ಡ್ರೋನ್ ಬಳಸಿ ಸೋಯಾಬಿನ್‌ ಬೆಳೆಗೆ ಔಷಧಿ ಸಿಂಪಡಣೆ!

By Ravi Nayak  |  First Published Aug 18, 2022, 1:31 PM IST

ಕೃಷಿ ಕೂಲಿ ಕಾರ್ಮಿಕರು ಮಹಾನಗರಗಳತ್ತ ಮುಖ ಮಾಡಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕೆ ಕಾರ್ಮಿಕರೇ ಸಿಗುತ್ತಿಲ್ಲ. ಈ ಕೊರತೆಯಿಂದಾಗಿ ಧಾರವಾಡದ ರೈತರು ತಂತ್ರಜ್ಞಾನ ಬಳಸಿಕೊಂಡಿದ್ದಾರೆ. ಡ್ರೋಣ್ ಬಳಸಿ ಬೆಳೆಗಳಿಗೆ ಔಷಧ ಸಿಂಪಡಣೆ ಮಾಡಿ ಎಲ್ಲ ಹುಬ್ಬೇರಿಸಿದ್ದಾರೆ.


 ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

 ಧಾರವಾಡ (ಆ. 18): ಮನುಷ್ಯ ಎಷ್ಟೇ ವಿಚಾರ ಮಾಡಿದ್ರೂ ತಂತ್ರಜ್ಞಾನ ಮನುಷ್ಯನಿಗಿಂತ ಒಂದು ಹೆಜ್ಜೆ ಮುಂದೆ ಇದೆ ಅನ್ನೋದಕ್ಕೆ‌ ಇದೊಂದು ದೊಡ್ಡ ಉದಾಹರಣೆಯಾಗಿದೆ.  ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಜ‌ನರು ಕೃಷಿ ಜಮೀನನ್ನ ಹೊಂದಿರುತ್ತಾರೆ. ಆದರೆ ಇತ್ತಿಚಿನ ದಿನಗಳಲ್ಲಿ ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಸಿಗ್ತಾ ಇಲ್ಲ, ಇದರಿಂದ ಅನ್ನದಾತ ಕೂಲಿ ಕಾರ್ಮಿಕರಿಲ್ಲದ ಕೃಷಿ ಚಟುವಟಿಕೆಗಳನ್ನ ಮಾಡಲೂ ನಾನಾ ಬಗೆಯ ಪ್ಲಾನ್ ಗಳನ್ನ ಮಾಡ್ತಿದ್ದಾರೆ. ಇಲ್ಲೊಬ್ಬ ರೈತ ಬೆಳೆದ ಬೆಳೆಗೆ ಔಷಧಿ ಸಿಂಪಡಣೆಗೆ ಡ್ರೋಣ್ ಔಷಧಿ ಸಿಂಪಡಣೆ ಮಾಡುತ್ತಿದ್ದಾನೆ..

Latest Videos

undefined

Kolar: ಡ್ರೋನ್ ಮೂಲಕ ಔಷಧಿ ಸಿಂಪಡಣೆ: ಆಧುನಿಕ ತಂತ್ರಜ್ಞಾನಕ್ಕೆ ಕೃಷಿ ಇಲಾಖೆಯಿಂದ ಒತ್ತು!

ಧಾರವಾಡ(Dharwad) ಗ್ರಾಮೀಣ ಭಾಗದಲ್ಲಿ ಇತ್ತೀಚೆಗೆ ಕಟ್ಟಡ ಕೆಲಸಗಳಿಗೆ ಕೃಷಿ ಕಾರ್ಮಿಕರು ಹೋಗುತ್ತಿದ್ದಾರೆ. ಹಲವು ಕೃಷಿ ಕಾರ್ಮಿಕ ಕುಟುಂಬಗಳು ಹಣದಾಸೆಗೆ ಅಥವಾ ಹಳ್ಳಿಯಲ್ಲಿ ನಿರಂತರ ಕೆಲಸ ಸಿಗದ ಕಾರಣ ನಗರಗಳ ಕಡೆ ಮುಖ ಮಾಡುತ್ತಿದ್ದಾರೆ ಇದರಿಂದ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರು ಸಿಗುತ್ತಿಲ್ಲ ಕೃಷಿಯಲ್ಲಿ ಕೆಲಸ ಮಾಡಲೂ ಕೂಲಿ ಕಾರ್ಮಿಕರು ಇಲ್ಲದೆ ರೈತರು ಡ್ರೋಣ್  ಮುಖಾಂತರ  ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡಿಸುತ್ತಿದ್ದಾರೆ.

 ಡ್ರೋಣ್‌ ಬಳಕೆಯ ಲಾಭ :  ಡ್ರೋಣ್ ಕ್ಯಾಮರಾ ಸದ್ಯ ಧಾರವಾಡ ಜಿಲ್ಲೆಗೆ ಎಂಟ್ರಿ ಕೊಟ್ಟಿದೆ ಧಾರವಾಡ ತಾಲೂಕಿನ ಕಮಲಾಪೂರ(Kamalapura)ದ ರೈತ(Farmer)ನೊಬ್ಬ ಡ್ರೋಣ್ ಕ್ಯಾಮರಾ(Drone) ತರಿಸಿಕ್ಕೊಂಡು ಒಂದು ಎಕರೆಗೆ 500 ಬಾಡಿಗೆಯ ರೂಪದಲ್ಲಿ ಔಷಧಿ ಸಿಂಪಡಣೆ ಮಾಡಿಸುತ್ತಿದ್ದಾರೆ ಇನ್ನು ಔಷಧಿ ಸಿಂಪಡಣೆ ಮಾಡಲು ಒಂದು ಡ್ರೋಣ್ ಕ್ಯಾಮರಾ ಅತೀ ವೇಗದಲ್ಲಿ ಪ್ರತಿದಿನ 40 ಎಕರೆಯಷ್ಟು ಔಷಧಿ ಸಿಂಪಡಣೆಯ ಮಾಡಿವ ಸಾಮರ್ಥ್ಯವನ್ನ‌ಹೊಂದಿದೆ..ಇದರಿಂದ ರೈತರು ಔಷಧಿ ಸಿಂಪಡಣೆಯ ಕೆಲಸವನ್ನ ಕೂಲಿ ಆಳುಗಳಿಲ್ಲದೆ ಸುಗಮವಾಗಿ ಕೆಲಸವನ್ನ ಮಾಡಿಸುತ್ತಿದ್ದಾರೆ..

ಇನ್ನು ಮುಂಗಾರು ಬೆಳೆಗಳಾದ ಸೋಯಾಬಿನ್, ಹೆಸರು, ಹತ್ತಿ ಬೆಳೆ ಗೋವಿನ ಜೋಳ ಇಂತಹ ಬೆಳೆಗಳು ಎತ್ತರಕ್ಕೆ ಬೆಳೆಯುವುದರಿಂದ ಕಾರ್ಮಿಕರು ಬೆಳೆಯಲ್ಲಿ ಹೋಗಿ ಔಷಧಿ ಸಿಂಪಡಣೆ ಮಾಡಲಿಕ್ಕೆ ಆಗುವುದಿಲ್ಲ ಎಂಬ ಪರಿಕಲ್ಪಣೆಯೊಂದಿಗೆ ಈ ಡ್ರೋಣ್  ಅಭಿವೃದ್ಧಿಪಡಿಸಲಾಗಿದೆ.. ಇದರ ಬೆಲೆ‌ 8 ಲಕ್ಷ ರೂ.ಇದೆ ಎಂದು ಸುದರ್ಶನ್ ಎಂಬುವರು ಹೇಳುತ್ತಾರೆ.. ಡ್ರೋಣ್ ಕ್ಯಾಮರಾದಿಂದ ನಾವು ಔಷಧಿ ಸಿಂಪಡಣೆ ಮಾಡುತ್ತೆವೆ ಇದರಿಂದ ಕಡಿಮೆ‌ದರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೊಲಗಳಿಗೆ ಔಷಧಿಯನ್ನ‌ ಸಿಂಪಡಣೆ ಮಾಡುತ್ತಿದ್ದಾರೆ. ಇದು 10 ಜನ ಕೂಲಿ ಕಾರ್ಮಿಕರು ಮಾಡಬೇಕಾದ ಕೆಲಸವನ್ನ ಇದೊಂದೆ ಯಂತ್ರ ಮಾಡುತ್ತೆ ಎಂದು ಹೇಳುತ್ತಾರೆ.

ಕೈಗೆ ಬಂದ ಹೆಸರು ಬೆಳೆ: ಖರೀದಿ ಕೇಂದ್ರ ಆರಂಭಿಸುವಂತೆ ರೈತರ ಒತ್ತಾಯ

ಒಟ್ಟಿನಲ್ಲಿ ಕೂಲಿ ಕಾರ್ಮಿಕರ ಕೊರತೆಯಿಂದ ಅನ್ನದಾತರು ಸದ್ಯ ಔಷಧಿ ಸಿಂಪಡಣೆಗೆ ಡ್ರೋಣ್ ಬಳಸಿ ಷಧಿಯನ್ನು ಸಿಂಪಡಿಸುತ್ತಿದ್ದಾರೆ..ಇನ್ನು ಔಷಧಿ ಸಿಂಪಡಣೆಗೆ ಎರಡು ಮೂರು ದಿನ‌ ಮೊದಲ ನೋಂದಣಿ ಮಾಡಬೇಕಾಗಿದೆ.. ಈ ಡ್ರೋಣ  ಮಾಡುವ ಕೆಲಸಕ್ಕೆ ಅನ್ನದಾತರು ಪುಲ್ ಪಿಧಾ ಆಗಿದ್ದಾರೆ.

click me!