ಬ್ಯಾಡಗಿಯ ಚರಂಡಿಯಲ್ಲಿ ನವಜಾತ ಶಿಶು ಪತ್ತೆ!

By Web Desk  |  First Published Oct 5, 2019, 12:45 PM IST

ಪಟ್ಟಣದ ಎಪಿಎಂಸಿ ಗೇಟ್‌ ಬಳಿಯಲ್ಲಿನ ಚರಂಡಿಯಲ್ಲಿ ನವಜಾತ ಶಿಶು ಪತ್ತೆ|  ಅಲ್ಲಿದ್ದ ಜನರೇ ಮಗುವನ್ನು ರಕ್ಷಿಸಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ| ಮೆಣಸಿನಕಾಯಿ ತುಂಬು ಬಿಡಿಸಲು ಹೊರಟಿದ್ದ ಕೆಲ ಹೆಣ್ಣು ಮಕ್ಕಳು ಬಹಿರ್ದೆಸೆಗೆ ತೆರಳಿದಾಗ ಚರಂಡಿಯಲ್ಲಿ ಕರುಳ ಬಳ್ಳಿ ಹಾಗೂ ಮಾಂಸದ ಮುದ್ದೆಯೊಂದಿಗೆ ಬಿದ್ದಿದ್ದ ಮಗುವನ್ನು ನೋಡಿದ್ದಾರೆ|  ಗುಂಪಾಗಿ ಸೇರಿದ ಹತ್ತಾರು ಮಹಿಳೆಯರು ಮಗುವನ್ನು ಎತ್ತಿ ತಮ್ಮ ಬಟ್ಟೆಯಲ್ಲಿಯೇ ಸುತ್ತಿ ತಾಲೂಕಾಸ್ಪತ್ರೆ ದಾಖಲಿಸಿದ್ದಾರೆ| 


ಬ್ಯಾಡಗಿ(ಅ.5): ಪಟ್ಟಣದ ಎಪಿಎಂಸಿ ಗೇಟ್‌ ಬಳಿಯಲ್ಲಿನ ಚರಂಡಿಯಲ್ಲಿ ನವಜಾತ ಶಿಶುವನ್ನು ಬಿಸಾಕಿ ಹೋಗಿದ್ದು ಅಲ್ಲಿದ್ದ ಜನರೇ ಮಗುವನ್ನು ರಕ್ಷಿಸಿ ತಾಲೂಕಾಸ್ಪತ್ರೆಗೆ ದಾಖಲಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಮಗುವನ್ನು ಚರಂಡಿಯಲ್ಲಿ ಎಸೆದು ಹೋಗಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ನೋಡಿ ಎಂತಹ ಕಲ್ಲು ಹೃದಯವು ಕರಗಿಸುವಂತಿತ್ತು.

Tap to resize

Latest Videos

ಕರುಳ ಬಳ್ಳಿಯೊಂದಿಗೆ ಮಗು

ಮಾರುಕಟ್ಟೆಗೆ ಅದೇ ಮಾರ್ಗವಾಗಿ ಮೆಣಸಿನಕಾಯಿ ತುಂಬು ಬಿಡಿಸಲು ಹೊರಟಿದ್ದ ಕೆಲ ಹೆಣ್ಣು ಮಕ್ಕಳು ಬಹಿರ್ದೆಸೆಗೆ ತೆರಳಿದಾಗ ಚರಂಡಿಯಲ್ಲಿ ಕರುಳ ಬಳ್ಳಿ ಹಾಗೂ ಮಾಂಸದ ಮುದ್ದೆಯೊಂದಿಗೆ ಬಿದ್ದಿದ್ದ ಮಗುವನ್ನು ನೋಡಿದ್ದಾರೆ. ಈ ಹೃದಯ ಕಲಕುವ ದೃಶ್ಯ ನೋಡಿದ ಕೂಡಲೇ ಗುಂಪಾಗಿ ಸೇರಿದ ಹತ್ತಾರು ಮಹಿಳೆಯರು ಮಗುವನ್ನು ಎತ್ತಿ ತಮ್ಮ ಬಟ್ಟೆಯಲ್ಲಿಯೇ ಸುತ್ತಿ ತಾಲೂಕಾಸ್ಪತ್ರೆ ದಾಖಲಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಾಲೂಕಾಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷೆ ನಡೆಸಿದ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದರಲ್ಲದೇ ಮಗುವನ್ನು ಕೆಲ ಗಂಟೆಗಳ ವೀಕ್ಷಣೆಯಲ್ಲಿಟ್ಟು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನವಜಾತ ಶಿಶುವಿಗೆ ಸುಮಾರು 6 ತಿಂಗಳಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಯಾರೋ ಸಮಾಜಕ್ಕೆ ಹೆದರಿ ಅಬಾರ್ಷನ್‌ ಮಾಡಿ ನಂತರ ಚರಂಡಿಯಲ್ಲಿ ಎಸೆದಿರಬಹುದು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಮಗುವನ್ನು ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಲಾಗಿದ್ದು, ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!