ತಾಲೂಕಿನ ಕಿರವತ್ತಿ, ಮದನೂರು ಹಾಗೂ ಮುಂಡಗೋಡ ತಾಲೂಕಿನ ಮೈನಳ್ಳಿ, ಗುಂಜಾವತಿ ಗ್ರಾಪಂ ವ್ಯಾಪ್ತಿಯ ಸುಮಾರು 100 ಕೆರೆಗಳಿಗೆ .274.50 ಕೋಟಿ ವೆಚ್ಚದಲ್ಲಿ ಬೇಡ್ತಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಯಲ್ಲಾಪುರ (ಡಿ.23) : ತಾಲೂಕಿನ ಕಿರವತ್ತಿ, ಮದನೂರು ಹಾಗೂ ಮುಂಡಗೋಡ ತಾಲೂಕಿನ ಮೈನಳ್ಳಿ, ಗುಂಜಾವತಿ ಗ್ರಾಪಂ ವ್ಯಾಪ್ತಿಯ ಸುಮಾರು 100 ಕೆರೆಗಳಿಗೆ .274.50 ಕೋಟಿ ವೆಚ್ಚದಲ್ಲಿ ಬೇಡ್ತಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರÜ ಸತತ ಪ್ರಯತ್ನದಿಂದಾಗಿ ಈ ಯೋಜನೆಗೆ ಇಷ್ಟುದೊಡ್ಡ ಪ್ರಮಾಣದ ಹಣ ಮಂಜೂರಿಯಾಗಿದೆ. ಈ ಹಿಂದೆ ಮುಂಡಗೋಡ ಮತ್ತು ಬನವಾಸಿಯಲ್ಲಿ ವಿವಿಧ ನೀರಾವರಿ ಯೋಜನೆಗಳಿಗೆ .700 ಕೋಟಿಗೂ ಹೆಚ್ಚಿನ ಅನುದಾನವನ್ನು ತಂದು ಆ ಯೋಜನೆಗಳು ಉದ್ಘಾಟನೆ ಹಂತಕ್ಕೆ ಬಂದಿದೆ. ಬೇಡ್ತಿ ನದಿಯ ಮತ್ತು ಬನವಾಸಿ ವರದಾ ನದಿಯ ನೀರನ್ನು ಕೆರೆಗಳಿಗೆ ತುಂಬುವ ಯೋಜನೆ ರೂಪಿಸಲಾಗಿತ್ತು.
undefined
National Farmers Day 2023 : ಇಂದು ‘ಜಲ ಸಂಜೀವಿನಿ -ರೈತ ಸಂವಾದ
ಅಂತೆಯೇ ಇಂದಿನ ಸಂಪುಟದ ಸಭೆಯಲ್ಲಿ ಯಾರೂ ನಿರೀಕ್ಷಿಸದ ತೀರಾ ಬಡತನದಲ್ಲಿರುವ ರೈತರಿಗೆ ವಾಣಿಜ್ಯ ಬೆಳೆ ಬೆಳೆಯುವುದಕ್ಕೂ ನೂರಾರು ಎಕರೆಗಳಿಗೆ ಮಳೆಗಾಲದ ನಂತರವೂ ನೀರಿನ ಸೌಲಭ್ಯ ಒದಗಿಸುವ ಈ ಯೋಜನೆಯಿಂದ ಆ ಪ್ರದೇಶದ ಜನ ನೆಮ್ಮದಿ ನೀಡಲಿರುವ ಈ ಯೋಜನೆಗೆæ .274.50 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಂತಾಗಿದೆ.
ಈ ಪ್ರದೇಶದಲ್ಲಿ ಈಗಾಗಲೇ ರೈತರು ಕಬ್ಬು, ಹತ್ತಿ, ಅಡಿಕೆ, ಗೋವಿನಜೋಳ ಬೆಳೆಯುತ್ತಾ ಬಂದಿದ್ದಾರೆ. ಇದರಿಂದ ರೈತರಿಗೆ ಒಂದು ದೊಡ್ಡ ರೀತಿಯ ಸಹಾಯ ಮಾಡುವಂತಾಗುತ್ತದೆ ಎಂದು ಸ್ಥಳೀಯ ರೈತರು ಸಂತಸ ಹಂಚಿಸಿಕೊಂಡಿದ್ದಾರೆ. ಕ್ಷೇತ್ರದ 4 ಪಂಚಾಯತಗಳಿಗೆ ಕುಡಿಯುವ ನೀರಿನ ಅನುಕೂಲ, ವಾಣಿಜ್ಯ ಬೆಳೆ ಬೆಳೆಯುವುದಕ್ಕೂ ಸಹಕಾರಿ. ಮಳೆ ಇಲ್ಲದ ಕಾಲಘಟ್ಟದಲ್ಲಿ ನೀರು ದೊರೆಯುವ ಸಚಿವರ ಪ್ರಯತ್ನ ಶ್ಲಾಘನೀಯ ಎಂದು ಅವರು ತಿಳಿಸಿದ್ದಾರೆ.
ಆಮಿಷಕ್ಕೆ ಒಳಗಾಗದೇ ರೈತರ ಏಳ್ಗೆಗೆ ಕಟಿಬದ್ಧರಾಗಿ: ಕೋಡಿಹಳ್ಳಿ ಚಂದ್ರಶೇಖರ
ರೈತರಿಗೆ ಬಲ ನೀಡುವೆ: ಹೆಬ್ಬಾರ
ಈ ಭಾಗದಲ್ಲಿ ಸಮರ್ಪಕ ನೀರಾವರಿ ಯೋಜನೆಗಳಿಲ್ಲದೆ ಸಾವಿರಾರು ಅನ್ನದಾತರಿಗೆ ಕಷ್ಟವಾಗಿತ್ತು. ಇದನ್ನು ಮನಗಂಡು ಸರ್ಕಾರದ ಮುಂದೆ ಹಲವು ಯೋಜನೆಗಳನ್ನು ಇಡಲಾಗಿತ್ತು. ನಮ್ಮ ಸರ್ಕಾರ ಎಲ್ಲ ಯೋಜನೆಗಳಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿದೆ. ಕೃಷಿಕನಾಗಿ ನಾನು ರೈತರ ಕಷ್ಟಅರಿತಿದ್ದೇನೆ. ದೇಶದ ಜನತೆಗೆ ಅನ್ನ ನೀಡುವ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ಮಾಡಲು ಮೊದಲ ಆದ್ಯತೆ ನೀಡಲಾಗಿದೆ. ಈ ನೀರಾವರಿ ಯೋಜನೆಗಳಿಂದ ರೈತರ ಬಾಳಿನಲ್ಲಿ ಹೊಸ ಭರವಸೆ ಮೂಡಲಿದೆ. ಸಾಕಷ್ಟುನೀರು ಸಿಕ್ಕರೆ ರೈತರು ಆರ್ಥಿಕ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗುತ್ತಾರೆ. ಯಾವಾಗ ರೈತರು ಸಬಲರಾಗುತ್ತಾರೋ ಆಗ ದೇಶ ಸಹ ಸಶಕ್ತವಾಗುತ್ತದೆ. ಎಲ್ಲಿಯವರೆಗೆ ಅಧಿಕಾರವಿರುತ್ತದೋ ಅಲ್ಲಿಯವರೆಗೆ ರೈತರ ಪರವಾಗಿ ಕೆಲಸ ಮಾಡುತ್ತೇನೆ. ಒಳ್ಳೆಯ ಯೋಜನೆ ಜಾರಿ ಮಾಡಿ ರೈತರಿಗೆ ಬಲ ನೀಡುವ ಪ್ರಯತ್ನ ಮಾಡುತ್ತೇನೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.