* ಲಾಕ್‌ಡೌನ್ ಸಡಿಲಿಸಿದ ನಂತರ ಭಯೋತ್ಪಾದಕರ ತಂತ್ರ ಬದಲು
* ಭಯೋತ್ಪಾದಕರು ಆಂಬ್ಯುಲೆನ್ಸ್ ಬಳಸುವ ಸಾಧ್ಯತೆ
* ಗುಪ್ತಚರ ಇಲಾಖೆಯಿಂದ ಕೇರಳ ಪೊಲೀಸರಿಗೆ ಎಚ್ಚರಿಕೆ ಸಂದೇಶ
ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಜೂ.08): ಕೇರಳ ಕರಾವಳಿಯಲ್ಲಿ ತಳ್ಳುಗಾಡಿ, ಗೂಡಂಗಡಿಗಳಿಗೆ ಉಗ್ರ ಸಂಪರ್ಕದ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ಕೇರಳ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ವರದಿಯಾಗಿದೆ.
ಈ ವರದಿಯಲ್ಲಿ ಮಂಗಳೂರು ಗಡಿಯತ್ತಲೂ ಹದ್ದಿನ ಕಣ್ಣಿಡಲು ಗುಪ್ತಚರ ಒಲಾಖೆ ಸೂಚನೆ ನೀಡಿದೆ ಎನ್ನಲಾಗಿದೆ. ಮಂಗಳೂರು ಗಡಿ ಉಲ್ಲೇಖಿಸಿ ಕೇರಳ ಪೊಲೀಸರಿಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಕೇರಳದ ಕೋವಲಂ ಮತ್ತು ಮಂಗಳೂರು ನಡುವೆ ಐಷಾರಾಮಿ ವಾಹನಗಳ ಅನುಮಾಸ್ಪದ ಓಡಾಟದ ಬಗ್ಗೆ ತಿಳಿಸಲಾಗಿದೆ. ಕೇರಳದ ವಿವಿಧ ಜಿಲ್ಲೆಗಳಿಗೆ ಶಸ್ತ್ರಾಸ್ತ್ರ ಮತ್ತು ನಗದು ಸಾಗಿಸಲು ವಾಹನ ಬಳಕೆ ಶಂಕಿಸಲಾಗಿದ್ದು, ಕೇರಳ ಕರಾವಳಿ ಮತ್ತು ಮಂಗಳೂರು ಗಡಿ ಭಾಗದಲ್ಲಿ ಎಚ್ಚರವಿರಲು ಸೂಚನೆ ನೀಡಲಾಗಿದೆ.
ಮಳಲಿ ವಿವಾದ: ಹಿಂದೂ ನಾಯಕನ ವಿರುದ್ಧ ಅಪಪ್ರಚಾರ, ಪ್ರತ್ಯುತ್ತರಕ್ಕೆ ಸಿದ್ಧ ಎಂದ ಭಜರಂಗದಳ..!
ಉಗ್ರರು ಕಪ್ಪು ಹಣವನ್ನು ಬಿಳಿ ಮಾಡಲು ಹೆದ್ದಾರಿ ಗೂಡಂಗಡಿ ಬಳಸುವ ಶಂಕೆ ಇದ್ದು, ಆಂಬ್ಯುಲೆನ್ಸ್‌ಗಳನ್ನು ಬಳಸಿಕೊಂಡು ಶಸ್ತ್ರಾಸ್ತ್ರ ಮತ್ತು ಹಣ ಕಳ್ಳಸಾಗಣೆ ಬಳಸೋ ಸಾಧ್ಯತೆ ಇದೆ ಎಂದು ಅಲರ್ಟ್ ಮಾಡಲಾಗಿದೆ. ಕರಾವಳಿ ಭಾಗದ ಅಂಗಡಿಗಳ ಮೇಲೆ ನಿಗಾ ಇಡಲು ಕೇಂದ್ರ ಗುಪ್ತಚರ ಸೂಚನೆ ನೀಡಿದ್ದು, ಹೆದ್ದಾರಿ ಬದಿಯ ಕೆಲ ಗೂಡಂಗಡಿಗಳಿಗೆ ಭಯೋತ್ಪಾದಕ ಸಂಘಟನೆಗಳ ನಂಟಿನ ಶಂಕೆ ವ್ಯಕ್ತಪಡಿಸಿದೆ. ಐಶಾರಾಮಿ ವಾಹನಗಳು ರಾತ್ರಿ ಹೊತ್ತು ಗೂಡಂಗಡಿಗಳ ಬಳಿ ಹೆಚ್ಚು ಹೊತ್ತು ನಿಲ್ಲುತ್ತಿದ್ದು, ಗೂಡಂಗಡಿಗಳ ಜೊತೆ ಐಶಾರಾಮಿ ವಾಹನಗಳ ಅಕ್ರಮ ವ್ಯವಹಾರದ ಅನುಮಾನವನ್ನ ಗುಪ್ತಚರ ವರದಿ ವ್ಯಕ್ತಪಡಿಸಿದೆ. ಹೀಗಾಗಿ ಕೇರಳ ಕರಾವಳಿ ಮತ್ತು ಮಂಗಳೂರು ಗಡಿಗಳಲ್ಲಿ ಹದ್ದಿನ ಕಣ್ಣಿಡಲು ಸೂಚನೆ ನೀಡಿದ್ದು, ಕೇರಳ ಪೊಲೀಸ್ ಇಲಾಖೆಗೆ ಕೇಂದ್ರ ಗುಪ್ತಚರ ಇಲಾಖೆ ಅಲರ್ಟ್ ಗೆ ಸೂಚಿಸಿದೆ.
ಮತ್ತೆ ಕರ್ನಾಟಕದಲ್ಲಿ ಸ್ಯಾಟಲೈಟ್ ಫೋನ್ ಸದ್ದು: ಮೇ 23ರಿಂದ 29ರ ನಡುವೆ ಕರೆ ದಾಖಲು
ಲಾಕ್‌ಡೌನ್‌ಗಳನ್ನು ಸಡಿಲಿಸಿದ ನಂತರ ಭಯೋತ್ಪಾದಕರು ತಂತ್ರಗಳನ್ನು ಬದಲಾಯಿಸಿದ್ದು, ಆಂಬ್ಯುಲೆನ್ಸ್‌ಗಳನ್ನು ಬಳಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ತಿರುವನಂತಪುರಂ ಬಳಿಯ ಕೋವಲಂ ಮತ್ತು ಕರ್ನಾಟಕದ ಗಡಿಯಲ್ಲಿರುವ ಮಂಗಳೂರು ನಡುವೆ ಖಾಸಗಿ ಐಷಾರಾಮಿ ವಾಹನಗಳ ಓಡಾಟ ಹೆಚ್ಚಿರುವುದನ್ನು ಪತ್ತೆ ಹಚ್ಚಲಾಗಿದ್ದು, ಕೇರಳದ ವಿವಿಧ ಜಿಲ್ಲೆಗಳಿಗೆ ಶಸ್ತ್ರಾಸ್ತ್ರ ಮತ್ತು ನಗದು ಸಾಗಿಸಲು ದುಷ್ಕರ್ಮಿಗಳು ಈ ವಾಹನಗಳನ್ನು ಬಳಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಶಂಕಿಸಿದ್ದಾರೆ. 2020ರಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಐಷಾರಾಮಿ ವಾಹನಗಳನ್ನು ಮಾರಾಟ ಮಾಡಿದ ಇಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದರು.