ಪಿಎಂ ಮೋದಿಗೆ ಡೊಳ್ಳು ಕುಣಿತದ ಸ್ವಾಗತ: ಅದ್ಭುತ ಪ್ರದರ್ಶನ ನೀಡಿದ ಮಂಜಲಾಪುರದ ಪೋರರು

By Ravi Janekal  |  First Published Mar 1, 2023, 6:09 AM IST

ಜಾನಪದ ಕಲೆಗಳಲ್ಲಿಯೇ ಡೊಳ್ಳು ಕುಣಿತವನ್ನು ಗಂಡು ಕಲೆ ಎಂದು ಕರೆಯುತ್ತಾರೆ. ಜೊತೆಗೆ ಇದೊಂದು ಸಾಂಕ್ರಾಮಿಕ ನೃತ್ಯ ಪ್ರದರ್ಶನವಾಗಿದೆ. ಇಂತಹ ಗಂಡು ಕಲೆ ಡೊಳ್ಳು ಕುಣಿತ ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ಚಾಗತಿಸಯವ ಮೂಲಕ ಸೈ ಎನಿಸಿಕೊಂಡಿದ್ದಾರೆ.


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಮಾ.1): ಜಾನಪದ ಕಲೆಗಳಲ್ಲಿಯೇ ಡೊಳ್ಳು ಕುಣಿತವನ್ನು ಗಂಡು ಕಲೆ ಎಂದು ಕರೆಯುತ್ತಾರೆ. ಜೊತೆಗೆ ಇದೊಂದು ಸಾಂಕ್ರಾಮಿಕ ನೃತ್ಯ ಪ್ರದರ್ಶನವಾಗಿದೆ. ಇಂತಹ ಗಂಡು ಕಲೆ ಡೊಳ್ಳು ಕುಣಿತ ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ಚಾಗತಿಸಯವ ಮೂಲಕ ಸೈ ಎನಿಸಿಕೊಂಡಿದ್ದಾರೆ.

Latest Videos

undefined

ಕುಗ್ರಾಮದ ಪ್ರತಿಭೆಗಳು ದೆಹಲಿಯಲ್ಲಿ ಮಿಂಚು..!

ಯಾದಗಿರಿ(Yadgir) ಜಿಲ್ಲೆಯ ಸುರಪುರ ತಾಲೂಕಿನ ಕುಗ್ರಾಮವಾದ ಮಂಜಲಾಪುರ ಗ್ರಾಮ(Manjalapur village)ದ ಹೈಯ್ಯಾಳಲಿಂಗೇಶ್ವರ ಡೊಳ್ಳಿನ ಕಲಾ ತಂಡ(Hyiyalalingeshwar Dollu art troupe) ರಾಷ್ಟ್ರ ರಾಜ್ಯಧಾನಿ  ಮಿಂಚಿದ್ದಾರೆ. ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮವೂ ಪೆ.25 ಹಾಗೂ 26 ರಂದು ದೆಹಲಿ ನಗರದ ಟಾಲ್ಕಟೋರಾ ಸ್ಟೇಡಿಯಂ(Talkatora Stadium) ನಲ್ಲಿ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಮಂಜಲಾಪುರದ ಹೈಯ್ಯಾಳಲಿಂಗೇಶ್ವರ ಡೊಳ್ಳಿನ ಸಂಘದ ಯುವ ಪ್ರತಿಭೆಗಳು ಭಾಗವಹಿಸಿ ಅಧ್ಭುತ ಪ್ರದರ್ಶನ ನೀಡಿದ್ದಾರೆ. ಕಲಾ ತಂಡದ ಮುಖ್ಯಸ್ಥ ಭೀರಲಿಂಗಪ್ಪ, ನಿಂಗಪ್ಪ ಪೂಜಾರಿ ಹಾಗೂ ಪರಮಾನಂದ, ಮುತ್ತು ಬಂಡಿಮನಿ, ಮುತ್ತು ರಾಯಗೇರಿ, ಶಿವರಾಜ ಪಾಟೀಲ್, ರವಿಕುಮಾರ, ನಿಂಗರಾಜ, ಶಿವರಾಜ ಬೈಲಾಪುರ ಹಾಗೂ ನಾಗೇಶ ಗಡ್ಡಿ ಒಳಗೊಂಡ ಕಲಾ ತಂಡವೂ ಅತ್ಯುತ್ತಮ ಪ್ರದರ್ಶನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Kannda Dindima: ದೇಶಕ್ಕೆ ಪ್ರಧಾನಿ ಮೋದಿಯಿಂದ ಶಕ್ತಿ ಬಂದಿದೆ: ತರಳಬಾಳು ಶ್ರೀ

ಪಿಎಂ ಮೋದಿ ಅವರನ್ನು ಡೊಳ್ಳು ಕುಣಿತದಿಂದ ಸ್ವಾಗತಿಸಿದ ಯುವ ಪ್ರತಿಭೆಗಳು..!

ದೆಹಲಿ ಕರ್ನಾಟಕ ಅಮೃತ ಮಹೋತ್ಸವ(Dehli karnataka amrit mahotsav) ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(PM Narendra modi) ಭಾಗವಹಿಸಿದ್ದರು. ಮೋದಿಯವರು ವೇದಿಕೆಗೆ ಆಗಮಿಸುವ ಮುನ್ನ ಕರ್ನಾಟಕ ವಿವಿಧ ಕಲಾ ತಂಡಗಳು ಅವರನ್ನು ಸ್ವಾಗತಿಸಿದವು. ಅದರಲ್ಲಿ ಯಾದಗಿರಿ ಜಿಲ್ಲೆಯ ಮಂಜಲಾಪುರ ಗ್ರಾಮದ ಹೈಯ್ಯಾಳಲಿಂಗೇಶ್ವರ ಕಲಾ ತಂಡವೂ ಪಿಎಂ ಮೋದಿಯವರನ್ನು ಡೊಳ್ಳು ಭಾರಿಸುವ ಮೂಲಕ ಮೆರಗನ್ನು ಪ್ರದರ್ಶಿಸಿತು. 

ಈ ಹೈಯ್ಯಾಳಲಿಂಗೇಶ್ವರ ಡೊಳ್ಳಿನ ಕಲಾ ತಂಡ ಪಕ್ಕಾ ಹಳ್ಳಿ ಸೊಗಡಿನ ಕಲೆಯನ್ನು ಹೊಂದಿದೆ. ಯುವ ಪ್ರತಿಭೆಗಳ ಪ್ರದರ್ಶನಕ್ಕೆ ದೆಹಲಿ ಕರ್ನಾಟಕ ಸಂಘವೂ ಪ್ರಶಸ್ತಿ ನೀಡಿ ಗೌರವಿಸಿದೆ. ಸುಮಾರು 13 ವರ್ಷಗಳ ಕಾಲ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರದರ್ಶನವನ್ನು ತೋರಿಸಿವೆ. ನಮ್ಮ ಸಂಘವೂ ದೆಹಲಿಯಲ್ಲಿ ತೋರಿದ ಪ್ರದರ್ಶನದಿಂದ ನಮ್ಮ ಕಲೆ ರಾಷ್ಟ್ರವ್ಯಾಪಿ ಹರಡುವಂತೆ ಮಾಡಿದೆ. ಉತ್ತಮವಾದ ಅವಕಾಶ ನಮಗೆ ಒದಗಿ ಬಂದಿತ್ತು. ಜೊತೆಗೆ ನಮ್ಮ ಕಲೆಗೆ ಹಲವು ಪ್ರಶಸ್ತಿಗಳು ಬಂದಿವೆ ಎಂದು ಭೀರಲಿಂಗಪ್ಪ ಪೂಜಾರಿ ಸುವರ್ಣ ನ್ಯೂಸ್ ಜೊತೆ  ಸಂತಸ ಹಂಚಿಕೊಂಡರು.

ದೆಹಲಿ ಕರ್ನಾಟಕ ಸಂಘಕ್ಕೆ 75 ವರ್ಷ: ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ

ಯುವ ಪ್ರತಿಭೆಗಳ ಪ್ರದರ್ಶನಕ್ಕೆ ಗ್ರಾಮಸ್ಥರು ಫುಲ್ ಖುಷ್..!

ಸುರಪುರ ತಾಲೂಕಿನ ಮಂಜಲಾಪುರ ಗ್ರಾಮದ ಹೈಯ್ಯಾಳಲಿಂಗೇಶ್ವರ ಡೊಳ್ಳಿನ ಕಲಾ ತಂಡವೂ ದೆಹಲಿಯಲ್ಲಿ‌ ನೀಡಿದ ಪ್ರದರ್ಶನಕ್ಕೆ ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ. ಡೊಳ್ಳನ್ನು ಸ್ವತಃ ಈ ಕಲಾವಿದರೇ ತಯಾರಿಸುತ್ತಾರೆ. ಡೊಳ್ಳು, ಚರ್ಮವಾದ್ಯ, ಕೋಲಿಲು ಸೇರಿದಂತೆ ಅವರೇ ತಯಾರಿಸುತ್ತಾರೆ. ಅದೇ ಡೊಳ್ಳಿನಿಂದ ಬಾರಿಸುವುದನ್ನು ಕಲಿಯುತ್ತಾರೆ ಎಂದು ನಿಂಗಪ್ಪಗೌಡ ಹಾಗೂ ಮಾನಪ್ಪ  ಮೆಚ್ಚುಗೆ ವ್ಯಕ್ತಪಡಿಸಿದರು.

click me!