ಅರಣ್ಯ ಇಲಾಖೆಯಿಂದ ರೈತರ ಸ್ವಾಧೀನದಲ್ಲಿರುವ ಮನೆ ಮತ್ತು ಜಮೀನುಗಳಿಗೆ ಬೇಲಿ ಅಳವಡಿಸಿ ಕಲ್ಲು ನೆಟ್ಟಿರುವುದರಿಂದ ರೈತರು ಆತಂಕ ವ್ಯಕ್ತಪಡಿಸಿದರು.
ಎಚ್.ಡಿ. ಕೋಟೆ : ಅರಣ್ಯ ಇಲಾಖೆಯಿಂದ ರೈತರ ಸ್ವಾಧೀನದಲ್ಲಿರುವ ಮನೆ ಮತ್ತು ಜಮೀನುಗಳಿಗೆ ಬೇಲಿ ಅಳವಡಿಸಿ ಕಲ್ಲು ನೆಟ್ಟಿರುವುದರಿಂದ ರೈತರು ಆತಂಕ ವ್ಯಕ್ತಪಡಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಹಾಗೂ ತಹಸೀಲ್ದಾರ್ ಪಿ.ಎಸ್. ಮಹೇಶ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊಹಳ ಗ್ರಾಮದ ಮರಿಮಂಚಯ್ಯ ತಮ್ಮ ಅಳಲನ್ನು ತೋಡಿಕೊಂಡರು.
undefined
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ನಂತರ ಚುನಾವಣಾ ಕರ್ತವ್ಯದ ಹಿನ್ನೆಲೆ ವಾಪಸ್ಸಾದರು.
ಮೈಸೂರು ಪ್ರಾದೇಶಿಕ , ಹೊಸದಾಗಿ ಸರ್ವೆ ಮಾಡಿ ಜಮೀನುಗಳ ಬಳಿ ಹಾಗೂ ಗ್ರಾಮದ ಬಳಿ ಕಲ್ಲು ನೆಟ್ಟಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಒಕ್ಕಲಬ್ಬಿಸುತ್ತಾರೆ ಎಂಬ ಆತಂಕದಲ್ಲಿದ್ದೇವೆ, ನಮ್ಮ ತಾತ ಮುತ್ತಾತನ ಕಾಲದಿಂದ ಈ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ನೂರಾರು ವರ್ಷಗಳಿಂದ ಜೀವನ ನಿರ್ವಹಣೆ ಮಾಡುತ್ತಿದ್ದೇವೆ, ನಮಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಅರಣ್ಯ ಇಲಾಖೆಯವರು ಏನಾದರೂ ನಮ್ಮನ್ನು ಎತ್ತಂಗಡಿ ಮಾಡಲು ಪ್ರಯತ್ನಿಸಿದರೆ ಎಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ದನಕರುಗಳಿಗೆ ಮೇಯಲು ಅವಕಾಶ ಮಾಡಿಕೊಡಿ, ಮೊದಲೇ ಟ್ರಂಚ್ ಮಾಡಿದ್ದು ಪುನಃ ಹೆಚ್ಚುವರಿ ಜಮೀನುಗಳನ್ನು ಸೇರಿಸಿ ಕಲ್ಲು ನೆಟ್ಟಿರುವುದು ಎಷ್ಟುಸರಿ ಎಂದರು.
ಅನಿ ಚಿಕ್ಕಮಾದು ಮಾತನಾಡಿ, ಬಹಳ ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೀರಾ, ಈ ಹಿಂದೆ ಸದನದಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದೇನೆ, ಕಾನೂನು ಹೋರಾಟ ಮಾಡಬೇಕಾಗಿದೆ, ಉಳುವವನೆ ಭೂಮಿಯ ಒಡೆಯ ಎಂದು ಈ ಹಿಂದೆ ಕಾನೂನು ಜಾರಿಮಾಡಿದ್ದಾರೆ. 369 ಎಕರೆ ಕಂದಾಯ ಇಲಾಖೆಗೆ ಸೇರಬೇಕು, ಜಿಲ್ಲಾಧಿಕಾರಿಗಳು ಕಾರ್ಯನಿಮಿತ ಬಂದು ವಾಪಸು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಸಮಯ ನಿಗದಿ ಮಾಡಿ ಸಭೆ ಮಾಡಿ ಸಮಸ್ಯೆ ಪರಿಹಾರ ಕ್ಕೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತೇನೆ ಎಂದರು.
ಸದನದಲ್ಲಿ ಮಾತನಾಡಲು ಅವಕಾಶ ಸಿಕ್ಕಿಲ್ಲ. ಸರ್ಕಾರದ ಗಮನಕ್ಕೆ ತಂದಿದ್ದೇನೆ. ಪ್ರಸ್ತುತ ಗೋಮಾಳ ಎಂದು ಕಂದಾಯ ದಾಖಲೆಗಳಲ್ಲಿ ನಮೂದಾಗಿದೆ. ಹಾಗಾಗಿ ಯಾರೂ ಸಹ ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಈಗಾಗಲೆ ತಾಲೂಕಿನಲ್ಲಿ 500 ಸಾಗುವಳಿ ವಿತರಣೆ ಮಾಡಲು ಕ್ರಮವಹಿಸಲಾಗಿದೆ, ಅರಣ್ಯ ಇಲಾಖೆಯವರು ನಮ್ಮ ಗಮನಕ್ಕೆ ತರದೆ ಏಕಾಏಕಿ ಕಲ್ಲು ನೆಟ್ಟಿರುವುದು ಸರಿಯಲ್ಲ. ತೊಂದರೆ ಕೊಡುವುದಕ್ಕೆ ಹೋಗಬೇಡಿ. ಜಮೀನಿನ್ನು ನಂಬಿಕೊಂಡು ಇದ್ದಾರೆ. ಸರ್ಕಾರದ ಆದೇಶ ಬರುವವರೆಗೂ ತೊಂದರೆ ಕೊಡಬೇಡಿ ಎಂದರು.
ರೈತರಿಗೆ ಸಾಗುವಳಿ ಬಂದು, ರೈತರ ಹೆಸರಿಗೆ ಆರ್‌ಟಿಸಿ ಬರುವವರೆಗೂ ನಿಮ್ಮ ಜೊತೆ ಇರುತ್ತೇನೆ. ಹೋರಾಟವೇ ನಮ್ಮ ಬಲ. ಸಂವಿಧಾನದಡಿಯಲ್ಲಿ ಹೋರಾಟ ಮಾಡಿ ನಮ್ಮ ಭೂಮಿ ಉಳಿಸಿಕೊಳ್ಳೋಣ ಎಂದರು.
ಕಂದಾಯ ಇಲಾಖೆ ಅಧಿಕಾರಿಗಳಿಗೆ ತುರ್ತು ಕ್ರಮ ವಹಿಸಲು ಸೂಚಿಸಿದರು.
ಅರಣ್ಯ ಇಲಾಖೆ ಅಧಿಕಾರಿ ಮಾತನಾಡಿ, ಯಾರನ್ನು ಒಕ್ಕಲು ಎಬ್ಬಿಸಲು ಬಂದಿಲ್ಲ. ಕಲ್ಲು ಹಾಕಿರುವ ಉದ್ದೇಶ ಬೌಂಡರಿ ಅಳತೆ ಮಾಡಿದ್ದೇವೆ. ಅರಣ್ಯ ಇಲಾಖೆ ಕೂಡ ಜನರ ಪರವಾಗಿ ಇರುತ್ತೇವೆ.
319 ಎಕ್ಕರೆಯಲ್ಲಿ ಒಂದು ಎಕರೆ ಸ್ಮಶಾನಕ್ಕೆ ಕಾಯ್ದಿರಿಲಾಗಿದೆ. ಫೆನ್ಸ್ ಹಾಕಿರುವುದರಿಂದ ದನಕರುಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಡಿನೋಟಿಪಿಕೇಷನ್ ಆದರೆ ಉತ್ತಮ ಎಂದರು.
ಎಸಿಎಫ್ ಲಕ್ಷ್ಮೀಕಾಂತ್, ಆರ್‌ಎಫ್ ಸುರೇಂದ್ರ, ಅರಣ್ಯ ಅಧಿಕಾರಿಗಳಾದ ಮೋಹನ್, ಮಹೇಶ್, ಬಸವರಾಜು, ಸರ್ವೇ ಇಲಾಖೆಯ ಜಗನ್ನಾಥ್, ಶಂಭು, ಮುಖಂಡರಾದ ಸತೀಶ್‌ಗೌಡ, ಕ್ಯಾತನಹಳ್ಳಿ ನಾಗರಾಜು, ರಾಜನಾಯಕ, ಗಣೇಶ ಆಚಾರ್, ರಾಜು ವಿಶ್ವಕರ್ಮ, ನಿಂಗಮ್ಮ, ಪುಟ್ಟಮ್ಮ, ರತ್ನಮ್ಮ, ಜ್ಯೋತಿ, ರಾಮಣ್ಣ, ಬರಮಂಚಯ್ಯ, ಬಸವಯ್ಯ, ಬಸವರಾಜು, ಜವರಯ್ಯ, ಮಹಾದೇವ, ದೇವರಾಜು, ಕರಿಯ, ಮಂಜು, ಮಹೇಶ್, ಅವಿನಾಶ…, ಕೃಷ್ಣ, ಗಿರೀಶ, ಸುದರ್ಶನ್, ರಾಜು, ಮಂಜು ಶೆಟ್ಟಿ, ಇದ್ದರು.