* 5 ತಿಂಗಳಿಂದ ವಾಲ್ವಮನ್‌ಗಳಿಗೆ ವೇತನವಿಲ್ಲ
* 24X7 ನೀರು ಪೂರೈಕೆಯಲ್ಲಿ ದುರುದ್ದೇಶ ಪೂರ್ವಕವಾಗಿ ಲೋಪ ಮಾಡಿದ್ದಾರೆ
* ಯೋಜನೆ ಅನುಷ್ಠಾನಕ್ಕೆ ಸಮಿತಿ
ಗದಗ(ಜು.14): ಗದಗ ಬೆಟಗೇರಿ ಅವಳಿ ನಗರಕ್ಕೆ 24X7 ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೆಲ ಅಧಿಕಾರಿಗಳು ಮತ್ತು ಪ್ರಭಾವಿಗಳು ಸಂಚು ಮಾಡಿ ಅವಳಿ ನಗರದ ನಗರದ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಶಾಸಕ ಎಚ್.ಕೆ. ಪಾಟೀಲ ಆರೋಪಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 24X7 ನೀರು ಪೂರೈಕೆಯಲ್ಲಿ ದುರುದ್ದೇಶ ಪೂರ್ವಕವಾಗಿ ಲೋಪ ಮಾಡಿದ್ದಾರೆ. ಇದರ ಬಗ್ಗೆ ಈ ಹಿಂದೆ ಹಲವಾರು ಬಾರಿ ಸಭೆ ನಡೆಸಿದರೂ ಯಾವೊಬ್ಬ ಅಧಿಕಾರಿಗಳು ಆಗುತ್ತಿರುವ ನೈಜ ಲೋಪದ ಬಗ್ಗೆ ಮಾತನಾಡಿಲ್ಲ, ಯಾವ ಸಭೆಯಲ್ಲಿಯೂ ತಾಂತ್ರಿಕ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿಲ್ಲ. ಈ ವಿಷಯವಾಗಿ ಅಧಿಕಾರಿಗಳ ಜತೆಗೆ ಹಿರಿಯ ನಗರಸಭೆ ಸದಸ್ಯರೊಂದಿಗೆ 4 ಗಂಟೆ ಸಭೆ ಸಭೆ ನಡೆಸಿದ್ದೇನೆ, ಕೆಐಯುಡಿಎಫ್‌ಸಿ ಕಚೇರಿಗೆ ಭೇಟಿ, ನೀರು ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿಯೇ ಇದನ್ನು ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.
ಅವಳಿ ನಗರದಲ್ಲಿ ನೀರು ಪೂರೈಕೆ ಮಾಡುವ ವಾಲ್ವಮನ್‌ಗಳಿಗೆ 5 ತಿಂಗಳಿಂದ ವೇತನ ನೀಡಿಲ್ಲ, ಮುಖ್ಯವಾಗಿ ಶುದ್ಧೀಕರಣ ಘಟಕದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೂ 3 ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ವೇತನ ನೀಡಿಲ್ಲ. ಇದು ಅವಳಿ ನಗರದ ನೀರು ಪೂರೈಕೆ ಯೋಜನೆ ಹಾಳು ಮಾಡಲು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿದ್ದಾರೆ. ಇದು ನನ್ನ ಗಮನಕ್ಕೆ ಬಂದ ನಂತರ ಕಮೀಷನರ್ ಅವರಿಗೆ ದೂರವಾಣಿ ಮೂಲಕ ಚರ್ಚೆ ಮಾಡಿದ ವೇಳೆಯಲ್ಲಿ ಅಧಿಕಾರಿಗಳಿಗೆ ಸರಿಯಾದ ಮಾಹಿತಿಯೇ ಇಲ್ಲ, ಯಾಕೆ ಹೀಗೆ ಎಂದು ಕೇಳಿದರೂ ಅಧಿಕಾರಿಗಳ ಬಳಿ ಉತ್ತರವಿಲ್ಲ ಎಂದರು.
undefined
ಮಹಾರಾಷ್ಟ್ರ ಬಂಡಾಯಕ್ಕೆ ಬಿಜೆಪಿ ಬ್ಯಾಕ್ ಸೀಟ್ ಡ್ರೈವರ್, ಎಚ್‌ಡಿಕೆ ಪಾಟೀಲ್ ವ್ಯಂಗ್ಯ
ನಮ್ಮ ಸರ್ಕಾರದ ಅವಧಿಯಲ್ಲಿ ಈ ಯೋಜನೆಯು ರೂಪಿತವಾಗಿ ಪ್ರತಿನಿತ್ಯ ಗದಗ ನಗರಕ್ಕೆ 42 ಎಂಎಲ್‌ಡಿ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಬೇಕಾಗುವ ಎಲ್ಲ ತಾಂತ್ರಿಕ ಕೆಲಸ ಕಾರ್ಯ ಮಾಡಲಾಗಿತ್ತು.ಆದರೆ ನೀರು ಪೂರೈಕೆ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು 2021 ರ ಆಗಷ್ಟನಲ್ಲಿಯೇ ಸ್ಥಗಿತಗೊಂಡಿದ್ದರೂ ಅದನ್ನು ಸರಿಪಡಿಸುವ ಕೆಲಸ ಮಾಡಿಲ್ಲ, ಮುಖ್ಯವಾಗಿ ನೀರು ಎಷ್ಟುಪೂರೈಕೆಯಾಗುತ್ತದೆ ಎನ್ನುವುದನ್ನು ಅಳತೆ ಮಾಡುವ ಮೀಟರ್ ಕೂಡಾ ನಗರ ನೀರು ಸರಬರಾಜು ಕಚೇರಿಯಲ್ಲಿಯೇ ಬಿದ್ದಿದೆ. ನೀರಿನ ಪೋ› ಮೀಟರ್ 6 ತಿಂಗಳಿಂದ ಸ್ಥಗಿತ ಮಾಡಿದ್ದಾರೆ ಕೆಯುಐಡಿಎಫ್‌ಸಿ ಹಿರಿಯ ಅಧಿಕಾರಿಗಳು ಹಲವಾರು ಬಾರಿ ಗದಗ ನಗರಕ್ಕೆ ಹಾಗೂ ಈ ನೀರು ಪೂರೈಕೆ ಯೋಜನೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಆದರೆ ಪ್ಲೋ ರಿಪೇರಿ ಮಾಡಿಲ್ಲ,ಎಷ್ಟುನೀರು ನಮ್ಮ ಮೂಲ ನೀರಿನ ಜಾಕ್‌ವೆಲ್‌ನಿಂದ ಬರುತ್ತಿದೆ, ಇಲ್ಲಿ ಎಷ್ಟುಶುದ್ಧೀಕರಣವಾಗುತ್ತಿದೆ ಎನ್ನುವ ಬಗ್ಗೆ ಯಾರೊಬ್ಬರೂ ಗಮನ ನೀಡುತ್ತಿಲ್ಲ.
ಯೋಜನೆ ಮೂಲ ಆಧಾರದಲ್ಲಿ ನಿತ್ಯವೂ ಶುದ್ಧೀಕರಣ ಘಟಕಕ್ಕೆ 42 ಎಂಎಲ್‌ಡಿ ನೀರು ಬರಬೇಕು, 40 ಎಂಎಲ್‌ಡಿ ನೀರು ಹೊರಬರಬೇಕು. ಪ್ರತಿ 2 ದಿನಕ್ಕೊಮ್ಮೆ ಅವಳಿ ನಗರದ ಜನರಿಗೆ ನೀರು ಕೊಟ್ಟರೂ ಪ್ರತಿ ದಿನ 25 ಎಂಎಲ್‌ಡಿ ನೀರು ಸಾಕಾಗುತ್ತದೆ, ಆದರೆ ಪ್ರಸ್ತುತವಾಗಿ 33 ಎಂಎಲ್‌ಡಿ ನೀರು ಬರುತ್ತಿದ್ದರೂ ಅಧಿಕಾರಿಗಳು ಮತ್ತು ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಕೆಲವಾರು ಜನರು ಕುತಂತ್ರದಿಂದಾಗಿ ಈ ಯೋಜನೆ ವಿಫಲ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
40% ಇನ್ಕ್ರೀಜ್ ಮಾಡಲು ಕರ್ನಾಟಕಕ್ಕೆ ಬಂದ್ರಾ?: ಅಮಿತ್ ಶಾ ವಿರುದ್ಧ ಹರಿಹಾಯ್ದ ಪಾಟೀಲ್
ಯೋಜನೆ ಅನುಷ್ಠಾನಕ್ಕೆ ಸಮಿತಿ
ನಮ್ಮ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಜಾರಿಗೆ ತಂದಿದ್ದು,ಇದನ್ನು ಬುಡಮೇಲು ಮಾಡಲು ಕಾಣದ ಕೈಗಳು ಬಲು ಜೋರಾಗಿ ಕೆಲಸ ಮಾಡುತ್ತಿದ್ದು ಇದನ್ನು ಸಮರ್ಪಕ ಜಾರಿ ಮಾಡುವ ನಿಟ್ಟಿನಲ್ಲಿ ನನಗೂ ಸೇರಿದಂತೆ ಅಗತ್ಯ ಮಾರ್ಗದರ್ಶನ ಮಾಡಲು 9 ಜನರ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಎಲ್.ಡಿ.ಚಂದಾವರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದು, ಸದಸ್ಯರಾಗಿ ಬಿ.ಬಿ. ಅಸೂಟಿ,ಸೇರಿದಂತೆ ಹಲವಾರು ಹಿರಿಯ ಮತ್ತು ಮಾಜಿ ನಗರಸಭೆ ಸದಸ್ಯರಿದ್ದಾರೆ,ಇವರೊಟ್ಟಿಗೆ 3 ಜನ ತಾಂತ್ರಿಕ ಅಧಿಕಾರಿಗಳನ್ನು ಇರಲಿದ್ದಾರೆ ಎಂದು ಗದಗ ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ನೀರು ಪೂರೈಕೆ ಮಾಡುವಲ್ಲಿ ಮತ್ತು ಶುದ್ಧೀಕರಣದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ತಕ್ಷಣವೇ ವೇತನ ಬಿಡುಗಡೆ ಮಾಡಬೇಕು,ಯಾವ ಕಾರಣಕ್ಕಾಗಿ ರಿಪೇರಿ ವಿಷಯದಲ್ಲಿ ಅನಗತ್ಯವಾಗಿ ವಿಳಂಬವಾಗಿದೆ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಅಂತ ಗದಗ ಶಾಸಕ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.