ಸಚಿವ ಎಸ್.ಆರ್.ಶ್ರೀನಿವಾಸ್ ಮಾಜಿ ಪ್ರಧಾನಿಯಿಂದ ಅಂತರ ಕಾಯ್ದುಕೊಂಡರಾ? ಎಂದು ಅನುಮಾನ ಮೂಡಿಸುವಂತಹ ಘಟನೆ ತುಮಕೂರಿನಲ್ಲಿ ನಡೆದಿದೆ. ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಕಾರ್ಯಕ್ರಮದುದ್ದಕ್ಕೂ ಶ್ರೀನಿವಾಸ್ ದೇವೇಗೌಡರಿಂದ ದೂರ ಉಳಿದಿದ್ದಾರೆ.
ತುಮಕೂರು(ಅ.05): ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ತುಮಕೂರಿಗೆ ಬಂದಾಗಲೆಲ್ಲಾ ಅವರ ಪಕ್ಕದಲ್ಲೇ ಇರುತ್ತಿದ್ದ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಮಾಜಿ ಪ್ರಧಾನಿಯಿಂದ ಅಂತರ ಕಾಯ್ದುಕೊಂಡರಾ? ಎಂದು ಅನುಮಾನ ಗುರುವಾರ ನಡೆದ ತುಮಕೂರು ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರ ನಡಾವಳಿಕೆಯಿಂದ ಎಲ್ಲರಲ್ಲೂ ಹುಟ್ಟಿತು.
ವೇದಿಕೆಯಲ್ಲಿ ದೇವೇಗೌಡರ ಪಕ್ಕದಲ್ಲೇ ಕೂರುತಿದ್ದ ಶ್ರೀನಿವಾಸ್ ಇಂದು ಬಹು ದೂರ ಕುಳಿತಿದ್ದರು. ಅತ್ತ ಭೈರವಿ ಮಹಿಳಾ ಸಂಘದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲೂ ದೇವೇಗೌಡರ ಜೊತೆ ಇರದೇ ಎಸ್.ಆರ್.ಶ್ರೀನಿವಾಸ್ ದೂರು ಉಳಿದರು.
ತುಮಕೂರು: ಫಲಿತಾಂಶದಿಂದ ಕುಂದಿಲ್ಲ ಎಂದ್ರು ದೇವೇ ಗೌಡ
ಹಾಗೆಯೇ ಶಂಕುಸ್ಥಾಪನೆ ನಡೆಯುತಿದ್ದರೂ ತಮ್ಮ ಪಾಡಿಗೆ ತಾವು ತಿಂಡಿ ತಿನ್ನುತಿದ್ದರು. ಅಷ್ಟೆಅಲ್ಲದೇ ದೇವೇಗೌಡರು ತುಮಕೂರಿಗೆ ಬಂದಾಗಲೆಲ್ಲಾ ಗೌಡರ ಕಾರಿನಲ್ಲೇ ಪ್ರಯಾಣ ಮಾಡುತಿದ್ದ ಶ್ರೀನಿವಾಸ್ ಸ್ವಂತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇತ್ತಿಚೆಗೆ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿ ಬಿಜೆಪಿಯನ್ನು ಹಾಡಿ ಹೊಗಳಿದ್ದನ್ನು ಸ್ಮರಿಸಬಹುದು.
ಕೈಲಾಗದವರನ್ನು ಗೆಲ್ಲಿಸಿದ್ದೇವೆ:
ಜಿಲ್ಲಾ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಶ್ರೀನಿವಾಸ್ ಅವರು ನೆರೆಗೆ ತುತ್ತಾಗಿ ರಾಜ್ಯ ಸಂಕಷ್ಟದಲ್ಲಿದ್ದರೆ ಕೇಂದ್ರ ಸರ್ಕಾರ ಇತ್ತ ಕಡೆ ಗಮನಕೊಡುತ್ತಿಲ್ಲ. ರಾಜ್ಯದ ಪ್ರತಿನಿಧಿಗಳಾಗಿ 25 ಸಂಸದರನ್ನು ಗೆಲ್ಲಿಸಿ ನಮ್ಮ ಜವಾಬ್ದಾರಿಯನ್ನು ಮರೆತಿದ್ದರಿಂದಲೇ ರಾಜ್ಯಕ್ಕೆ ಇಂದು ಇಂತಹ ಪರಿಸ್ಥಿತಿ ಎದುರಾಗಿದೆ ಎಂದರು.
ಮೋದಿ, ಅಮಿತ್ ಶಾ ಮುಂದೆ ಹೋಗಿ ಮಾತನಾಡಲು ಆಗದವರನ್ನು ಗೆಲ್ಲಿಸಿ ರಾಜ್ಯ ಇಂದು ಕೈಕಟ್ಟಿಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಿಂದ ದೇವೇಗೌಡರು ಗೆದ್ದಿದ್ದರೆ ರಾಜ್ಯದ ಪರಿಸ್ಥಿತಿ ಇಂದು ಬೇರೆಯೇ ಇರುತ್ತಿತ್ತು ಎಂದರು.
ಹುಂಬ ದೈರ್ಯದಿಂದ ಸೋತೆವು:
ದೇವೇಗೌಡರನ್ನು ಬಿಟ್ಟರೆ ಬೇರೆಯವರು ಗೆಲ್ಲೋದಿಲ್ಲ ಎಂಬ ಹುಂಬ ಭರವಸೆಯಿಂದ ಮಾಜಿ ಪ್ರಧಾನಿ ಅವರನ್ನು ಸೋಲಿಸಿದ ಅಪಕೀರ್ತಿಗೆ ಜಿಲ್ಲೆಯ ಮತದಾರರು ಹಾಗೂ ಪಕ್ಷದ ಮುಖಂಡರು ಹೊತ್ತುಕೊಂಡಿದ್ದೇವೆ, ದೇವೇಗೌಡರು ಗೆದ್ದಿದ್ದರೆ ಜಿಲ್ಲೆ ಅಭಿವೃದ್ಧಿಯಾಗುತ್ತಿತ್ತು. ಮುಂದಿನ ಚುನಾವಣೆಯಲ್ಲಿ ದೇವೇಗೌಡರನ್ನು ನಿಲ್ಲಿಸಿ ಗೆಲ್ಲಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ, ಛಲವಾದಿ ದೇವೇಗೌಡರು ಪಕ್ಷವನ್ನು ಮತ್ತೆ ಕಟ್ಟುತ್ತಾರೆ. ಎಲ್ಲರೂ ಸಹಕಾರ ನೀಡುವಂತೆ ಕೋರಿದರು.
ಯಡಿಯೂರಪ್ಪ ಅವ್ರಿಗೆ ಹಣಕಾಸಿನ ಜ್ಞಾನ ಇಲ್ಲ..! ಸಿದ್ದು ವ್ಯಂಗ್ಯ