ಪಿಎಫ್ಐ ಸಂಘಟನೆಯಲ್ಲಿ ಇರುವವರನ್ನು ಮುಸ್ಲಿಂ ಸಮುದಾಯದಿಂದ ಹೊರಹಾಕಿ, ಮೌಲ್ವಿಗಳು ಅವರನ್ನು ದೂರವಿಡಿ ಎಂದು ಉಡುಪಿ ಶಾಸಕ ಕೆ ರಘುಪತಿ ಭಟ್ ಆಗ್ರಹಿಸಿದ್ದಾರೆ.
ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಸೆ.28) : ಪಿಎಫ್‌ಐ ಸಂಘಟನೆಯಲ್ಲಿ ಇರುವವರನ್ನು ಮುಸ್ಲಿಂ ಸಮುದಾಯದಿಂದ ಹೊರಹಾಕಿ, ಮೌಲ್ವಿಗಳು ಅವರನ್ನು ದೂರವಿಡಿ ಎಂದು ಉಡುಪಿ ಶಾಸಕ ಕೆ ರಘುಪತಿ ಭಟ್ ಆಗ್ರಹಿಸಿದ್ದಾರೆ. PFI ಮತ್ತು ಅದರ ಅಂಗ ಸಂಘಟನೆಗಳನ್ನು ಬ್ಯಾನ್(Ban) ಮಾಡಿರುವ ಹಿನ್ನೆಲೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, PFI ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಈ ಕೆಲಸ ಯಾವತ್ತೋ ಆಗಬೇಕಿತ್ತು ಎಂದರು.
ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ PFI ವಿರುದ್ಧ NIA ದಾಳಿ, 45 ಶಂಕಿತರು ಅರೆಸ್ಟ್!
ಇದೀಗ ಎಲ್ಲಾ ರಾಜ್ಯಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿದ ನಂತರ ಬ್ಯಾನ್ ಮಾಡಿದ್ದಾರೆ.ಸಂಪೂರ್ಣ ಸಾಕ್ಷ್ಯಾಧಾರಗಳೊಂದಿಗೆ ಬ್ಯಾನ್ ಮಾಡಿದ್ದಾರೆ.ವಿದೇಶಿ ಉಗ್ರಸಂಘಟನೆಗಳ ಜೊತೆ ಪಿಎಫ್‌ಐ ಕೈಜೋಡಿಸಿದೆ. ಇದು ಸಾಬೀತಾದ ನಂತರ ಬ್ಯಾನ್ ಮಾಡಲಾಗಿದೆ ಎಂದು ಹೇಳಿದರು.
ಸಮಾಜ ಒಡೆಯುವ ಕೆಲಸದಲ್ಲಿ ಈ ಸಂಘಟನೆ ನಿರತವಾಗಿತ್ತು. ಉಡುಪಿ(Udupi)ಯಲ್ಲಿ ಆರಂಭವಾದ ಹಿಜಾಬ್ ಪ್ರಕರಣ(Hijab Case) ಕೂಡ PFI ನಿಷೇಧಕ್ಕೆ ಒಂದು ಕಾರಣ. ನಾವು ಕೂಡ ಸಾಕಷ್ಟು ಮಾಹಿತಿಗಳನ್ನ ಗುಪ್ತಚರ ಇಲಾಖೆಗೆ ನೀಡಿದ್ದೆವು. ಹಿಜಾಬ್ ಗಲಾಟೆಯಲ್ಲಿ ಪಿಎಫ್ಐ ಪಾತ್ರ ಸಾಬೀತಾಗಿದೆ ಎಂದರು.
PFI ಗೆ ಸೇರ್ಪಡೆಗೊಂಡ ನಂತರ ಉಡುಪಿ(Udupi) ಕಾಲೇಜಿನ ವಿದ್ಯಾರ್ಥಿನಿಯರ ವರ್ತನೆ ಬದಲಾಗಿತ್ತು. ಅವರು ಟ್ವಿಟರ್(Twitter) ಮೂಲಕ ದೇಶ ವಿರೋಧಿ ಹೇಳಿಕೆಗಳನ್ನು ಹಾಕಿದ್ದರು. PFI ನೇರವಾಗಿ ಈ ವಿಚಾರದಲ್ಲಿ ಪಾತ್ರವಹಿಸಿತ್ತು. PFI ಇರದಿದ್ದರೆ ಹಿಜಾಬ್ ವಿವಾದ ಆಗುತ್ತಿರಲಿಲ್ಲ. ಗುಪ್ತ ಸ್ಥಳದಲ್ಲಿ ಉಡುಪಿಯ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗಿತ್ತು. ಧರ್ಮದ ಅಂಧ ಶ್ರದ್ದೆ ಬೆಳೆಸಲು ತರಬೇತಿ ನೀಡಲಾಗಿತ್ತು. ಈ ಬಗ್ಗೆ ನಾನು ಈ ಮೊದಲೇ ಆರೋಪಿಸಿದ್ದೆ ಈಗ ಎಲ್ಲವೂ ನಿಜವಾಗಿದೆ ಎಂದರು.
ಪಿಎಫ್‌ಐ ವಿರುದ್ಧದ ಕಾರ್ಯಾಚರಣೆ ಹಿಂದೆ ಆರ್‌ಎಸ್‌ಎಸ್ ಇದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಪಿಎಫ್ ಐ ಬಗ್ಗೆ ಯಾರೂ ಹೇಳಬೇಕಾಗಿಲ್ಲ, ಸಮಾಜಕ್ಕೆ ಗೊತ್ತು. ಆರೆಸ್ಸೆಸ್ ಹೇಳುವುದು ಬೇಡ ನೈಜ ಮುಸ್ಲಿಮರ ಬಳಿ ಬೇಕಾದರೆ ಕೇಳಿ, ನೈಜ ಮುಸ್ಲಿಮರು ಪಿಎಫ್ ಐ ಬ್ಯಾನ್ ಮಾಡಬೇಕು ಎಂದು ಹೇಳುತ್ತಾರೆ.
ಹಿಜಾಬ್ ವಿಚಾರ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆಯಾಯಿತು, ಪಾಕಿಸ್ತಾನದಲ್ಲಿ ಅದು ಸುದ್ದಿ ಆಯಿತು. ಪಿಎಫ್‌ಐ ಮಾಡಿದ ಹೋರಾಟ ಪಾಕಿಸ್ತಾನ ವಾಹಿನಿಗಳಲ್ಲಿ ಹೇಗೆ ಬಂತು? ಎಂದು ಪ್ರಶ್ನೆಸಿದ್ದಾರೆ. ವಿದೇಶದಿಂದ ಈ ರೀತಿಯ ಕೃತ್ಯಗಳಿಗೆ ಹಣ ಬಂದಿದೆ. ಸರಕಾರ ಈಗ ಪಿಎಫ್‌ಐ ನಿಷೇಧಿಸಿದೆ. ಅವರು ಇನ್ನೊಂದು ಹೆಸರು ಇಟ್ಟುಕೊಂಡು ಸಂಘಟನೆ ಮಾಡುತ್ತಾರೆ. ಅವರನ್ನು ಸಮಾಜಘಾತಕ ಶಕ್ತಿಗಳಂತೆ ಪರಿಗಣಿಸಿ ಇಂದು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
ನಿಷೇಧವಾದ್ರೂ ಚಿಂತೆ ಇಲ್ಲ, ಇದೇ ನೋಡಿ ಪಿಎಫ್ಐ ಸಂಸ್ಥೆಯ ಪ್ಲ್ಯಾನ್ ಬಿ!
ನಾವು ಮಾಡಿದರೆ ಆರೆಸ್ಸೆಸ್ ಮಾಡಿದ್ದು ಎಂದು ಹೇಳುತ್ತಾರೆ. ಸಮುದಾಯವೇ ಅವರನ್ನು ಬಹಿಷ್ಕರಿಸಲಿ.ಮುಸ್ಲಿಮರು ಎಚ್ಚೆತ್ತುಕೊಳ್ಳಲು ಇದು ಸಕಾಲ.ಇಲ್ಲವಾದರೆ ಎಲ್ಲ ಮುಸ್ಲಿಮರ ಹೆಸರು ಹಾಳಾಗುತ್ತೆ. ಎಲ್ಲಾ ಮುಸ್ಲಿಮರು ಆ ಮನೋಸ್ಥಿತಿ ಹೊಂದಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದರು.