ಕಾರವಾರ: ಐಆರ್‌ಬಿಯ ಅವೈಜ್ಞಾನಿಕ ಕಾಮಗಾರಿ, ಡಿಸಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ

By Girish GoudarFirst Published Jul 16, 2023, 12:00 AM IST
Highlights

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೂಚನೆ ಮೇರೆಗೆ ಕಾರವಾರದ ಮಾಜಾಳಿಯಿಂದ ಭಟ್ಕಳ ಗಡಿಯವರೆಗೆ ಅಧಿಕಾರಿಗಳು ಹೆದ್ದಾರಿ ಕಾಮಗಾರಿಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ 

ಉತ್ತರಕನ್ನಡ(ಜು.16):  ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಐಆರ್‌ಬಿಯ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ಆರೋಪ ಹಿನ್ನೆಲೆ ನಿನ್ನೆ(ಶನಿವಾರ) ಉತ್ತರಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ನೇತೃತ್ವದ ಅಧಿಕಾರಿ ತಂಡ ಪರಿಶೀಲನೆ ನಡೆಸಿದೆ. 

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೂಚನೆ ಮೇರೆಗೆ ಡಿಸಿ ನೇತೃತ್ವದಲ್ಲಿ ಕಾರವಾರದ ಮಾಜಾಳಿಯಿಂದ ಭಟ್ಕಳ ಗಡಿಯವರೆಗೆ ಅಧಿಕಾರಿಗಳು ಹೆದ್ದಾರಿ ಕಾಮಗಾರಿಯನ್ನು ವೀಕ್ಷಿಸಿದ್ದಾರೆ.  IRB, NHAI ಅಧಿಕಾರಿಗಳು, ತಹಶೀಲ್ದಾರ್, ಪೌರಾಯುಕ್ತ, ಡಿವೈಎಸ್ಪಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹೆದ್ದಾರಿ ಉದ್ದಕ್ಕೂ ರಸ್ತೆ, ಟನಲ್, ಸೂಚನಾಫಲಕ, ಡೈವರ್ಶನ್,‌ ಬೀದಿದೀಪ, ಸರ್ವೀಸ್ ರೋಡ್ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದಾರೆ. 

Latest Videos

ಕಾಂಗ್ರೆಸ್‌ ಕೃಪಾಕಟಾಕ್ಷದಲ್ಲಿ ರಾಜ್ಯಾದ್ಯಂತ ಕೊಲೆಗಳು ನಿರ್ಭೀತ: ಸಚಿವೆ ಶೋಭಾ ಕರಂದ್ಲಾಜೆ ಆರೋಪ

ಹೆದ್ದಾರಿ ಅಗಲೀಕರಣದ 177 ಕಿ.ಮೀ. ರಸ್ತೆ ಕಾಮಗಾರಿ ಪರಿಶೀಲನೆ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆದಿರುವಿಕೆ, ಗುಡ್ಡ ಕುಸಿತ ಪ್ರದೇಶಗಳನ್ನೂ ವೀಕ್ಷಿಸಿದ ಬಳಿಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಗತ್ಯ ಸೂಚನೆ ನೀಡಿದ್ದಾರೆ.

click me!