ಸೆಂಥಿಲ್‌: ಹಠದಲ್ಲಿ ಅಧಿಕಾರಿಯಾಗಿ ಈಗ ಅಧಿಕಾರ ಬಿಟ್ಟರು..!

By Kannadaprabha NewsFirst Published Sep 8, 2019, 9:04 AM IST
Highlights

ಎಂಜಿನಿಯರಿಂಗ್ ಓದುತ್ತಿದ್ದ ಸೆಂಥಿಲ್ ಹಠದಿಂದ ಐಎಎಸ್ ಆಫೀಸರ್ ಆದ್ರು. ಅಷ್ಟಕ್ಕೂ ಐಎಎಸ್ ಓದೋಕೆ ಕಾರಣವಾಗಿದ್ದೇನು..? ಹಠದಲ್ಲಿ ಐಎಎಸ್ ಪಾಸ್ ಮಾಡಲೇ ಬೇಕು ಅಂತ ಸೆಂಥಿಲ್‌ಗೆ ಅನಿಸಿದ್ದೇಕೆ..? ಇದನ್ನು ತಿಳಿಯಲು ಈ ಸುದ್ದಿ ಓದಿ.

ಮಂಗಳೂರು(ಸೆ.08): IAS ಸಸಿಕಾಂತ್ ಸೆಂಥಿಲ್ ಎಂಜಿನಿಯರಿಂಗ್‌ ಓದುತ್ತಿದ್ದವರು. ಅದೊಂದು ದಿನ IAS ಆಫೀಸರ್ ಆಗ್ಬೇಕು ಅಂತ ನಿರ್ಧರಿಸಿದ ಸೆಂಥಿಲ್ ಹಠದಲ್ಲಿಯೇ ತಮ್ಮ ಕನಸನ್ನು ನನಸು ಮಾಡಿಕೊಂಡ್ರು. ಸಸಿಕಾಂತ್ ಸೆಂಥಿಲ್‌ IAS ಆಫೀಸರ್ ಕಾರಣವೂ ಇಂಟ್ರೆಸ್ಟಿಂಗ್ ಇದೆ.

ತಮಿಳುನಾಡಿನಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದ ವೇಳೆ ಒಂದು ದಿನ ಮನೆಯ ಕೆಲಸದ ನಿಮಿತ್ತ ಸಸಿಕಾಂತ್‌ ಸೆಂಥಿಲ್‌ ಅವರು ಅಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದರು. ಅಂದು ಇವರ ಸ್ವಂತ ಕೆಲಸ ಮಾಡಿಸಲು ಸಾಕಷ್ಟುಹೆಣಗಾಡಿದ್ದರು. ಅಲ್ಲದೆ ಇವರಂತೆ ಬೇರೆಯವರೂ ಸ್ವಂತ ಕೆಲಸ ಮಾಡಿಸಿಕೊಳ್ಳಲು ಕಷ್ಟಪಡುತ್ತಿದ್ದುದನ್ನು ನೋಡಿದ್ದರು. ಆಗಲೇ IAS ಅಧಿಕಾರಿಯಾಗ್ಬೇಕು ಅಂತ ನಿರ್ಧರಿಸಿದ್ರು.

ಮಂಗಳೂರು: IAS ಸಸಿಕಾಂತ್ ಸೆಂಥಿಲ್ ರಾಜೀನಾಮೆ

ಜನರ ಕಷ್ಟ ನೋಡಿದ ಸೆಂಥಿಲ್‌ ನಾನು ಕೂಡ ಜಿಲ್ಲಾಧಿಕಾರಿಯಾಗಿ ಬಡವರಿಗೆ ನೆರವಾಗಬೇಕು ಎಂಬ ಆಲೋಚನೆ ಮಾಡಿದ್ದರು. ಹೀಗೆ ಯೋಚಿಸಿದವರೇ ನೇರವಾಗಿ IAS ಪರೀಕ್ಷೆಗೆ ಸಿದ್ಧತೆ ನಡೆಸಿದರು.

ಕೇಂದ್ರದ ವಿರುದ್ಧ ಸಿಡಿದೇ ರಾಜೀನಾಮೆ: ಸಸಿಕಾಂತ್ ಸೆಂಥಿಲ್ ಸಂದರ್ಶನ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ತಮಿಳುನಾಡು ರಾಜ್ಯಕ್ಕೆ ಒಂಭತ್ತನೇ ರ್‍ಯಾಂಕ್ ಗಳಿಸಿ ಸಾಧಿಸಿ ತೋರಿಸಿದ್ದರು. ಬಳಿಕ ಭಾರತೀಯ ಆಡಳಿತಾತ್ಮಕ ಸೇವೆಗೆ ಕರ್ನಾಟಕದಲ್ಲಿ ಸೇರ್ಪಡೆಯಾಗಿ ಅಧಿಕಾರ ನಡೆಸಿದ್ದರು. ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕಡೆಗಳಲ್ಲೆಲ್ಲ ಉತ್ತಮ ಹೆಸರು ಪಡೆದಿದ್ದರು.

click me!