ಈ ಹೈಟೆಕ್ ಬಸ್ ನಿಲ್ದಾಣ ಹೊರಗಡೆಯಿಂದಷ್ಟೇ ಸುಂದರವಾಗಿ ಕಾಣುತ್ತೆ. ಆದ್ರೆ ಅಶುಚಿತ್ವದಿಂದ ಕೂಡಿದ್ದು, ಪಾರ್ಕಿಂಗ್ ಲಾಟ್, ಮಳಿಗೆಗಳ ಹರಾಜಾಗದೆ ಲಕ್ಷಾಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ.
ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ನ.04): ಈ ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಆಗಮಿಸ್ತಾರೆ. ಅದರಲ್ಲೂ ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟಕ್ಕೆ ಹೋಗುವ ಭಕ್ತರ ದಂಡೇ ಹರಿದು ಬರುತ್ತೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ರು ಕೂಡ ಸಮಸ್ಯೆಗಳ ಆಗರ ಈ ಬಸ್ ನಿಲ್ದಾಣ. ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಮಳಿಗೆಗಳ ಹರಾಜಾಗದೆ ಹಿನ್ನಲೆ ಸರ್ಕಾರಕ್ಕೂ ನಷ್ಟ, ಎಲ್ಲೆಂದರಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಪ್ರಯಾಣಿಕರು ಓಡಾಡ್ತಿದ್ದಾರೆ. ಇದ್ರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗ್ತಿದೆ. ಪಾರ್ಕಿಂಗ್ ಸ್ಥಳದ ಹರಾಜು ನಡೆಯದಿರೋದ್ರಿಂದ ಅನೈತಿಕ ಚಟುವಟಿಕೆ ತಾಣವಾಗ್ತಿದೆಂಬ ಆರೋಪ ಕೇಳಿಬಂದಿದೆ. ಇದೆಲ್ಲಾ ಎಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.
undefined
ಬಸ್ ನಿಲ್ದಾಣದಲ್ಲಿ ನಿಂತಿರುವ ದ್ವಿಚಕ್ರ ವಾಹನಗಳು. ಅಶುಚಿತ್ವದಿಂದ ಕೂಡಿರುವ ಬಸ್ ನಿಲ್ದಾಣ.ಪಾರ್ಕಿಂಗ್ ವ್ಯವಸ್ಥೆ ಇದ್ರೂ ಹರಾಜಗದೆ ಕುಡುಕರ ಅಡ್ಡೆಯಾಗಿರುವ ಪಾರ್ಕಿಂಗ್ ಸ್ಥಳ. ಯೆಸ್ ಇದೆಲ್ಲಾ ಕಂಡುಬಂದಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ. ಹೌದು ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದಾಗ ಕ್ರೆಡಿಟ್ ಪಡೆಯುವ ಸಲುವಾಗಿ ಅಂದಿನ ಶಾಸಕ ಎನ್ ಮಹೇಶ್ ತರಾತುರಿಯಲ್ಲಿ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿದರು. ಆ ವೇಳೆ ಕಾಂಗ್ರೆಸ್ ನಗರಸಭಾ ಸದಸ್ಯರು ಶಾಸಕರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ಕೂಡ ನಡೆಸಿದ್ದರು. ಅಂದಿನಿಂದ ಇಂದಿನ ಕಾಂಗ್ರೆಸ್ ಸರ್ಕಾರ ಬಂದರೂ ಇದರ ಪರಿಸ್ಥಿತಿ ಮಾತ್ರ ಬದಲಾಗ್ತಿಲ್ಲ. ನಿತ್ಯ ಸಾವಿರಾರು ಪ್ರಯಾಣಿಕರು ಈ ಬಸ್ ನಿಲ್ದಾಣದಿಂದ ಪವಿತ್ರಾ ಯಾತ್ರಾ ಸ್ಥಳಗಳಾದ ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಸೇರಿ ಅನೇಕ ಕಡೆ ಓಡಾಡ್ತಾರೆ.ಕೊಳ್ಳೇಗಾಲದಿಂದಲೂ ಮೈಸೂರು, ಬೆಂಗಳೂರಿಗೂ ಕೂಡ ಪ್ರಯಾಣಿಕರು ಸಂಚಾರ ಮಾಡ್ತಿದ್ದಾರೆ.ಇವರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗ್ತಾರೆ.ಇದು ಬಸ್ ನಿಲ್ದಾಣದ ಬಳಿ ಟ್ರಾಫಿಕ್ ಕಿರಿಕಿರಿಗೆ ಕಾರಣವಾಗಿದೆ.ಸರ್ಕಾರ, ಅಧಿಕಾರಿಗಳು ಎಚ್ಚೆತ್ತು ಪಾರ್ಕಿಂಗ್, ಮಳಿಗೆಗಳ ಹರಾಜು ಕರೆದು ಅನೈತಿಕ ಚಟುವಟಿಕೆ ತಾಣವಾಗೋದ್ನಾ ತಪ್ಪಿಸಲಿ ಅಂತಾ ಒತ್ತಾಯ ಮಾಡ್ತಿದ್ದಾರೆ.
ಚಾಮರಾಜನಗರ: ಸಾಲಕ್ಕೆ ಹೆದರಿ ಕಾರ್ಪೆಂಟರ್ ಆತ್ಮಹತ್ಯೆ
ಇನ್ನೂ ಈ ಹೈಟೆಕ್ ಬಸ್ ನಿಲ್ದಾಣ ಹೊರಗಡೆಯಿಂದಷ್ಟೇ ಸುಂದರವಾಗಿ ಕಾಣುತ್ತೆ. ಆದ್ರೆ ಅಶುಚಿತ್ವದಿಂದ ಕೂಡಿದ್ದು, ಪಾರ್ಕಿಂಗ್ ಲಾಟ್, ಮಳಿಗೆಗಳ ಹರಾಜಾಗದೆ ಲಕ್ಷಾಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ. ಕ್ರೆಡಿಟ್ ಪಾಲಿಟಿಕ್ಸ್ ನಿಂದ ಈ ಬಸ್ ನಿಲ್ದಾಣದ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ ಅಂತಿದ್ದಾರೆ. ಇನ್ನೂ ಸಾರಿಗೆ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದರೆ ನಾವೂ ಎರಡು ಬಾರಿ ಟೆಂಡರ್ ಕರೆದಿದ್ವಿ ಯಾರೂ ಕೂಡ ಬಿಡ್ ಮಾಡಿಲ್ಲ ಅನ್ನುತ್ತಾರೆ.
ಒಟ್ನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಈ ಹೈಟೆಕ್ ಬಸ್ ಟರ್ಮಿನಲ್ ನಲ್ಲಿ ಬಸ್ ಗಳ ತಂಗುವಿಕೆಗಷ್ಟೇ ಯೋಗ್ಯವಾಗಿದೆ. ಮೇಲೆ ತಳಲು ಒಳಗೆ ಉಳುಕು ಎಂಬ ಗಾಧೆಯಂತಹ ಪರಿಸ್ಥಿತಿ ಇದ್ದು, ಇನ್ನಾದ್ರೂ ಶುಚಿತ್ವ ಹಾಗೂ ಪಾರ್ಕಿಂಗ್ ವ್ಯವಸ್ಥೆ, ಮಳಿಗೆಗಳ ಹರಾಜಿಗೆ ಅಧಿಕಾರಿಗಳು ಮುಂದಾಗ್ತಾರಾ ಅನ್ನೋದ್ನ ಕಾದುನೋಡಬೇಕಾಗಿದೆ.