
ಬೆಂಗಳೂರು(ಡಿ.18): ವಾಹನ ಸಂಚಾರದಿಂದ ನಗರ ಪ್ರದೇಶಗಳಲ್ಲಿ ಉಂಟಾಗುತ್ತಿದ್ದ ಪರಿಸರ ಮಾಲಿನ್ಯ(Environmental Pollution) ನಿಯಂತ್ರಿಸುವ ಸಲುವಾಗಿಯೇ ಆವಿಷ್ಕಾರಗೊಳಿಸಿರುವ ಭಾರತ್ ಸ್ಟೇಜ್-6 (BS-6)ನ ಬಸ್‌ಗಳನ್ನು(Bus) ಮುಂದಿನ ವಾರದಿಂದ ನಗರದ ರಸ್ತೆಗಿಳಿಸಲು ಬಿಎಂಟಿಸಿ(BMTC) ಸಜ್ಜುಗೊಂಡಿದೆ. ದೇಶದಲ್ಲಿ(India) ಇದೇ ಮೊದಲ ಬಾರಿ ಸಾರ್ವಜನಿಕ ವಲಯದಲ್ಲಿ ಸಾರಿಗೆಗಾಗಿ ಬಿಎಸ್-6 ಬಸ್‌ಗಳನ್ನು ಬಳಸುವ ಹೆಗ್ಗಳಿಗೆ ಬಿಎಂಟಿಸಿ ಪಾತ್ರವಾಗಲಿದೆ.
ನಗರ ಪ್ರದೇಶಗಳಲ್ಲಿ ಅತಿ ಹೆಚ್ಚು ಮಂದಿ ಸಾರ್ವಜನಿಕ ಸಾರಿಗೆಯನ್ನು ಅವಲಂಭಿಸುತ್ತಾರೆ. ಜೊತೆಗೆ, ಈ ಹಿಂದೆ ಇದ್ದ ಬಿಎಸ್-4(BS-4) ವಾಹನಗಳಿಂದ ಹೆಚ್ಚಿನ ಹೊಗೆ ಬರುತ್ತಿತ್ತು. ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಬಿಎಸ್-6 ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದೆ. ಇದರಿಂದ ಬೆಂಗಳೂರು(Bengaluru) ನಗರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.
Corona Efffect: ಡಿಪೋದಲ್ಲಿ ಧೂಳು ಹಿಡಿದ 600 ವೋಲ್ವೋ ಬಸ್: ಕೋಟ್ಯಂತರ ರು. ನಷ್ಟ..!
2017-18ನೇ ಸಾಲಿನಲ್ಲಿ ಬಿಎಸ್ 6 ಮಾದರಿಯ ಒಟ್ಟು 565 ಬಸ್‌ಗಳನ್ನು ಅಶೋಕ್ ಲೇಲ್ಯಾಂಡ್(Ashok Leyland) ಕಂಪನಿಯಿಂದ ಖರೀದಿಸಲು ಕಾರ್ಯಾದೇಶ ಮಾಡಲಾಗಿತ್ತು. ಈ ಎಲ್ಲ ಬಸ್‌ಗಳನ್ನು 2022ರ ಫೆಬ್ರವರಿ ಅಂತ್ಯದ ವೇಳೆಗೆ ಒದಗಿಸುವುದಾಗಿ ತಿಳಿಸಿದೆ. ಪ್ರಸ್ತುತ 150 ಬಸ್‌ಗಳು ಬಂದಿದ್ದು, ಮುಂದಿನ ಒಂದು ವಾರದಲ್ಲಿ ಹೆಚ್ಚುವರಿಯಾಗಿ 50 ಬಸ್‌ಗಳ ಬರಲಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದರು.
ಅಶೋಕಾ ಲೇಲ್ಯಾಂಡ್ ಕಂಪೆನಿಯಿಂದ ಈಗಾಗಲೇ 100 ಬಿಎಸ್-6 ಬಸ್‌ಗಳು ನಗರದ ಕೆಂಗೇರಿಯ ಬಿಎಂಟಿಸಿ ಘಟಕಕ್ಕೆ ಆಗಮಿಸಿವೆ. ಒಂದು ವಾರದಲ್ಲಿ ಇನ್ನೂ 50 ಬಸ್‌ಗಳು ಬರಲಿವೆ. ಮುಂದಿನ ದಿನಗಳಲ್ಲಿ ಬಿಎಸ್-6 ಬಸ್‌ಗಳನ್ನು ಮಾತ್ರ ಖರೀದಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲೆಕ್ಟ್ರಿಕ್, ಬಿಎಸ್-6 ಬಸ್‌ಗಳಿಗೆ ಚಾಲನೆ:
ಅಶೋಕಾ ಲೇಲ್ಯಾಂಡ್ ಕಂಪೆನಿಯಿಂದ ಬಂದಿರುವ ಬಿಎಸ್-6 ಮತ್ತು ಎಲೆಕ್ಟ್ರಿಕ್ ಬಸ್‌ಗಳಿಗೆ(Electric Bus) ಒಂದೇ ದಿನ ಚಾಲನೆ ನೀಡಲು ನಿರ್ಧರಿಸಲಾಗಿದೆ. ಈಗಾಲೇ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಬೇಕಾಗಿತ್ತು. ಆದರೆ, ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಿದ್ದ ಪರಿಣಾಮ ಬಸ್‌ಗಳ ಚಾಲನೆಗೆ ಸಾಧ್ಯವಾಗಿರಲಿಲ್ಲ. ಅಲ್ಲದೆ, ಪ್ರಸ್ತುತ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಇದಾದ ಬಳಿಕ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಿ ಬಸ್‌ಗಳ ಚಾಲನೆಗೆ ದಿನಾಂಕ ನಿಗದಿ ಪಡಿಸುವುದಾಗಿ ಅವರು ವಿವರಿಸಿದರು.
ಪರಿಸರ ಸ್ನೇಹಿ ಬಸ್
ಬಿಎಸ್-6 ವಾಹನಗಳು ಪರಿಸರ ಸ್ನೇಹಿಯಾಗಿವೆ(Eco-Friendly). ಇವುಗಳು ವಾತಾವರಣದಲ್ಲಿ ಮಾಲಿನ್ಯ ಉಂಟುಮಾಡುವುದಿಲ್ಲ. ಇವುಗಳ ಎಂಜಿನ್ ಸಾಮರ್ಥ್ಯ (197ಎಚ್‌ಪಿ) ಬಿಎಸ್ 4 ವಾಹನಗಳಿಗಿಂತ ಅಧಿಕವಾಗಲಿದೆ. ಬೆಂಕಿ ಅವಘಡಗಳ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ಈ ಬಸ್‌ಗಳಲ್ಲಿ ಅಳವಡಿಸಲಾಗಿದೆ. ಜೊತೆಗೆ, ಕಡಿಮೆ ಪ್ರಮಾಣ ಇಂಧನ ಬಳಕೆ ಮಾಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದು, ಬಿಎಂಟಿಸಿಗೆ ಪ್ರಸ್ತುತ ಉಂಟಾಗುತ್ತಿರುವ ನಷ್ಟದ ಪ್ರಮಾಣ ಕಡಿಮೆಯಾಗಲಿದೆ.
Bengaluru| 300 ಎಲೆಕ್ಟ್ರಿಕ್ ಬಸ್ ಖರೀದಿಗೆ BMTC ಹಸಿರು ನಿಶಾನೆ
ಚುನಾವಣಾ ನೀತಿ ಸಂಹಿತೆಯಿಂದ ಎಲೆಕ್ಟ್ರಿಕ್ ಬಸ್‌ಗಳ ಚಾಲನೆ ನೀಡುವ ಕಾರ್ಯಕ್ರಮ ವಿಳಂಬವಾಗಿದೆ. ಇದೀಗ ಚುನಾವಣೆ ಮುಗಿದಿದ್ದು, ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಿ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಅಂತ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದ್ದಾರೆ.
ಪ್ರಯಾಣಿಕರ ಕೊರತೆ: ವೋಲ್ವೊ ಬಸ್ ದರ ಕಡಿತ
ಕೊರೋನಾ(Coronavirus) ಬಳಿಕ ಪ್ರಯಾಣಿಕರಿಲ್ಲದೆ ಡಿಪೋಗಳಲ್ಲಿ ಧೂಳು ತಿನ್ನುತ್ತಿದ್ದ ಹವಾನಿಯಂತ್ರಿತ ವೋಲ್ವೊ ಬಸ್‌ಗಳಿಗೆ(Volvo Bus) ಪ್ರಯಾಣಿಕರನ್ನು(Passengers) ಆಕರ್ಷಿಸಲು ಪ್ರಯಾಣ ದರದಲ್ಲಿ ಶೇ.34ರಷ್ಟು ಕಡಿತಗೊಳಿಸಿ ಬಿಎಂಟಿಸಿ ಅದೇಶಿಸಿದೆ.