* ಏಕಾಏಕಿಯಾಗಿ ಗುಡುಗು ಸಹಿತ ಮಳೆ
* ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟ ಕವಿತಾ
* ಗಾಯಾಳುಗಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ಹಾವೇರಿ(ಜೂ.08): ಜಿಲ್ಲೆಯ ವಿವಿಧೆಡೆ ಮಂಗಳವಾರ ಗುಡುಗು, ಮಿಂಚಿನ ಆರ್ಭಟದೊಂದಿಗೆ ಮಳೆಯಾಗಿದ್ದು, ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟು, 7 ಜನರು ಗಾಯಗೊಂಡಿರುವ ಘಟನೆ ರಟ್ಟೀಹಳ್ಳಿಯಲ್ಲಿ ಸಂಭವಿಸಿದೆ. ರಟ್ಟೀಹಳ್ಳಿಯ ಕವಿತಾ ರಂಗಪ್ಪ ಮೂಲಿಮನಿ (30) ಮೃತ ಮಹಿಳೆ.
ಸಂಜೆ 4 ಗಂಟೆ ಸುಮಾರಿಗೆ ಏಕಾಏಕಿಯಾಗಿ ಗುಡುಗು ಸಹಿತ ಮಳೆ ಆರಂಭವಾದಾಗ ರಕ್ಷಣೆಗೆಂದು ಮರದ ಕೆಳಗೆ ಕೂತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರಟ್ಟೀಹಳ್ಳಿ ಯುಟಿಪಿ ಕಚೇರಿ ಬಳಿ ಹೊಲವೊಂದರಲ್ಲಿ ಬಿತ್ತನೆಗೆ ಹೋಗಿದ್ದ ಮಾರುತಿ ಸುಣಗಾರ (45), ರವಿಂದ್ರಪ್ಪ ಪರಸಪ್ಪನವರ(65), ಸುಧಾ(60), ಸಾಕಮ್ಮ ಸುಣಗಾರ(45), ರತ್ನಾ(34), ಶಶಿಕಲಾ ಸುಣಗಾರ (35), ಜುಬೇದಾಬಾನು ನೇಸ್ವಿ(32) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
undefined
Haveri; ಮದುವೆ ಸಿದ್ಧತೆಯಲ್ಲಿದ್ದ ಮನೆಯಲ್ಲಿ ಬೆಂಕಿ ಅವಘಡ, 4 ಕುರಿಗಳ ಸಾವು
ಹಿರೇಕೆರೂರು ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ. ಬ್ಯಾಡಗಿ, ಹಾನಗಲ್ಲ, ರಾಣಿಬೆನ್ನೂರು ತಾಲೂಕಿನ ಕೆಲವು ಕಡೆ ಕೆಲಕಾಲ ತುಂತುರ ಮಳೆಯಾಗಿರುವ ಕುರಿತು ವರದಿಯಾಗಿದೆ.
4 ಲಕ್ಷ ಪರಿಹಾರ:
ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟ ಕವಿತಾ ರಂಗಪ್ಪ ಪರಸಪ್ಪನವರ ಕುಟುಂಬಕ್ಕೆ .4 ಲಕ್ಷ ಪರಿಹಾರ ನೀಡುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚನೆ ನೀಡಿದ್ದಾರೆ ಎಂದು ತಹಸೀಲ್ದಾರ್ ಅರುಣಕುಮಾರ ಕಾರ್ಗಿ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ವೇಳೆ ಈ ದುರ್ಘಟನೆ ಜರುಗಿದ್ದು, ಓರ್ವ ಮಹಿಳೆ ಮೃತಪಟ್ಟು 6ಜನ ಗಾಯಗೊಂಡಿದ್ದು, ಗಾಯಾಳುಗಳ ಗಾಯದ ಪರಿಣಾಮ ಆಧರಿ ಅವರಿಗೂ ಪರಿಹಾರ ನೀಡಲು ಸಚಿವರು ಸೂಚಿಸಿರುವುದಾಗಿ ತಿಳಿಸಿದರು.