ಇದು ರಾಷ್ಟ್ರೀಯ ಹೆದ್ದಾರಿ? ಅಲ್ಲ; ಸಾವಿನ ಹೆದ್ದಾರಿ ..!

By Ravi Nayak  |  First Published Aug 18, 2022, 2:52 PM IST
  • ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಕಂಟಕವಾಗಿದೆ.
  • ನಗರ ಪ್ರದೇಶದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ!
  • ಶಹಾಪುರ ನಗರದ ಜನರ ಸಂಕಷ್ಟ
  • ಬೈಪಾಸ್ ರಸ್ತೆ ಯಾವಾಗ ಎಂದು ಸಾರ್ವಜನಿಕರ ಪ್ರಶ್ನೆ..?

ವರದಿ: ಪರಶುರಾಮ ಐಕೂರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಆ.18): ರಾಷ್ಟ್ರೀಯ ಹೆದ್ದಾರಿಯು ಸಾವಿನ ಹೆದ್ದಾರಿಯಾಗಿದೆ. ಆ ರಾಷ್ಟ್ರೀಯ ಹೆದ್ದಾರಿಯು ಪ್ರಯಾಣಿಕರಿಗೆ ಕಂಟಕವಾಗಿದ್ದು, ನಗರ ಪ್ರದೇಶದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋದ ಹಿನ್ನೆಲೆ ಶಹಾಪುರ ನಗರದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಯಾದಗಿರಿ(Yadagiri) ಜಿಲ್ಲೆಯ ಶಹಾಪುರ(Shahapur)ಗರದ ವ್ಯಾಪ್ತಿಯಲ್ಲಿ ಬೀದರ - ಶ್ರೀರಂಗಪಟ್ಟಣ(Bidar-Shrirangapattana high way) ರಾಜ್ಯ ಹೆದ್ದಾರಿ ನಿರ್ಮಾಣ ಮಾಡಲಾಗಿತ್ತು. ನಂತರ 5 ವರ್ಷದ ಹಿಂದೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ 150 ಎ ಯನ್ನಾಗಿ ಮೇಲ್ದರ್ಜೆಗೆರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿದರು ಶಹಾಪುರ ನಗರದಿಂದಲೇ ಹೆದ್ದಾರಿ ಹಾದು ಹೋಗಿದೆ.

Tap to resize

Latest Videos

undefined

ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ದುರ್ಮರಣ

ಹೆದ್ದಾರಿಯಲ್ಲಿ ಅಪಘಾತ ಹೆಚ್ಚಳ ಆತಂಕ: ರಾಷ್ಟ್ರೀಯ ಹೆದ್ದಾರಿ(National highway)ಯಲ್ಲಿ ರಸ್ತೆ ಅಪಘಾತ ಪ್ರಕರಣಗಳು(Accidents case) ಹೆಚ್ಚಾದ ಹಿನ್ನೆಲೆ ಪ್ರಯಾಣಿಕರು ಆತಂಕ ಪಡುವಂತಾಗಿದೆ. ಕಳೆದ 2021 ಸಾಲಿನಲ್ಲಿ 20  ದಾಖಲಾದ ಪ್ರಕರಣಗಳಾಗಿದ್ದು ಅದರಲ್ಲಿ 8 ಜನ ಅಪಘಾತದಲ್ಲಿ ಮೃತಪಟ್ಟಿದ್ದು, 23 ಜನ ಗಾಯಗೊಂಡಿದ್ದಾರೆ. ಅದೇ ರೀತಿ 2022 ಸಾಲಿನ ಇಲ್ಲಿನವರಗೆ 17 ಪ್ರಕರಣಗಳು ದಾಖಲಾಗಿದ್ದು, 13 ಜನ ಮೃತ ಪಟ್ಟಿದ್ದಾರೆ. 16 ಜನ ಗಾಯಗೊಂಡಿದ್ದಾರೆ. ಹೆದ್ದಾರಿ ರಸ್ತೆಯಲ್ಲಿ ಅಪಘಾತಗಳ ಹೆಚ್ಚಳದಿಂದ ವಾಹನ ಸವಾರರು ಆತಂಕದಲ್ಲಿ ವಾಹ ಚಲಾಯಿಸುವಂತಾಗಿದೆ. ಶಹಾಪುರ ನಗರದಲ್ಲಿಯೇ ರಸ್ತೆ ಅಪಘಾತಗಳು ಹೆಚ್ಚಿನ ಪ್ರಕರಣಗಳು ಜರುಗಿವೆ‌‌.

ಬೈಪಾಸ್ ರಸ್ತೆ ಯಾವಾಗ ಎಂದು ಸಾರ್ವಜನಿಕರ ಪ್ರಶ್ನೆ?

ಶಹಾಪುರ ಜನನಿಬಿಡ ಪ್ರದೇಶದ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿಯು ನಗರದಲ್ಲಿ ಹಾದು ಹೋದ ಹಿನ್ನೆಲೆ ವಾಹನ ದಟ್ಟಣೆ ಹೆಚ್ಚಾಗುವ ಜೊತೆ ಭಾರಿ ಪ್ರಮಾಣದ ವಾಹನಗಳ ಸಂಚಾರ ಹೆಚ್ಚಾಗಿದೆ. ಇದರಿಂದ ರಸ್ತೆ ಅಪಘಾತ ಪ್ರಕರಣವು ಹೆಚ್ಚಾಗಿವೆ. ಅನೇಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ‌. ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಸುಮಾರು ವರ್ಷಗಳ ಹೋರಾಟದ ಕೂಗಾಗಿದೆ. ಶಹಾಪುರ ನಗರದ ಹೊರಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಿದರೆ ಭಾರಿ ವಾಹನಗಳ ಸಂಚಾರ ಹಾಗೂ ರಸ್ತೆ ಅಪಘಾತ ಪ್ರಕರಣಗಳು ಬ್ರೇಕ್ ಬಿಳಲಿದೆ. ಈ ಬಗ್ಗೆ ಶಹಾಪುರ ನಗರ ನಿವಾಸಿ ಖಾಲೀದ್ ಮಾತನಾಡಿ, ಶಹಾಪುರ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಒಂದೇ ರಸ್ತೆ ಮಾರ್ಗದ ಮೂಲಕ ನಿತ್ಯವೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ರಸ್ತೆ ಅಪಘಾತ ಘಟನೆಗಳು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿವೆ. ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಅಪಘಾತದಲ್ಲಿ ಪಾಲಕರು ಮೃತಪಟ್ಟರೆ ಹೆಣ್ಣು ಮಕ್ಕಳಿಗೂ ವಿಮಾ ಪರಿಹಾರ: ಹೈಕೋರ್ಟ್‌

ಬೈಪಾಸ್ ರಸ್ತೆ ನಿರ್ಮಾಣದ ಪ್ರಸ್ತಾವನೆಯಿದೆ: ಸಂಸದ ರಾಜಾ ಅಮರೇಶ್ವರ ನಾಯಕ್

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಅನುದಾನದೊಂದಿಗೆ  ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ. ಆದರೆ, ಪ್ರಸ್ತಾವನೆಯು ಕಾಗದಲ್ಲಿ ಮಾತ್ರ ಸಿಮಿತವಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ  ಜನ ಸಾಮಾನ್ಯರು ರಸ್ತೆ ಅಪಘಾತದಲ್ಲಿ ಸಾಯುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಬೈಪಾಸ್ ರಸ್ತೆ ನಿರ್ಮಾಣ ಅಗತ್ಯವಿದೆ. ಈ ಬಗ್ಗೆ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಮಾತನಾಡಿ, ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಸರ್ವೆ ಹಂತದಲ್ಲಿದೆ, ಈ ಬಗ್ಗೆ ಬೈಪಾಸ್ ನಿರ್ಮಾಣ ಮಾಡಲು ಅಗತ್ಯ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

click me!