ವಿಜಯಪುರ: ಖಾಸಗಿ ಗೋಶಾಲೆಗಳಿಗೂ ಬರದ ಹೊಡೆತ, ಸಮರ್ಪಕ ಮೇವು ಸಿಗದೆ ಗೋವುಗಳ ಗೋಳಾಟ..!

By Girish Goudar  |  First Published Nov 4, 2023, 1:00 AM IST

ಬರದಿಂದ ಒಂದೆಡೆ ರೈತರು ಕಂಗಾಲಾಗಿದ್ದರೇ, ಇತ್ತ ಗೋಶಾಲೆಗಳು ಸಂಕಟಕ್ಕೆ ಸಿಲುಕಿವೆ. ಅದ್ರಲ್ಲು ಗೋವುಗಳ ಮೇಲಿನ ಪ್ರೀತಿಯಿಂದ ಖಾಸಗಿಯಾಗಿ ಗೋಶಾಲೆ ತೆರೆದು ಗೋವುಗಳ ಪೋಷಣೆಯಲ್ಲಿ ತೊಡಗಿದ್ದ ಗೋಪಾಲಕರು ಆತಂಕದಲ್ಲಿದ್ದಾರೆ. ಕಾರಣ ಗೋವುಗಳಿಗೆ ದಿನದಿಂದ ದಿನಕ್ಕೆ ಮೇವಿನ ಕೊರತೆ ಉಂಟಾಗುತ್ತಿದ್ದು ಗೋವುಗಳಿಗೆ ಮೇವು ಪುರೈಸಲು ಗೋಶಾಲೆ ಮಾಲಿಕರು ಪರದಾಟ ಅನುಭವಿಸುತ್ತಿದ್ದಾರೆ.


ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ(ನ.04):  ಅದೆಷ್ಟೋ ಜನ ಗೋವುಗಳ ಮೇಲಿನ ಪ್ರೀತಿಗೆ ತಾವೇ ಖಾಸಗಿ ಗೋಶಾಲೆಗಳನ್ನ ತೆರೆದಿದ್ದಾರೆ. ಆದ್ರೆ ಬರದ ಹೊಡೆತಕ್ಕೆ ಗೋಸೇವಕರು ಗೋವುಗಳನ್ನ ಸಾಕೋದಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಇಲ್ಲದೆ, ಸಮರ್ಪಕ ಮೇವು ಸಿಗದೆ ಈಗ ಗೋಪಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Latest Videos

undefined

ಖಾಸಗಿ ಗೋಶಾಲೆಗಳಿಗೆ ಬರ ಕಂಟಕ..!

ರಾಜ್ಯದಲ್ಲಿ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಆತಂಕದಲ್ಲಿದ್ದಾರೆ. ಬಿತ್ತಿದ ಬೆಳೆಯು ಕೈಗೆ ಬಾರದೆ ರೈತರು ಕಂಗಾಲಾಗಿದ್ದಾರೆ. ಈ ನಡುವೆ ಬರದ ಜಿಲ್ಲೆ ಎಂದಲೇ ಕರೆಯಿಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಮಳೆರಾಯ ಕೈಕೊಟ್ಟಿದ್ದಾನೆ. ಈಗಾಗಲೇ ಜಿಲ್ಲೆಯಲ್ಲಿ ಬರ ಘೋಷಣೆಯಾಗಿದೆ. ಬರದಿಂದ ಒಂದೆಡೆ ರೈತರು ಕಂಗಾಲಾಗಿದ್ದರೇ, ಇತ್ತ ಗೋಶಾಲೆಗಳು ಸಂಕಟಕ್ಕೆ ಸಿಲುಕಿವೆ. ಅದ್ರಲ್ಲು ಗೋವುಗಳ ಮೇಲಿನ ಪ್ರೀತಿಯಿಂದ ಖಾಸಗಿಯಾಗಿ ಗೋಶಾಲೆ ತೆರೆದು ಗೋವುಗಳ ಪೋಷಣೆಯಲ್ಲಿ ತೊಡಗಿದ್ದ ಗೋಪಾಲಕರು ಆತಂಕದಲ್ಲಿದ್ದಾರೆ. ಕಾರಣ ಗೋವುಗಳಿಗೆ ದಿನದಿಂದ ದಿನಕ್ಕೆ ಮೇವಿನ ಕೊರತೆ ಉಂಟಾಗುತ್ತಿದ್ದು ಗೋವುಗಳಿಗೆ ಮೇವು ಪುರೈಸಲು ಗೋಶಾಲೆ ಮಾಲಿಕರು ಪರದಾಟ ಅನುಭವಿಸುತ್ತಿದ್ದಾರೆ.

ಟಿಪ್ಪು ಅಪ್ಪಟ ದೇಶಭಕ್ತ, ಬಿಜೆಪಿ ನಾಯಕರಿಂದ ಅಪಪ್ರಚಾರ: ಸಚಿವ ಎಂ.ಬಿ. ಪಾಟೀಲ

ಮಳೆ ಇಲ್ಲದೆ ಕೈಗೆ ಬಾರದ ಬೆಳೆ..!

ವಿಜಯಪುರ ಜಿಲ್ಲೆಯಾದ್ಯಂತ ಮುಂಗಾರು-ಹಿಂಗಾರು ಮಳೆಗಳು ಕೈಕೊಟ್ಟ ಕಾರಣ ಬಿತ್ತಿದ ಬೆಳೆಯೆ ಕೈಗೆ ಬಂದಿಲ್ಲ. ಅದ್ರಲ್ಲು ಕೆಲವೆಡೆ ಬಿತ್ತನೆಯು ನಡೆದಿಲ್ಲ. ಪ್ರಮುಖವಾಗಿ ಜಾನುವಾರುಗಳಿಗೆ ಮೇವಾಗಿ ಉಪಯೋಗವಾಗ್ತಿದ್ದ ಬಿಳಿ ಜೋಳ-ಗೋವಿನ ಜೋಳ ಎರಡು ಬೆಳೆಗಳು ಬಂದಿಲ್ಲ. ಹೀಗಾಗಿ ಸಹಜವಾಗಿಯೇ ಮೇವಿನ ಕೊರೆತೆ ಉಂಟಾಗುತ್ತಿದೆ. ಜೋಳ ಬೆಳೆದಲ್ಲಿ ಕಟಾವಿನ ಬಳಿಕ ಜಾನುವಾರುಗಳಿಗು ಮೇವಾಗಿ ಬಳಕೆಯಾಗ್ತಿತ್ತು. ರೈತರು ಸಹ ಕಟಾವಿನ ಬಳಿಕ ಹಸಿ-ಒಣ ಮೇವನ್ನ ಕಡಿಮೆ ದರಕ್ಕೆ ಮಾರಾಟ ಮಾಡ್ತಿದ್ರು. ಅದ್ರಲ್ಲು ಗೋಶಾಲೆಗಳೀಗೆ ಪ್ರೀಯಾಗಿಯೇ ಕೆಲ ರೈತರು ನೀಡ್ತಿದ್ರು. ಆದ್ರೀಗ ಬೆಳೆಯೇ ಬಂದಿಲ್ಲ ಅಂದಾಗ ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರ್ಕೆಟ್‌ನಲ್ಲಿ ಮೇವಿದ ದರ ಗಗನಕ್ಕೆ..!

ಮಳೆಗಾಲಲ್ಲಿ ಅಲ್ಲಲ್ಲಿ ಮೇವು ಬೆಳೆಯುತ್ತಿತ್ತು, ಜಾನುವಾರುಗಳಿಗೆ ಸುಲಭವಾಗಿ ಲಭ್ಯವಾಗ್ತಿತ್ತು. ಮಾರ್ಕೆಟ್‌ ನಲ್ಲು ಹಸಿರು ಹುಲ್ಲು-ಜೋಳದ ಮೇವು ಸಹ ಯತೆಚ್ಚವಾಗಿ ಸಿಗುತ್ತಿತ್ತು. ಖಾಸಗಿ ಗೋಶಾಲೆಗಳು ಸಹ ಕಡಿಮೆ ದರಕ್ಕೆ ಮೇವು ಖರೀದಿ ಮಾಡಿ ಗೋವುಗಳಿಗೆ ನೀಡ್ತಿದ್ರು. ಆದ್ರೀಗ ಮಾರ್ಕೆಟ್‌ ನಲ್ಲಿ ಮೇವಿನ ಕೊರತೆ ಉಂಟಾಗ್ತಿದ್ದು, ಕೇವಲ 100 ರುಪಾಯಿಗೆ ಸಿಗ್ತಿದ್ದ ಮೇವು, 500 ಕೊಟ್ಟರು ಸಿಗದಂತಾಗಿದೆ.  ಹೀಗಾಗಿ ಅಷ್ಟೊಂದು ಹಣ ಖರ್ಚು ಮಾಡಿ ಗೋವುಗಳಿಗೆ ಹೇಗೆ ತಿನ್ನಿಸೋದು ಅಂತಾ ಖಾಸಗಿ ಗೋಶಾಲೆಗಳ ಗೋಪಾಲಕರು ಅಳಲು ತೋಡಿಕೊಳ್ತಿದ್ದಾರೆ.. ಮಳೆಗಾಲದಲ್ಲೆ ಈ ಪರಿಸ್ಥಿತಿ ಇದೆ, ಬೇಸಿಗೆಯಲ್ಲಿ ಗೋವುಗಳ ಪರಿಸ್ಥಿತಿ ಹೇಗೆ ಅಂತಾ ಆತಂಕ ಹೊರಹಾಕ್ತಿದ್ದಾರೆ..

ರೈತರಿಗೆ ಪ್ರತ್ಯೇಕ ಗ್ಯಾರಂಟಿ ಯೋಜನೆ ಜಾರಿ ಮಾಡಿ: ಸಿದ್ದನಗೌಡ ಪಾಟೀಲ

ಖಾಸಗಿ ಗೋಶಾಲೆಗಳಲ್ಲಿ ಗೋವುಗಳ ಗೋಳಾಟ..!

ವಿಜಯಪುರ ಜಿಲ್ಲೆಯಲ್ಲಿ 1 ಸರ್ಕಾರಿ ಗೋಶಾಲೆ ಇದೆ, ಮೂರು ಅನುದಾನಿತ ಗೋಶಾಲೆ, ಖಾಸಗಿ ಗೋಶಾಲೆ ಸೇರಿ 8 ಗೋಶಾಲೆಗಳಿವೆ. ಪ್ರತಿ ಖಾಸಗಿ ಗೋಶಾಲೆಗಳಲ್ಲಿ 50ಕ್ಕು ಅಧಿಕ ಗೋವುಗಳಿವೆ. ಇತ್ತ ಸಮರ್ಪಕ ಮೇವು ಸಿಗದೆ ಇರೋದ್ರಿಂದಾಗಿ ಖಾಸಗಿ ಗೋಶಾಲೆ ಮಾಲಿಕರಲ್ಲಿ ಆತಂಕ ಶುರುವಾಗಿದೆ. ಗೋವುಗಳಿಗೆ ಹಸಿ ಮೇವಿನ ಬದಲಿಗೆ ಒಣ ಮೇವನ್ನೆ ತಿನ್ನಿಸೋ ಪರಿಸ್ಥಿತಿ ಎದುರಾಗಿದೆ.

ಉಚಿತ ಮೇವು ಪುರೈಸಿ ; ಗೋಪಾಲಕರ ಮನವಿ..!

ಪ್ರತಿ ವರ್ಷ ಮಳೆಗಾಲಲ್ಲಿ ರೈತರಿಂದ ಉಚಿತವಾಗಿಯೇ ಸಿಗ್ತಿದ್ದ ಜೋಳ-ಗೋವಿನ ಜೋಳದ ಹಸಿ ಮೇವು ಸಹ ಈಗ ಬರದಿಂದಾಗಿ ಸಿಗ್ತಿಲ್ಲ. ಹೀಗಾಗಿ ಸರ್ಕಾರ ಸರ್ಕಾರಿ ಗೋಶಾಲೆಗಳ ಜೊತೆಗೆ ಖಾಸಗಿ ಗೋಶಾಲೆಗಳಿಗು ಮೇವು ಪುರೈಸಬೇಕು. ಹೊರ ರಾಜ್ಯಗಳಿಂದಲಾದ್ರು ಮೇವು ತರಿಸಿ ಗೋವುಗಳ ಹಿತಕಾಯಬೇಕು ಎಂದು ಗೋವು ಪ್ರೇಮಿಗಳು ಆಗ್ರಹ ಮುಂದಿಡ್ತಿದ್ದಾರೆ.. ಗೋವುಗಳ ಸೇವೆ ಮಾಡಬೇಕು ಎಂದು ಗೋಶಾಲೆ ತೆರೆದವರಿಗೆ ಬರ ಶಾಕ್‌ ಕೊಟ್ಟಿದೆ. ಹೀಗಾಗಿ ಸರ್ಕಾರ, ಜಿಲ್ಲಾಡಳಿತ ಜಿಲ್ಲೆಯಿಂದ ನೆರೆಯ ಮಹಾರಾಷ್ಟ್ರಕ್ಕೆ ಸಪ್ಲೈ ಆಗುವ ಮೇವಿನ ಬಗ್ಗೆ ಜಾಗೃತೆವಹಿಸಬೇಕಿದೆ. ಖಾಸಗಿ ಗೋಶಾಲೆಗಳ ನೆರವಿಗೆ ಬರಬೇಕಿದೆ. 

click me!