ಕೊರೋನಾ ವಾರಿಯರ್ಸ್‌ ಕುಟುಂಬಸ್ಥರ ಜೊತೆ ಕಮಿಷನರ್ ವಿಡಿಯೊ ಕಾನ್ಫರೆನ್ಸ್

Kannadaprabha News   | Asianet News
Published : Apr 22, 2020, 09:03 AM ISTUpdated : Apr 22, 2020, 01:12 PM IST
ಕೊರೋನಾ ವಾರಿಯರ್ಸ್‌ ಕುಟುಂಬಸ್ಥರ ಜೊತೆ ಕಮಿಷನರ್ ವಿಡಿಯೊ ಕಾನ್ಫರೆನ್ಸ್

ಸಾರಾಂಶ

ತಮ್ಮ ವಿಶೇಷ ಕಾರ್ಯಗಳ ಮೂಲಕವೇ ಸುದ್ದಿಯಾಗುವ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಮಂಗಳವಾರ ಕೊರೋನಾ ವಾರಿಯರ್ಸ್ ಕುಟುಂಬಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ.  

ಮಂಗಳೂರು(ಏ.22): ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೋವಿಡ್‌ ವಾರಿಯರ್‌ ಆಫ್‌ ದ ಡೇ ಗೌರವ ಪಡೆದ ಪೊಲೀಸ್‌ ಸಿಬ್ಬಂದಿ ಕುಟುಂಬಗಳ ಜತೆ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೋವಿಡ್‌-19 ಜಾಗೃತಿ ಹಿನ್ನೆಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿಯನ್ನು ಕೋವಿಡ್‌ ವಾರಿಯರ್‌ ಎಂದು ಗುರುತಿಸಿ ಗೌರವಿಸಲಾಗುತ್ತಿದೆ.

'ನನ್ನನ್ನು ಕ್ಷಮಿಸಿ': ಲಾಕ್‌ಡೌನ್‌ ಉಲ್ಲಂಘಿಸಿದವರ ಕೈಯಲ್ಲೇನಿದೆ ನೋಡಿ..!

ಈ ಸಿಬ್ಬಂದಿಯ ಕುಟುಂಬ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಆಯುಕ್ತರು, ವಾರಿಯರ್‌ಗಳ ಕರ್ತವ್ಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಕುಟುಂಬಕ್ಕೆ ಧೈರ್ಯ ಹೇಳಿದರು.

ಕೋವಿಡ್‌ ವಾರಿಯರ್‌ ಗೌರವ ಪಡೆದ ಸಂತೋಷ್‌, ನಯನಾ, ಗೋವಿಂದಾ, ಬಸವರಾಜ್‌ ಪಾಟೀಲ್, ಶಿವಪ್ಪ, ರಂಜನ್‌ ಕುಮಾರ್‌, ಸೋಮನಗೌಡ ಚೌಧರಿ, ಪುನೀತ್‌ ಮತ್ತಿತರರು ಇದ್ದರು.

 

"

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್