Pet Dogs: ಕಬ್ಬನ್‌ ಪಾರ್ಕ್‌ನಲ್ಲಿ ನಾಯಿ ಮಲ-ಮೂತ್ರ ಮಾಡಿದ್ರೆ ಮಾಲೀಕರೇ ಕ್ಲೀನ್‌ ಮಾಡ್ಬೇಕು..!

Kannadaprabha News   | Asianet News
Published : Dec 18, 2021, 05:31 AM ISTUpdated : Dec 18, 2021, 05:34 AM IST
Pet Dogs: ಕಬ್ಬನ್‌ ಪಾರ್ಕ್‌ನಲ್ಲಿ ನಾಯಿ ಮಲ-ಮೂತ್ರ ಮಾಡಿದ್ರೆ ಮಾಲೀಕರೇ ಕ್ಲೀನ್‌ ಮಾಡ್ಬೇಕು..!

ಸಾರಾಂಶ

*  ಸಾಕು ನಾಯಿಗಳನ್ನು ಪಾರ್ಕ್‌ಗೆ ತರಲು ತೋಟಗಾರಿಕೆ ಇಲಾಖೆಯಿಂದ ಹಲವು ನಿರ್ಬಂಧ *  ನಾಯಿ ಕಾಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಹೈಕೋರ್ಟ್‌ *  ಸಾಕು ನಾಯಿಗಳಿಗೆ ಉದ್ಯಾನದಲ್ಲಿ ಆಹಾರ ನೀಡಬಾರದು  

ಬೆಂಗಳೂರು(ಡಿ.18): ನಗರದ ಕಬ್ಬನ್‌ ಉದ್ಯಾನದಲ್ಲಿ(Cubbon Park) ಸಾಕು ನಾಯಿಗಳ(Pet Dog) ಮಲ-ಮೂತ್ರವನ್ನು ಅವುಗಳ ಮಾಲಿಕರೇ ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಉದ್ಯಾನ ಪ್ರವೇಶಕ್ಕೆ ಅವಕಾಶ ನೀಡದಿರಲು ತೋಟಗಾರಿಕೆ ಇಲಾಖೆ(Department of Horticulture) ನಿರ್ಧರಿಸಿದೆ. ಈ ಸಂಬಂಧ ಮಾರ್ಗಸೂಚಿಗಳನ್ನು(Guidelines) ಹೊರಡಿಸಿರುವ ತೋಟಗಾರಿಕೆ ಇಲಾಖೆ, ಸಾಕು ನಾಯಿಗಳೊಂದಿಗೆ ಬರುವ ಮಾಲೀಕರಿಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದು, ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯುಂಟಾದಲ್ಲಿ ಮಾಲಿಕರನ್ನೇ(Owners) ಹೊಣೆಗಾರರನ್ನಾಗಿ ಮಾಡಲು ತೀರ್ಮಾನಿಸಿದೆ.

ಸಾಕು ನಾಯಿಗಳನ್ನು ಕಬ್ಬನ್‌ ಉದ್ಯಾನವನಕ್ಕೆ ಕರೆತರುವ ಮಾಲಿಕರ ಕುರಿತು ಹೈಕೋರ್ಟ್‌(Karnataka High Court) ಇತ್ತೀಚೆಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ, ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಗೆ ಸೂಚಿಸಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಇಲಾಖೆ, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ(Indian Animal Welfare Board) ಹೊರಡಿಸಿರುವ ನಿಯಮಗಳನ್ವಯ ಶುಕ್ರವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಮಾಲಿಕರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳುವುದಕ್ಕೆ ನಿರ್ಧರಿಸಿದೆ.

ಶ್ವಾನದಿಂದ ಗೊತ್ತಾಯ್ತು ನಿಂತ ಶ್ವಾಸ... ಮಗುವಿನ ಜೀವ ಉಳಿಸಿದ Pet Dog

ಸಾಕು ನಾಯಿಗಳನ್ನು ಉದ್ಯಾನಕ್ಕೆ ಕರೆ ತರುವ ಕುರಿತು ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣ (ಕಬ್ಬನ್‌ ಉದ್ಯಾನ) ಸಾಕು ನಾಯಿಗಳನ್ನು ನಿಯಂತ್ರಿಸುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಇದೀಗ ಹೈಕೋರ್ಟ್‌ ನಿರ್ದೇಶನದಂತೆ ಕ್ರಮ ಕೈಗೊಳ್ಳುತ್ತಿದೆ. ಈ ನಿಯಮಗಳನ್ನು ಮಾಲಿಕರು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾರ್ಗಸೂಚಿಗಳು ಇಂತಿವೆ

* ಉದ್ಯಾನಕ್ಕೆ ನಾಯಿಗಳನ್ನು ಕರೆತರುವವರು ಆರು ಅಡಿಗಳಿಗಿಂತ ಕಡಿಮೆ ಉದ್ದದ ಸರಪಳಿಯಿಂದ ಕಟ್ಟಿ  ಹಾಕಿರಬೇಕು. ಸರಪಳಿಯುನ್ನು ಕೈಯಲ್ಲಿಡಿದುಕೊಂಡು ನಾಯಿಯನ್ನು ಉದ್ಯಾನದಲ್ಲಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
* ತಮ್ಮ ನಾಯಿಗೆ ರೆಬೀಸ್‌ ರೋಗ(Rabies Disease) ನಿರೋಧಕ ಚುಚ್ಚುಮದ್ದು(Injection) ಹಾಕಿಸಿಕೊಂಡಿರುವ ಸಂಬಂಧ ದಾಖಲೆಗಳೊಂದಿಗೆ ಉದ್ಯಾನ ಪ್ರವೇಶಿಸಬೇಕು.
* ಉದ್ಯಾನದಲ್ಲಿ ನಾಯಿಗಳ ಮಲ-ಮೂತ್ರ ವಿಸರ್ಜನೆ ಮಾಡುವುದನ್ನು ನಿಯಂತ್ರಿಸಬೇಕು. ಒಂದು ವೇಳೆ ವಿರ್ಜನೆ ಮಾಡಿದಲ್ಲಿ ಮಾಲಿಕರೇ ಸ್ವಚ್ಛಗೊಳಿಸಬೇಕು.
* ಸಾಕು ನಾಯಿಗಳಿಗೆ ಯಾವುದೇ ಕಾರಣಕ್ಕೂ ಉದ್ಯಾನದಲ್ಲಿ ಆಹಾರ ನೀಡಬಾರದು.
* ಉಗ್ರ ಸ್ವಭಾವ ಮತ್ತು ದೊಡ್ಡ ಗಾತ್ರದ ನಾಯಿಗಳನ್ನು ಉದ್ಯಾನಕ್ಕೆ ಕರೆ ತರಬಾರದು.
* ತೋಟಗಾರಿಕೆ ಇಲಾಖೆಯ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಮಾಲಿಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.
* ಉದ್ಯಾನದಲ್ಲಿ ಮಕ್ಕಳ ಆಟವಾಡುವ ಪ್ರದೇಶ ಮತ್ತು ಸಾರ್ವಜನಿಕರು ವಾಯುವಿಹಾರ ನಡೆಸುವ ವೇಳೆ (ಬೆಳಗ್ಗೆ 6ರಿಂದ 8 ಗಂಟೆ) ಉದ್ಯಾನಕ್ಕೆ ನಾಯಿಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
* ಸಾರ್ವಜನಿಕರು ಮಧ್ಯಾಹ್ನ 12ರಿಂದ 2 ಗಂಟೆಯವರೆಗೂ ಮಾತ್ರ ಇಲಾಖೆ ಅಧಿಕಾರಿಗಳು ಗುರುತಿಸಿರುವ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಬೇಕು. ಬಳಿಕ ಆ ಸ್ಥಳವನ್ನು ಸ್ವಚ್ಛಗೊಳಿಸಬೇಕು.

ಹೊಸ ಬಟ್ಟೆ ಧರಿಸಿ ಹಬ್ಬದೂಟ ಮಾಡಿದ ಶ್ವಾನ, ವಿಡಿಯೋ ವೈರಲ್

ನೆರೆ ರಾಜ್ಯ ಕೇರಳದಲ್ಲಿ ಓಣಂ ಹಬ್ಬದ ಸಂದರ್ಭ ಶ್ವಾನವೊಂದು ಶಿಸ್ತಾಗಿ ಕುಳಿತು ಹಬ್ಬದ ಭೋಜನ ಉಣ್ಣುವ ವಿಡಿಯೋ ನೆಟ್ಟಿಗರ ಮನಸು ಗೆದ್ದಿತ್ತು. ಓಣಂ ಹಬ್ಬದ ದಿನ ಬೆಳ್ಳಂಬೆಳಗ್ಗೆ ಎದ್ದು ಬಗೆ ಬಗೆಯ ತರಕಾರಿಗಳನ್ನು ಆರಿಸಿ ಕತ್ತರಿಸಿ ಬೇರೆ ಬೇರೆ ರೆಸಿಪಿ ಸಿದ್ಧಪಡಿಸಿ ಬಿಸಿ ಬಿಸಿ ಅಡುಗೆ ಮಾಡಿ ಎಲ್ಲರೂ ಒಟ್ಟಿಗೇ ಊಟ ಮಾಡುತ್ತಾರೆ. ಒಟ್ಟಿಗೆ ಅಡುಗೆ ಮಾಡಿ ಒಟ್ಟಿಗೆ ಊಟ ಮಾಡುವುದೇ ವಿಶೇಷ. ಇಲ್ಲೊಂದು ಕಡೆ ಕುಟುಂಬವೊಂದು ತಮ್ಮ ಪ್ರೀತಿಯ ಶ್ವಾನವನ್ನೂ ಜೊತೆಗೇ ಕೂರಿಸಿಕೊಂಡು ಊಟ ಮಾಡಿದ್ದರು.
 

PREV
Read more Articles on
click me!

Recommended Stories

ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಡಿ.20ಕ್ಕೆ ಚಿತ್ರಕಲಾ ಸ್ಪರ್ಧೆ: ಎಲ್ಲಿ?
ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣ ವಿಸ್ತರಣೆ ಕಾರ್ಯ ಆರಂಭ: ಪ್ರಯಾಣಿಕರು ಕಾಯುವ ದುಸ್ಥಿತಿ