ಶಿಶು ಮರಣ: ಒಂಭತ್ತು ತಿಂಗಳಲ್ಲಿ ಕೊಡಗಿನಲ್ಲಿ 41 ಪ್ರಕರಣ

By Kannadaprabha News  |  First Published Jan 16, 2020, 3:31 PM IST

ಕೊಡಗು ಜಿಲ್ಲೆಯಲ್ಲಿ 2019ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಮೂರು ತ್ರೈಮಾಸಿಕ ಅವ​ಧಿಯಲ್ಲಿ 41 ಶಿಶುಗಳ ಮರಣವಾಗಿದೆ. ಹೆರಿಗೆ ಸಂದರ್ಭದಲ್ಲಿ 1 ತಾಯಿ ಮರಣವಾಗಿದೆ. 47 ನಿರ್ಜೀವ ಮಕ್ಕಳ ಜನನವಾಗಿದೆ. ಜಿಲ್ಲೆಯಲ್ಲಿ ಇದೇ ಅವ​ಧಿಯಲ್ಲಿ ಒಟ್ಟು 4,588 ಜೀವಂತ ಜನನ ಆಗಿತ್ತು.


ಮಡಿಕೇರಿ(ಜ.16): ಕಡಿಮೆ ತೂಕ, ಅವಧಿ​ಗಿಂತ ಮುಂಚಿತವಾಗಿ ಹೆರಿಗೆ ಸೇರಿದಂತೆ ನಾನಾ ಕಾರಣದಿಂದಾಗಿ ಕೊಡಗು ಜಿಲ್ಲೆಯಲ್ಲಿ 2019ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಮೂರು ತ್ರೈಮಾಸಿಕ ಅವ​ಧಿಯಲ್ಲಿ 41 ಶಿಶುಗಳ ಮರಣವಾಗಿದೆ. ಹೆರಿಗೆ ಸಂದರ್ಭದಲ್ಲಿ 1 ತಾಯಿ ಮರಣವಾಗಿದೆ. 47 ನಿರ್ಜೀವ ಮಕ್ಕಳ ಜನನವಾಗಿದೆ. ಜಿಲ್ಲೆಯಲ್ಲಿ ಇದೇ ಅವ​ಧಿಯಲ್ಲಿ ಒಟ್ಟು 4,588 ಜೀವಂತ ಜನನ ಆಗಿತ್ತು.

ಮಗು ಜನಿಸುವಾಗ 2.5 ಕೆ.ಜಿ ತೂಕ ಇರಬೇಕು. ಆದರೆ ಕೆಲವು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದಾಗಿ ಕಡಿಮೆ ತೂಕದ ಜನನವಾಗುತ್ತದೆ. 9 ತಿಂಗಳು ಪೂರ್ಣಗೊಳ್ಳದೆ ಅವಧಿ​ಗಿಂತ ಮುಂಚಿತವಾಗಿ ಹೆರಿಗೆಯಾದರೆ ಶಿಶು ಮರಣವಾಗುತ್ತದೆ. ಇದಲ್ಲದೆ ಸೋಂಕು, ಹುಟ್ಟುವಾಗ ಹೃದಯ ತೊಂದರೆ ಹೀಗೆ ನಾನಾ ಕಾರಣದಿಂದ ಶಿಶು ಮರಣ ಸಂಭವಿಸುತ್ತದೆ. ಕೊಡಗು ಜಿಲ್ಲೆಯಲ್ಲಿ ಪ್ರತಿ ಲಕ್ಷಕ್ಕೆ 9 ಮಕ್ಕಳು ಮೃತಪಡುತ್ತಿವೆ.

Latest Videos

undefined

1,037 ಶಶ್ತ್ರ ಚಿಕಿತ್ಸೆ ಮಾಡಿ ಹೆರಿಗೆ:

ಕೊಡಗು ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಗಳಾದ ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪ, ಸೋಮವಾರಪೇಟೆ ಹಾಗೂ ಮಡಿಕೇರಿಯ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ 1,037 ಮಂದಿಗೆ ಶಶ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. 2,193 ಮಂದಿಗೆ ಸಾಮಾನ್ಯ ಹೆರಿಗೆ ಮಾಡಿಸಲಾಗಿದ್ದು, ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ 9 ತಿಂಗಳಲ್ಲಿ ಒಟ್ಟು 3,230 ಮಂದಿಗೆ ಹೆರಿಗೆಯಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಶಿಶು ​ಮ​ರಣ ಪ್ರಮಾಣ ಇಳಿಮುಖ!

ಜಿಲ್ಲೆಯ 24/7 ಹೆರಿಗೆ ವಿಭಾಗಗಳಾದ ಭಾಗಮಂಡಲ, ಮೂರ್ನಾಡು, ಚೆಟ್ಟಳ್ಳಿ, ಹೆಬ್ಬಾಲೆ, ಕೊಡ್ಲಿಪೇಟೆ, ಮಾದಾಪುರ, ಸುಂಟಿಕೊಪ್ಪ, ಬಾಳೆಲೆ ಹಾಗೂ ಶ್ರೀಮಂಗಲದಲ್ಲಿ ಒಟ್ಟು 490 ಹೆರಿಗೆಯಾಗಿದೆ. 255 ಹಗಲು ಹಾಗೂ 235 ರಾತ್ರಿ ಹೆರಿಗೆಯಾಗಿವೆ. ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳಾದ ಶನಿವಾರಸಂತೆ, ಕುಟ್ಟ, ಪಾಲಿಬೆಟ್ಟ, ಸಿದ್ದಾಪುರ ಹಾಗೂ ನಾಪೋಕ್ಲುವಿನಲ್ಲಿ 132 ಹೆರಿಗೆ ಪ್ರಕರಣಗಳು ಕಂಡುಬಂದಿವೆ. ರಾತ್ರಿ ವೇಳೆಯಲ್ಲಿ 167, ಹಗಲಿನಲ್ಲಿ 132 ಮಕ್ಕಳ ಜನನವಾಗಿದೆ.

ಪೌರತ್ವ ಕಾಯ್ದೆ: ಬಿಜೆಪಿ ರಾಜ್ಯಗಳಲ್ಲೇ ಹಿಂಸಾಚಾರ ಯಾಕೆ..?

ಬಡತನ ರೇಖೆಗಿಂತ ಕೆಳಗಿನ ಆದಾಯವಿರುವ ಹಾಗೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಕುಟುಂಬಗಳ ತಾಯಿ ಮತ್ತು ಮಕ್ಕಳ ಮರಣವನ್ನು ತಗ್ಗಿಸುವ ನಿಟ್ಟಿನಲ್ಲಿ ಜನನಿ ಸುರಕ್ಷಾ ಯೋಜನೆಯನ್ನು ಹಮ್ಮಿಕೊಂಡಿದೆ. ಕೊಡಗು ಜಿಲ್ಲೆಯಲ್ಲಿ 2019ರ ಏಪ್ರಿಲ್‌ನಿಂದ ಡಿಸೆಂಬರ್‌ ತಿಂಗಳವರೆಗೆ 2,712 ಮಂದಿ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿದ್ದು, 17,49,100 ರು. ಆರ್ಥಿಕ ನೆರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಫಲಾನುಭವಿಗಳಿಗೆ ನೀಡಲಾಗಿದೆ. ಕುಟುಂಬ ಕಲ್ಯಾಣ 2,244 ಗುರಿ ಹೊಂದಲಾಗಿದ್ದು, 1,276 ಸಾಧನೆ ಮಾಡಿ ಶೇ.56.86ರಷ್ಟುಪ್ರಗತಿ ಸಾಧಿ​ಸಲಾಗಿದೆ.

ಶಿಶು ಮರಣ ವಿವರ : 2019 ಏಪ್ರಿಲ್‌- ಡಿಸೆಂಬರ್‌

ತಿಂಗಳು ಜೀವಂತ ಜನನ ಶಿಶುಮರಣ ನಿರ್ಜೀವ ಜನನ

1ನೇ ತ್ರೈಮಾಸಿಕ 1,480 11 15

2ನೇ ತ್ರೈಮಾಸಿಕ 1,511 19 12

3ನೇ ತ್ರೈಮಾಸಿಕ 1,597 19 12

ಒಟ್ಟು 4,588 41 47

CAA ವಿರುದ್ಧ ಶಾಂತಿಯುತ ಕಿಚ್ಚು, 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ ಸಮಾವೇಶ ಹೀಗಿತ್ತು..!

ಮಗು ಜನಿಸುವಾಗ 2.5 ಕೆ.ಜಿ ತೂಕ ಇರಬೇಕು. ಆದರೆ ಕೆಲವು ಮಕ್ಕಳು ಕಡಿಮೆ ತೂಕದ ಜನನವಾಗುತ್ತದೆ. ಇದಲ್ಲದೆ 9 ತಿಂಗಳು ಪೂರ್ಣಗೊಳ್ಳದೆ ಅವಧಿ​ಗಿಂತ ಮುಂಚಿತವಾಗಿ ಹೆರಿಗೆ ಸೇರಿದಂತೆ ನಾನಾ ಕಾರಣದಿಂದ ಶಿಶು ಮರಣವಾಗುತ್ತದೆ. ಪ್ರತಿ ಒಂದು ಲಕ್ಷಕ್ಕೆ ಕೊಡಗಿನಲ್ಲಿ 9 ಮಕ್ಕಳ ಮರಣ ಸಂಭವಿಸುತ್ತಿದೆ. ರಾಜ್ಯಕ್ಕೆ ಹೋಲಿಸಿದರೆ ಕೊಡಗಿನಲ್ಲಿ ಕಡಿಮೆ ಪ್ರಕರಣವಿದೆ ಎಂದು ಮಡಿಕೇರಿ ಜಿಲ್ಲಾ ಮಕ್ಕಳ ಆರೋಗ್ಯ ಅಧಿಕಾರಿ ಗೋಪಿನಾಥ್‌ ಹೇಳಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

click me!