Koppal: ಸಾವಿರಾರು ಕೋಟಿ ರು. ಯೋಜನೆಗೆ ಮೋದಿ ಚಾಲನೆ?

Published : Mar 02, 2023, 10:31 AM ISTUpdated : Mar 02, 2023, 10:32 AM IST
Koppal: ಸಾವಿರಾರು ಕೋಟಿ ರು. ಯೋಜನೆಗೆ ಮೋದಿ ಚಾಲನೆ?

ಸಾರಾಂಶ

ಸುಮಾರು ಸಾವಿರಾರು ಕೋಟಿ ರು. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಕೊಪ್ಪಳಕ್ಕೆ ಆಗಮಿಸುವ ಸಾಧ್ಯತೆ ನಿಚ್ಚಳವಾಗಿದೆ. ಈ ಕುರಿತು ತಯಾರಿ ತೆರೆಮರೆಯಲ್ಲಿ ಭರದಿಂದ ಸಾಗಿದೆ.

ಕೊಪ್ಪಳ (ಮಾ.2) : ಸುಮಾರು ಸಾವಿರಾರು ಕೋಟಿ ರು. ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಕೊಪ್ಪಳಕ್ಕೆ ಆಗಮಿಸುವ ಸಾಧ್ಯತೆ ನಿಚ್ಚಳವಾಗಿದೆ. ಈ ಕುರಿತು ತಯಾರಿ ತೆರೆಮರೆಯಲ್ಲಿ ಭರದಿಂದ ಸಾಗಿದೆ.

ಈಗಾಗಲೇ ಪ್ರಧಾನಿ(PM Narendra Modi)ಗಳÜನ್ನು ಆಹ್ವಾನಿಸುವ ದಿಸೆಯಲ್ಲಿಯೂ ಕಾರ್ಯಪ್ರವೃತ್ತರಾಗಿದ್ದು, ಇನ್ನೇನು ದಿನಾಂಕ ಮಾತ್ರ ನಿಗದಿಯಾಗಬೇಕಾಗಿದೆ ಎನ್ನುತ್ತವೆ ಬಿಜೆಪಿ ಮೂಲಗಳು.

Karnataka election: ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ ಜನಾರ್ದನರೆಡ್ಡಿ

ಯಾವ ಯೋಜನೆಗಳು?

₹2655 ಕೋಟಿ ವೆಚ್ಚದಲ್ಲಿ ಜಾರಿ ಮಾಡಲಾಗಿರುವ ಕೊಪ್ಪಳ ಏತ ನೀರಾವರಿ ಯೋಜನೆ(Koppal lift irrigation project), ಸಿಂಗಟಾಲೂರು ಏತ ನೀರಾವರಿ ಯೋಜನೆ(Singatalur lift irrigation project)ಯನ್ನು ಮಧ್ಯಪ್ರದೇಶ ಮಾದರಿಯಲ್ಲಿ ಜಾರಿ ಮಾಡುವ .6-7 ನೂರು ಕೋಟಿ ಯೋಜನೆ, ಕುಷ್ಟಗಿ ಹಾಗೂ ಯಲುಬರ್ಗಾದ 325 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ .700 ಕೋಟಿ ಯೋಜನೆ, ಅಂಜನಾದ್ರಿಯ ಅಭಿವೃದ್ಧಿ(Anjanadri temple develpment)ಗೆ .140 ಕೋಟಿ ಸೇರಿದಂತೆ ಇನ್ನು ನಾಲ್ಕಾರು ಯೋಜನೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೆಲ್ಲವೂ ಸೇರಿ, ಸಾವಿರಾರು ಕೋಟಿ ರುಪಾಯಿ ಯೋಜನೆಗಳಿಗೆ ಚಾಲನೆ ಹಾಗೂ ಅಡಿಗಲ್ಲು ಕಾರ್ಯಕ್ರಮವನ್ನು ಆಯೋಜನೆ ಮಾಡುವುದಕ್ಕಾಗಿ ಜಿಲ್ಲಾಡಳಿತ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಖಾಸಗಿ ಕಂಪನಿ ಕಾರ್ಯಕ್ರಮ:

ಜತೆಗೆ ದೇಶದ ಮೊದಲ ಆಟಿಕೆ ಕ್ಲಸ್ಟರ್‌ ಯಲಬುರ್ಗಾ ತಾಲೂಕಿನ ಭಾನಾಪುರ ಗ್ರಾಮದ ಬಳಿ ತಲೆ ಎತ್ತುತ್ತಿದೆ. ಅದರ ಮೊದಲ ಘಟಕಕ್ಕೆ ಚಾಲನೆ ನೀಡುವ ಕಾರ್ಯಕ್ರಮವೂ ಒಳಗೊಂಡಿದೆ. ಈಗಾಗಲೇ ಏಕಸ್‌ ಕಂಪನಿಯ ಮಾಲೀಕರು ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿ, ಚರ್ಚೆಯಲ್ಲಿದ್ದಾರೆ ಎನ್ನಲಾಗಿದೆ.

ಕೊಪ್ಪಳ: ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗೂ ತತ್ವಾರ!

ಜಿಲ್ಲೆಯಲ್ಲಿ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿ ಮಾಡುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಆಹ್ವಾನಿಸಲಾಗುತ್ತಿದ್ದು, ಕಾರ್ಯಕ್ರಮ ನಿಗದಿಯಾಗುವ ವಿಶ್ವಾಸವಿದೆ.

ಸಂಗಣ್ಣ ಕರಡಿ, ಸಂಸದ

ಕೊಪ್ಪಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸುವ ಸಾಧ್ಯತೆ ಇದೆ. ಈ ಕುರಿತು ಪ್ರಯತ್ನವಂತೂ ನಡೆದಿದೆ.

ಹಾಲಪ್ಪ ಆಚಾರ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌