ಹೊಸಪೇಟೆಯಲ್ಲಿ ದೇಶದಲ್ಲೇ ಅತೀ ಎತ್ತರದ ಧ್ವಜಸ್ತಂಭ ಸ್ಥಾಪನೆ..!

By Kannadaprabha News  |  First Published Jun 3, 2022, 9:12 AM IST

*  ಹೊಸಪೇಟೆಯಲ್ಲಿ ರಾರಾಜಿಸಲಿದೆ 405 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ
*  ಪುನೀತ್‌ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ನೆರವೇರಿದ ಭೂಮಿಪೂಜೆ
*  ಹೊಸಪೇಟೆಯಲ್ಲಿವೆ ಎತ್ತರದ ಧ್ವಜಸ್ತಂಭಗಳು 
 


ಹೊಸಪೇಟೆ(ಜೂ.03): ವಿಜಯನಗರ ಜಿಲ್ಲೆ ಹೊಸಪೇಟೆಯ ಪುನೀತ್‌ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ದೇಶದಲ್ಲೇ ಅತಿ ಎತ್ತರದ ಧ್ವಜ ಸ್ತಂಭ ಸ್ಥಾಪಿಸಲಾಗುತ್ತಿದೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಆಸಕ್ತಿಯಿಂದ 405 ಅಡಿ ಎತ್ತರದ ಧ್ವಜಸ್ತಂಭವನ್ನು ಸ್ಥಾಪಿಸಲಾಗುತ್ತಿದೆ. ಈ ಧ್ವಜಸ್ತಂಭ 123.45 ಮೀಟರ್‌ ಎತ್ತರ ಹೊಂದಿದ್ದು, ಬಜಾಜ್‌ ಕಂಪನಿ ನಿರ್ಮಾಣ ಮಾಡುತ್ತಿದೆ. ಅಂದಾಜು 6 ಕೋಟಿ ವೆಚ್ಚ ತಗುಲಲಿದ್ದು, ಪ್ರವಾಸೋದ್ಯಮ ಇಲಾಖೆ ಅನುದಾನವೂ ಇದಕ್ಕೆ ವ್ಯಚ್ಚವಾಗಲಿದೆ ಎಂದು ತಿಳಿದು ಬಂದಿದೆ.

ಇದು ದೇಶದಲ್ಲೇ ಅತ್ಯಂತ ಎತ್ತರದ ಧ್ವಜ ಸ್ತಂಭವಾಗಲಿದೆ. ಪ್ರಪಂಚದಲ್ಲಿ 9ನೇ ಅತಿ ದೊಡ್ಡದು ಎಂಬ ಹೆಗ್ಗಳಿಕೆ ಪಡೆಯಲಿದೆ.

Tap to resize

Latest Videos

undefined

Vijayanagaraದಲ್ಲಿ ಸಮಗ್ರ ನೀರಾವರಿಗಾಗಿ ಪಾದಯಾತ್ರೆ , ಸ್ವಾಮೀಜಿಗಳ ಬೆಂಬಲ

ಭೂಮಿಪೂಜೆ:

ಧ್ವಜಸ್ತಂಭ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ನಗರದ ಪುನೀತ್‌ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ನೆರವೇರಿಸಲಾಯಿತು. ನಗರಸಭೆ ಅಧ್ಯಕ್ಷೆ ಸುಂಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಜಂಬುನಾಥ, ಮುಖಂಡ ಧರ್ಮೇಂದ್ರ ಸಿಂಗ್‌, ಪಿಡಬ್ಲ್ಯುಡಿ ಅಧಿಕಾರಿ ಕೃಷ್ಣ ಮತ್ತಿತರರಿದ್ದರು.

ಹೊಸಪೇಟೆಯಲ್ಲಿವೆ ಎತ್ತರದ ಧ್ವಜಸ್ತಂಭಗಳು:

ಹೊಸಪೇಟೆಯ ಪುನೀತ್‌ ರಾಜಕುಮಾರ ವೃತ್ತದಲ್ಲಿ 150ಅಡಿ ಎತ್ತರದ ಧ್ವಜಸ್ತಂಭ ಸ್ಥಾಪನೆ ಮಾಡಲಾಗಿದೆ. ಜೋಳದರಾಶಿ ಗುಡ್ಡದಲ್ಲಿ 100 ಅಡಿ ಎತ್ತರದ ಧ್ವಜಸ್ತಂಭ, ಬಿಜೆಪಿ ಜಿಲ್ಲಾ ಕಚೇರಿ ನಿವೇಶನದಲ್ಲಿ 100 ಅಡಿ ಎತ್ತರ, ಸಚಿವ ಆನಂದ ಸಿಂಗ್‌ರ ನಿವಾಸದ ಬಳಿ 100 ಅಡಿ ಎತ್ತರ, ರೈಲ್ವೆ ನಿಲ್ದಾಣದಲ್ಲಿ 70 ಅಡಿ ಎತ್ತರದ ಧ್ವಜಸ್ತಂಭ ಈಗಾಗಲೇ ಸ್ಥಾಪನೆ ಮಾಡಲಾಗಿದೆ. ಈಗ ಜಿಲ್ಲಾ ಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ.
 

click me!