 15 ವರ್ಷದಿಂದ ಹಾಳು ಬಿದ್ದ ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಯನ್ನು ಕೋವಿಡ್ 3ನೇ ಅಲೆ ನಿಭಾಯಿಸಲು ಜಿಲ್ಲಾ ಉಸ್ತುರವಾರಿ ಸಚಿವ ಮುರುಗೇಶ ನಿರಾಣಿ, ಶಾಸಕ ಬಸವರಾಜ ಮತ್ತಿಮಡು ಪುನರುಜ್ಜೀವನಗೊಳಿಸಿದ್ದರು. ಉದ್ಘಾಟನೆಗೆ ಶಾಸಕ, ಸಚಿವರು ಮುಖ್ಯಮಂತ್ರಿಗಳನ್ನು ಕರೆಸುವದಾಗಿ ಹೇಳುತ್ತಿದ್ದು, ಉದ್ಘಾಟನೆಗೊಳ್ಳುವ ಮುಂಚೆ ಮತ್ತೆ ಪಾಳು ಬೀಳುವ ಸ್ಥಿತಿಯಲ್ಲಿದೆ.
undefined
ಶಾಸಕರ ಪ್ರತಿಷ್ಠೆ ವಾರ್, ಕಟ್ಟಡ ರೆಡಿಯಾಗಿ 6 ತಿಂಗಳಾದ್ರೂ ಉದ್ಘಾಟನೆಯಾಗಿಲ್ಲ ಶಹಾಬಾದ್ ESI ಆಸ್ಪತ್ರೆ
ಕೊರೋನಾ 3ನೇ ಅಲೆ ಎದುರಿಸಲು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಪುನುರುಜ್ಜೀವನಗೊಳಿಸಲು ಲೋಕೋಪಯೋಗಿ ಇಲಾಖೆಗೆ ಆದೇಶಿಸಿದ್ದರು. ಇಲಾಖೆ .3.71 ಕೋಟಿ ವೆಚ್ಚದಲ್ಲಿ ಸಿವಿಲ್ ಕಾಮಗಾರಿ, ಡಾಂಬರ ರಸ್ತೆ, ಫುಟ್‌ಪಾತ್, ಶುದ್ದ ಕುಡಿಯುವ ನೀರಿನ ಘಟಕ, ಪೋಸ್ಟ್‌ಮಾರ್ಟಂ ಕೋಣೆ, .1,27 ಕೋಟಿ ವೆಚ್ಚದಲ್ಲಿ ವಿದ್ಯುತ್ ಕಾಮಗಾರಿ, .1.70 ಕೋಟಿ ವೆಚ್ಚದಲ್ಲಿ ಆಕ್ಸಿಜನ್Ü ಪ್ಲಾಂಟ್ ನಿರ್ಮಿಸಿದ್ದರು. ಅನುದಾನದ ಕೊರತೆಯಿಂದ ಸಿಬ್ಬಂದಿ ವಸತಿ ಗೃಹದ ಕಾಂಪೌಂಡ ಗೋಡೆ ಬಾಕಿ ಉಳಿಸಲಾಗಿತ್ತು.
ನಗರದ ಲಕ್ಷ್ಮೇ ಗಂಜ್‌ನಲ್ಲಿರುವ ಇಎಸ್‌ಐ ಡಿಸ್ಪೇನ್ಸರಿಯನ್ನು ಇಲ್ಲಿಗೆ ಸ್ಥಳಾಂತರಿಸಲು ಕಾರ್ಮಿಕ ಇಲಾಖೆ ಕಳೆದ ಫೆಬ್ರವರಿ 24 ರಂದು ಆದೇಶ ನೀಡಿದೆ. ಆದರೆ, ಉದ್ಘಾಟನೆಗೊಳ್ಳದೆ ಸ್ಥಳಾಂತರಿಸಲು ಶಾಸಕ, ಸಚಿವರು ಇಲ್ಲಿಯ ವೈದ್ಯಾಧಿಕಾರಿಗಳಿಗೆ, ಸಿಬ್ಬಂದಿಗೆ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ. ಕೋಟಿಗಟ್ಟಲೆ ಹಣ ಸುರಿದು ಪುನರುಜ್ಜೀವನಗೊಳಿಸಿದ ಆಸ್ಪತ್ರೆ ಸಿದ್ಧವಾದರೂ, ಕಾರ್ಮಿಕ ಇಲಾಖೆ ಪ್ರತಿ ತಿಂಗಳು ಬಾಡಿಗೆ, ವಿದ್ಯುತ್ ಬಿಲ್ ಸೇರಿ ಸುಮಾರು .25 ಸಾವಿರ ವೆಚ್ಚಮಾಡುತ್ತಿದೆ. ಹೊಸ ಆಸ್ಪತ್ರೆಯ ವಿದ್ಯುತ್ ಬಿಲ್, ಸೆಕ್ಯೂರಿಟಿ ಗಾರ್ಡ್ ವೇತನವೆಂದು ಒಂದಿಷ್ಟುದುಡ್ಡು ಖರ್ಚು ಮಾಡುತ್ತಿದೆ.
ವೈದ್ಯಕೀಯ ಕೇಂದ್ರ ಮಾಡಿ:
ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಇಎಸ್‌ಐ ಡಿಸ್ಪೇನ್ಸರಿಗಳಿಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಎಸ್‌ಐ ಕೇಂದ್ರ ಕಚೇರಿಯಿಂದ ವೈದ್ಯಕೀಯ ಉಪಕರಣ, ಔಷಧ ಸಾಮಗ್ರಿ ಸರಬರಾಜು ಅಗುತ್ತವೆ. ಅದನ್ನು ಸರಬರಾಜು ಮಾಡಲು ಇಲ್ಲಿ ಕೇಂದ್ರ ಪ್ರಾರಂಭಿಸಬೇಕು, ಸೇಡಂ, ಮಳಖೇಡ, ವಾಡಿ ಸೇರಿದಂತೆ ವಿವಿಧ ಡಿಸ್ಪೇನ್ಸರಿಗಳಲ್ಲಿ ಎಂಡಿ, ಎಂಎಸ್ ಮಾಡಿದ ವೈದ್ಯರು, ರೋಗಿಗಳಿಲ್ಲದೆ ಯಾವುದೇ ಕೆಲಸವಿಲ್ಲದೆ ಕುಳಿತ್ತಿದ್ದು, ಅವರನ್ನು ಈ ಆಸ್ಪತ್ರೆಗೆ ನೇಮಿಸಿ, ಅವಶ್ಯಕ ಸೌಕರ್ಯಗಳನ್ನು ಒದಗಿಸಿದರೆ, ಈ ಆಸ್ಪತ್ರೆ ಸುಸಜ್ಜಿತವಾಗಿ ಪ್ರಾರಂಭಿಸಬಹುದಾಗಿದೆ.
Kalyan Karnataka: ಕಲ್ಯಾಣ ನಾಡಲ್ಲಿ ಅಭಿವೃದ್ಧಿ ಆಗೋದು ಯಾವಾಗ?
ನಿರಾಣಿ ನಿರ್ಲಕ್ಷ್ಯ:
ಈ ಭಾಗದ ಅಭಿವೃದ್ದಿಗೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದು, ಪುನರುಜ್ಜೀವನಗೊಂಡಿರುವ ಆಸ್ಪತ್ರೆ ಪ್ರಾರಂಭಕ್ಕೆ ಮತ್ತೊಮ್ಮೆ ಕೊರೋನಾ ಬರಬೇಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವವಾಗುತ್ತಿದೆ. ಕೋಟಿಗಟ್ಟಲೆ ದುಡ್ಡು ಸುರಿದು ನಿರ್ಮಿಸಿದ ಆಸ್ಪತ್ರೆ, ಸ್ಥಳೀಯ ಶಾಸಕ, ಸಚಿವರ ನಿರ್ಲಕ್ಷ್ಯದಿಂದ ಮತ್ತೆ ಪಾಳು ಬೀಳುವ ಸ್ಥಿತಿಯಲ್ಲಿದೆ.