ಪಿಎಫ್‌ಐಗೆ ಫಂಡಿಂಗ್ ಮಾಡಿದವರ ತನಿಖೆ ಶೀಘ್ರ; ಸಚಿವ ಸುನೀಲ್ ಕುಮಾರ್

By Ravi JanekalFirst Published Sep 28, 2022, 1:54 PM IST
Highlights
  • ಪಿಎಫ್ಐ ಗೆ ಫಂಡಿಂಗ್ ಮಾಡಿದವರು, ಬೆಂಬಲ ನೀಡಿದವರ ತನಿಖೆ ಮುಂದಿನ ದಿನಗಳಲ್ಲಿ ಆಗುತ್ತೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿ (ಸೆ.28) : ಪಿಎಫ್ಐ ಗೆ ಫಂಡಿಂಗ್ ಮಾಡಿದವರು, ಬೆಂಬಲ ನೀಡಿದವರ ತನಿಖೆ ಮುಂದಿನ ದಿನಗಳಲ್ಲಿ ಆಗುತ್ತೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ. ಪಿಎಫ್ಐ ಬ್ಯಾನ್ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಅವರು, ಪಿಎಫ್ಐ ಸಂಘಟನೆ ಬ್ಯಾನ್ ಮಾಡಿರುವುದು ಸ್ವಾಗತಾರ್ಹ. ಕಠಿಣ ನಿರ್ಧಾರ ತೆಗೆದುಕೊಂಡ ಪ್ರಧಾನಿ, ಗೃಹ ಸಚಿವರಿಗೆ ಅಭಿನಂದನೆ ಎಂದರು.

PFI ಕಾರ್ಯಕರ್ತರನ್ನ ಮುಸ್ಲಿಮರೇ ಸಮುದಾಯದಿಂದ ಹೊರಹಾಕಬೇಕು - ಉಡುಪಿ ಶಾಸಕ ರಘುಪತಿ ಭಟ್

Latest Videos

ಬಹಳ ವರ್ಷದಿಂದ ಕರ್ನಾಟಕ(Karnataka) ಸೇರಿ ಇಡೀ ದೇಶದಲ್ಲಿ ಹಿಂಸೆಯನ್ನು ಪ್ರಚೋದಿಸಿ ಈ ಸಂಘಟನೆ ವ್ಯವಸ್ಥೆಗೆ ಸವಾಲೊಡ್ಡಿತ್ತು. ಪಿಎಫ್ಐ ಬ್ಯಾನ್(PFI Ban) ಆಗಿರೋದು ನಮಗೆಲ್ಲ ಬಹಳ ಸಂತೋಷ. PFI  ಹಿಂಸೆ ಮಾಡುತ್ತಾ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿತ್ತು. ಹಿಂದೂ(Hindu) ಸಂಘಟನೆಯ ಟಾರ್ಗೆಟ್ ಹಾಗೂ ಹತ್ಯೆ ಪಿಎಫ್ಐ ಕೆಲಸವಾಗಿತ್ತು. ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಈ ಸಂಘಟನೆ ಮುಂದಾಗಿತ್ತು ಎಂದು ಹೇಳಿದ್ದಾರೆ.

ಸೂಕ್ತ ಸಾಕ್ಷ್ಯಾಧಾರ ಇಟ್ಟುಕೊಂಡು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಕಾಂಗ್ರೆಸ್(Congress) ಪೋಷಣೆಯೇ PFI ಬೆಳವಣಿಗೆಗೆ ಕಾರಣ ಎಂದ ಅವರು, ಸಿದ್ದರಾಮಯ್ಯ(Siddaramaiah) ಸರ್ಕಾರದಲ್ಲಿ 175 ಕೇಸ್ ಗಳನ್ನು ವಾಪಸ್ಸು ಪಡೆದಿದ್ದರು. ನಮ್ಮ ಸರಕಾರ ಬದ್ಧತೆ ತೋರಿಸಿ PFI ನಿಷೇಧಿಸಿದೆ. 

ಸಮಾಜಘಾತಕ ಶಕ್ತಿಗಳನ್ನ ಬಗ್ಗುಬಡಿಯಲು ಸರ್ಕಾರ ಸಂಕಲ್ಪ ಮಾಡಿದೆ. ದಕ್ಷಿಣ ಕನ್ನಡ(Dakshina Kannada) ಹಾಗೂ ಶಿವಮೊಗ್ಗ(Shivamogga) ಘಟನೆಯಿಂದ ಜನರಲ್ಲಿ ಭಯದ ವಾತಾವರಣ ಇತ್ತು. NIA ಹತ್ತು ದಿನಗಳ ತನಿಖೆ ನಂತರ ನಿಷೇಧ ಮಾಡಿದೆ. ಹಿಂದೆ ವಾಜಪೇಯಿ(Vajapeyee) ಸರ್ಕಾರ ಇದ್ದಾಗ ಸಿಮೀ ಉಗ್ರ ಸಂಘಟನೆಯನ್ನೂ ನಾವೇ ನಿಷೇಧ ಮಾಡಿದ್ದೆವು. ಫಂಡಿಂಗ್ ಮಾಡಿದವರು, ಬೆಂಬಲ ನೀಡಿದವರ ತನಿಖೆ ಮುಂದಿನ ದಿನಗಳಲ್ಲಿ ಆಗುತ್ತೆ. ಸಮಾಜದಲ್ಲಿ ನೆಮ್ಮದಿ ಸೃಷ್ಟಿಸುವುದು ನಮ್ಮ ಆಶಯ. ಭಾರತದಲ್ಲಿ ಇದ್ದು ಭಾರತವನ್ನು ಪ್ರೀತಿಸಿ ನೆಲದ ಸಂಸ್ಕೃತಿಯನ್ನು ಗೌರವಿಸಿ ಎಂದು ಹೇಳಿದ್ದಾರೆ.

ನವರಾತ್ರಿ ಸಂದರ್ಭ ದೇಶಕ್ಕೆ ಶುಭಸುದ್ದಿ ಕೊಟ್ಟ ಅಮಿತ್ ಶಾ ಗೆ ಅಭಿನಂದನೆ- ಯಶ್‌ಪಾಲ್ ಸುವರ್ಣ

ದೇಶಾದ್ಯಂತ ಕಾರ್ಯಾಚರಣೆ ಮಾಡಿದ ಎನ್ ಐಎ ಗೆ ಧನ್ಯವಾದ ತಿಳಿಸಿದ್ದಾರೆ. ಈ ಮತಾಂಧ ಶಕ್ತಿ ಗಳನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆ. ದೇಶಾದ್ಯಂತ ಕಾರ್ಯಾಚರಣೆ ಮಾಡಿದ ಎನ್ಐಎ ಗೆ ಧನ್ಯವಾದ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಹೇಳಿದ್ದಾರೆ. ಇಂತಹಾ ಕಠಿಣ ಕ್ರಮ ಮೋದಿ ಸರಕಾರದಿಂದ ಮಾತ್ರ ಸಾಧ್ಯ, ನವರಾತ್ರಿ ಸಂದರ್ಭವೇ ದೇಶದ್ರೋಹಿಗಳನ್ನು ಮಟ್ಟಹಾಕುವ ನಿರ್ಧಾರ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah)ಗೆ ಅಭಿನಂದನೆ ತಿಳಿಸಿದರು. .

ಇದು ಇಡೀ ದೇಶದ ಜನ ಸಿಹಿ ಹಂಚುವ ಕ್ಷಣ. ಎನ್ ಐಎ ತನಿಖೆ ಸಂದರ್ಭ ಹಲವಾರು ವಿಚಾರ ಬೆಳಕಿಗೆ ಬಂದಿದೆ. ಹಿಜಾಬ್ ವಿವಾದ(Hijab row) ಹುಟ್ಟುಹಾಕಿದ ಬೆನ್ನೆಲುಬು ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. ಕರಾವಳಿ ಭಾಗ ಶಾಂತಿಯುತವಾಗಿರಲು ಎನ್ ಐಎ ಗೆ ಬೆಂಬಲಿಸುತ್ತೇವೆ. ಅಮಿತ್ ಶಾ ಸೂಕ್ತ ದಾಖಲೆಗಳನ್ನು ಪಡೆದು ಕ್ರಮ ಕೈಗೊಂಡಿದ್ದಾರೆ ಎಂದರು. ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗೆ ದೇಶದಲ್ಲಿ ಅವಕಾಶ ಇಲ್ಲ. ವಿದೇಶಿ ಹಣ ವರ್ಗಾವಣೆ, ಹಿಂಸೆ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾಂಗ್ರೆಸ್(Congress) ಸರಕಾರ PFI ಗೆ ಬೆಂಬಲವಾಗಿ ನಿಂತಿತ್ತು. ದುಷ್ಕೃತ್ಯ ದೇಶದ್ರೋಹಿ ಚಟುವಟಿಕೆಗೆ ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ ಸರಕಾರ ಉಗ್ರ ಸಂಘಟನೆಗಳ ಕಾರ್ಯಕರ್ತರ ಕೇಸ್ ವಾಪಾಸ್ ತೆಗೆದಿತ್ತು.

PFI Ban: ಪಿಎಫ್‌ಐ ಬ್ಯಾನ್‌ ಆಯ್ತು, ಎಸ್‌ಡಿಪಿಐ ಕಥೆ ಏನು?

PFI ದೇಶದ ಪರ, ಸಮಾಜದ ಉದ್ಧಾರಕ್ಕೆ ಎಂದೂ ಕೆಲಸ ಮಾಡಿಲ್ಲ. ಗಲಭೆ ಸೃಷ್ಟಿಸೋದೇ PFI ಕೆಲಸವಾಗಿತ್ತು. ದೇಶವಿರೋಧಿ ಚಟುವಟಿಕೆಯಲ್ಲಿ SDPI ಶಾಮೀಲಾಗಿದ್ದರೆ ಅದನ್ನೂ ಕೂಡ ಕೇಂದ್ರ ಸರ್ಕಾರ ನಿಷೇಧಿಸಲಿದೆ ಎಂದು ಯಶ್‌ಪಾಲ್ ಸುವರ್ಣ ಹೇಳಿದರು.

click me!