ಸೋಶಿಯಲ್ ಮೀಡಿಯಾ ಮತ್ತು ವಾಟ್ಸಪ್ ಗ್ರೂಪ್ ಗಳು ಒಮ್ಮೊಮ್ಮೆ ಎಂತೆಂಥ ಅನಾಹುತ ಮಾಡಿಬಿಡಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಉತ್ತರ ಕನ್ನಡ ಜಿಲ್ಲ ಕುಮಟಾದ ಬಿಜೆಪಿ ವಾಟ್ಸಪ್ ಗ್ರೂಪ್ ನಲ್ಲಿ ಅಶ್ಲೀಲ ಚಿತ್ರಗಳು ಹರಿದಾಡಿವೆ.
ಕುಮಟಾ[ನ.20] ಜಿಲ್ಲೆಯ ಎಲ್ಲ ಶಾಸಕರು ಮತ್ತು ಸೊರಬ ಶಾಸಕ ಕುಮಾರ ಬಂಗಾರಪ್ಪ ಸಹ ಇರುವ ಗ್ರೂಪ್ ನಲ್ಲಿ ಬ್ಲ್ಯೂಫಿಲಂ ಹರಿದಾಡಿದೆ. ವಿಡಿಯೋ ಶೇರ್ ಮಾಡಿದ ವ್ಯಕ್ತಿಯ ಮೇಲೆ ದೂರು ದಾಖಲಿಸುವುದಾಗಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಜಿ.ನಾಯ್ಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ವಲಯದಲ್ಲಿ ಇರಿಸು ಮುರಿಸು ಮತ್ತು ಮುಜುಗರಕ್ಕೆ ಇದು ಕಾರಣವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ ,ಹಾಲಿ ಶಾಸಕರುಗಳಾದ ಭಟ್ಕಳ ಕ್ಷೇತ್ರದ ಸುನೀಲ್ ನಾಯ್ಕ ,ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ , ಜಿಲ್ಲಾ ಪಂಚಾಯ್ತಿ ಸದಸ್ಯೆ ಗಾಯಿತ್ರಿ ಗೌಡ ಸೇರಿದಂತೆ ಬಿಜೆಪಿಯ ಪ್ರಮುಖರು ಈ ಗ್ರೂಪ್ ನಲ್ಲಿದ್ದು ಬಿಜೆಪಿ ಎನ್ನುವ ವಾಟ್ಸ್ ಅಪ್ ಗ್ರೂಪ್ ಇದಾಗಿದೆ.
undefined
ಹುಷಾರ್! ಈ 5 ಕೆಲಸ ಮಾಡಿದ್ರೆ ವಾಟ್ಸಪ್ ನಿಮ್ಮನ್ನು ಬ್ಯಾನ್ ಮಾಡುತ್ತೆ
ಪಕ್ಷದ ಚಟುವಟಿಕೆ ಮತ್ತು ಮುಂದಿನ ಕಾರ್ತತಂತ್ರಗಳ ಕುರಿತು ಚರ್ಚೆ ನಡೆಸಲು ಮಾಡಿಕೊಂಡ ಗ್ರೂಪ್ ನಲ್ಲಿ ವಿಡಿಯೋ ಶೇರ್ ಆಗಿದ್ದರೂ ಯಾರು ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಜಟ್ಟು ಎನ್ನುವ ಹೆಸರಿನಲ್ಲಿ ಈ ವೀಡಿಯೋ ಶೇರ್ ಆಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.