ಗಂಗಾವತಿ: ನಿಧಿ ಆಸೆಗೆ ಹಿಂದೂ ಆರಾಧನಾ ಸ್ಥಳಗಳು ಬಲಿ?

By Kannadaprabha News  |  First Published Jun 3, 2022, 7:11 AM IST

*  ವ್ಯಾಸರಾಜರ ವೃಂದಾವನ ಬಳಿಕ ವಿಜಯಲಕ್ಷ್ಮೀ ಮಂದಿರ ಧ್ವಂಸ
*  ಅಭಿವೃದ್ಧಿಯ ನೆಪದಲ್ಲಿ ಸರ್ಕಾರದ ರಕ್ಷಣೆಯಲ್ಲಿಯೇ ನಿಧಿಗಳ್ಳತನ
*  ಪಂಪಾ ಸರೋವರದಲ್ಲಿ ರಾತ್ರಿ ಬೇರೆ ರಾಜ್ಯದ ಜನರ ಸುತ್ತಾಟ
 


ರಾಮಮೂರ್ತಿ ನವಲಿ

ಗಂಗಾವತಿ(ಜೂ.03): ತಾಲೂಕಿನ ಆನೆಗೊಂದಿ ಸನಿಹದಲ್ಲಿರುವ ಪಂಪಾಸರೋವರದ ವಿಜಯಲಕ್ಷ್ಮೀ ದೇವಸ್ಥಾನ ಇದೀಗ ರಾಜ್ಯ, ನೆರೆ ರಾಜ್ಯಗಳಲ್ಲೂ ಚರ್ಚೆಗೀಡಾಗಿರುವ ಪುಣ್ಯಸ್ಥಳ. ದೇಗುಲದ ನವೀಕರಣ ನೆಪದಲ್ಲಿ ವಿಜಯಲಕ್ಷ್ಮೀ ದೇವಿಯ ಮೂಲ ವಿಗ್ರಹವನ್ನು ರಾತ್ರೋ ರಾತ್ರಿ ತೆರವುಗೊಳಿಸಿರುವುದು. ಇದು ನಿಧಿಗಾಗಿಯೇ ನಡೆದಿರುವ ಹೀನ ಕೃತ್ಯ ಎನ್ನುವ ಆರೋಪ ಬಲವಾಗಿದೆ.

Tap to resize

Latest Videos

ಆನೆಗೊಂದಿಯ ಆಸುಪಾಸಿನಲ್ಲಿ ಇತಿಹಾಸ ಪ್ರಸಿದ್ಧ ದೇಗಲುಗಳಿದ್ದು, ಆನೆಗೊಂದಿ ಮತ್ತು ಹಂಪಿ ಪ್ರದೇಶದಲ್ಲಿ ಮುತ್ತು, ರತ್ನ, ಚಿನ್ನದ ನಾಣ್ಯಗಳನ್ನು ಸೇರಿನಿಂದ ಅಳತೆ ಮಾಡಿರುವುದರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಅಲ್ಲದೇ ಈ ಪ್ರದೇಶದ ಅಲ್ಲಲ್ಲಿ ನಿಧಿ ಸಂಗ್ರಹಿಸಿ ಇಡಲಾಗಿದೆ ಎನ್ನುವ ಮಾತೂ ಇದೆ. ಈ ಐತಿಹ್ಯ ಕೇಳಿದವರು ನಿಧಿ ಆಸೆಗಾಗಿ ಯಂತ್ರ, ಮಂತ್ರ, ತಂತ್ರಗಳನ್ನು ಬಳಸಿಕೊಂಡು ನಿಧಿ ಅಪಹರಿಸಿದ ಉದಾಹರಣೆಗಳೂ ಇವೆ.

Koppala ಟಿಸಿಗಾಗಿ ತಾಳಿ ಮಾರಲು ಸಿದ್ದವಾಗಿದ್ದ ತಾಯಿ!

ರಾಜಗುರು ವ್ಯಾಸರಾಜರು:

ವಿಜಯನಗರ ಸಾಮ್ರಾಜ್ಯದ ಅರಸು ಶ್ರೀಕೃಷ್ಣದೇವರಾಯರ ಗುರುಗಳಾಗಿದ್ದ ವ್ಯಾಸರಾಜರು ಆಗೊಂದಿಯ ತುಂಗಭದ್ರಾ ನಡುಗಡ್ಡೆಯಲ್ಲಿ ಇರುವ ನವ ವೃಂದಾವನಗಡ್ಡೆಯಲ್ಲಿ ವೃಂದಾವನಸ್ಥರಾಗಿದ್ದಾರೆ. 9 ಯತಿವರೇಣ್ಯರ ವೃಂದಾವನಗಳಿದ್ದು, ಇದರಲ್ಲಿ ವ್ಯಾಸರಾಜರ ವೃಂದಾವನ ಒಂದು.

ವ್ಯಾಸರಾಜರು ಗುರುಗಳಷ್ಟೇ ಅಲ್ಲ, ಶ್ರೀಕೃಷ್ಣದೇವರಾಯರ ತನಗೆ ಕುಜ ರೋಗ ಬಂದಾಗ ಕೆಲ ವರ್ಷ ಇವರನ್ನು ಪಟ್ಟಕ್ಕೆ ಕುಳ್ಳಿರಿಸಿದ್ದ. ಹಾಗಾಗಿ ವ್ಯಾಸರಾಜರ ಬಳಿ ಅಪಾರವಾದ ವಜ್ರ, ವೈಢೂರ್ಯ ಸೇರಿದಂತೆ ಚಿನ್ನ, ಬೆಳ್ಳಿ ವಸ್ತುಗಳು ಇದ್ದವು. ಅವೆಲ್ಲವನ್ನು ಈ ವೃಂದಾವನದಲ್ಲಿ ಇರಿಸಲಾಗಿದೆ ಎನ್ನುವ ನಂಬಿಕೆಯಿಂದ ನಿಧಿಗಳ್ಳರು ವೃಂದಾವನವನ್ನು ಧ್ವಂಸ ಮಾಡಿದರು.

ಆಂಧ್ರಪ್ರದೇಶದ ತಾಡಪತ್ರಿಯ ಬುಗ್ಗಾ ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರೊಬ್ಬರ ಮಾರ್ಗದರ್ಶನ ಪಡೆದು ಈ ಕೃತ್ಯ ನಡೆಸಿದ್ದರು. ತಾಡಪತ್ರಿಯ 8 ಜನ ನಿಧಿಗಳ್ಳರು 2019ರ ಜು. 19ರ ರಾತ್ರಿ ವ್ಯಾಸರಾಜರ ವೃಂದಾವನದ ಕೆಳ ಮಟ್ಟದಿಂದ ಮೂರು ಅಡಿ ಅಗೆದರು. ಬೆಳಗ್ಗೆಯವವರೆಗೂ ಅಗೆದರು. ಮೂಲ ಕೆಳಮಟ್ಟಸಿಗದಿದ್ದಾಗ ಅಲ್ಲಿಂದ ಕಾಲ್ಕಿತ್ತಿದ್ದರು. ಬಂಧನ ಸಂದರ್ಭದಲ್ಲಿ ಅವರು ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ಈ ಸತ್ಯ ಉಲ್ಲೇಖವಾಗಿದೆ.

ವಿಜಯಲಕ್ಷ್ಮೀ ವಿಗ್ರಹ ತೆರವು:

ಕಳೆದ ಒಂದು ವರ್ಷದಿಂದ ಪಂಪಾಸರೋವರದಲ್ಲಿ ಇರುವ ವಿಜಯಲಕ್ಷ್ಮೀ ದೇವಸ್ಥಾನ ಮತ್ತು ಪಂಪಾಸರೋವರ ನವೀಕರಣ ಕಾರ್ಯ ಭರದಿಂದ ಸಾಗಿದೆ. ನವೀಕರಣ ಮಾಡುವ ಉದ್ದೇಶದಿಂದ ಸಚಿವರೊಬ್ಬರು .2.8 ಕೋಟಿ ವೆಚ್ಚದಲ್ಲಿ ಪ್ರಾಚ್ಯವಸ್ತು ಇಲಾಖೆ ಅನುಮತಿ ಪಡೆದು ಖಾಸಗಿಯವರಿಗೆ ಕಾಮಗಾರಿ ವಹಿಸಿದ್ದಾರೆ. ನವೀಕರಣ ಸಂದರ್ಭದಲ್ಲಿ ಮೂಲ ಗರ್ಭಗುಡಿ ಮತ್ತು ಮೂಲ ವಿಗ್ರಹಕ್ಕೆ ಧಕ್ಕೆ ಬರಬಾರದೆಂದು ಇಲಾಖೆ ಸೂಚನೆ ನೀಡಿತ್ತು. ಆದರೆ ರಾತ್ರೋ ರಾತ್ರಿ ಇಲಾಖೆಯ ಅಧಿಕಾರಿಗಳಿಗೆ, ಸ್ಥಳೀಯರಿಗೆ ಮಾಹಿತಿ ನೀಡದೆ ತೆರವುಗೊಳಿಸಿದ್ದರಿಂದ ಅನುಮಾನಕ್ಕೆ ಕಾರಣವಾಗಿ, ವಿವಾದ ಸೃಷ್ಟಿಯಾಗಿದೆ.

ಆಂಜನೇಯ ಹುಟ್ಟಿದ್ದು ಎಲ್ಲಿ? ಮಹಾರಾಷ್ಟ್ರದಿಂದ ಹೊಸ ವಾದ!

ವಿಗ್ರಹ ತೆರವು ಸಂದರ್ಭದಲ್ಲಿ ಗೌಪ್ಯತೆ ಕಾಪಾಡಿರುವುದು ಏಕೆ? ಕಳೆದ ಒಂದು ತಿಂಗಳ ಹಿಂದೆ ಪಂಡಿತರಿಂದ ಶಾಸೊತ್ರೕಕ್ತ ಪೂಜೆ ಮಾಡಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ರಾತ್ರೋ ರಾತ್ರಿ ಅಲ್ಲಿದ್ದ ಅರ್ಚಕರನ್ನು ಹೊರಗೆ ಕಳಿಸಿರುವುದು, ಅಲ್ಲಿದ್ದ ಸಿಸಿ ಕ್ಯಾಮೆರಾ ಮುಚ್ಚಿರುವುದು, ಅಧಿಕಾರಿಗಳಿಗಾಗಲಿ, ಸ್ಥಳೀಯರಿಗಾಗಲಿ ತಿಳಿಸದೇ ಗರ್ಭಗುಡಿ ಒಡೆದಿರುವುದು ಮತ್ತು ಶ್ರೀಚಕ್ರಕ್ಕೆ ಧಕ್ಕೆ, ವಿಗ್ರಹ ತೆರವು, ಅಲ್ಲದೇ ಕೆಲ ಸಮಯದಲ್ಲಿ ಮತ್ತೆ ವಿಗ್ರಹ ಸ್ಥಳ ಮುಚ್ಚಿರುವುದು ಸಂಶಯಕ್ಕೆ ಎಡೆ ಮಾಡಿದೆ.

ಮೂಲ ವಿಗ್ರಹವನ್ನು ಕಿತ್ತು ಹಾಕಿರುವುದು ಅಕ್ಷಮ್ಯ ಅಪರಾಧ. ಹಂಪಿ ಪರಿಸರದ ಪ್ರಾಚೀನ ಇತಿಹಾಸವುಳ್ಳ ಸ್ಥಳಗಳಲ್ಲಿ ಪಂಪಾಸರೋವರಕ್ಕೆ ಪೌರಾಣಿಕ, ಚಾರಿತ್ರಿಕ ವಿಶಿಷ್ಟಹಿನ್ನಲೆ ಇದೆ ಎಂಬದು ಇತಿಹಾಸ ತಜ್ಞರ ಅಭಿಪ್ರಾಯ.

ಕ್ರಮಕ್ಕೆ ಆಗ್ರಹ

ಚಾಲುಕ್ಯರು ಸರೋವರದ ದಡದ ಮೇಲೆ ಪಂಪಾಂಬಿಕೆ ಮತ್ತು ಪಂಪಾಪತಿ ದೇವಾಲಯಗಳನ್ನು ನಿರ್ಮಿಸುತ್ತಾರೆ. ಪಂಪಾಂಬಿಕೆಗೆ ವಿಜಯಲಕ್ಷ್ಮೇ ಎಂದು ಕರೆಯುತ್ತಾರೆ. ಪ್ರತಿಷ್ಠಾಪನೆ ಸಂದರ್ಭದಲ್ಲಿ ವಿಗ್ರಹದ ಕೆಳಗೆ ಚಿನ್ನ, ಬೆಳ್ಳಿ ಸೇರಿದಂತೆ ವಜ್ರ, ವೈಢೂರ್ಯಗಳನ್ನು ಹಾಕಲಾಗಿದೆ ಎನ್ನುವ ಅಭಿಪ್ರಾಯಗಳಿವೆ. ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ಕ್ರಮ ಕೈಗೊಂಡರೆ ಸತ್ಯಾಂಶ ಹೊರಬರಲಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
 

click me!