ಭಾರತದ ಸೈನಿಕರು ಮಾನವೀಯತೆ ಮೆರೆದಿದ್ದಾರೆ: ಮಾಜಿ ಸೈನಿಕ ಪುಟ್ಟಸ್ವಾಮಿ

By Kannadaprabha NewsFirst Published Jul 27, 2022, 3:52 AM IST
Highlights

ಚಾಮರಾಜನಗರದ ಯಳಂದೂರಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.

ಯಳಂದೂರು:  ಕಾರ್ಗಿಲ್‌ ಯುದ್ದದಲ್ಲಿ ಮಡಿದ ಪಾಕಿಸ್ತಾನ ದೇಶದ ಸೈನಿಕರ ಅಂತ್ಯಸಂಸ್ಕಾರವನ್ನು ಮಾಡಲು ಆ ದೇಶದ ಸರ್ಕಾರ ಸೈನಿಕರ ಶವವನ್ನು ತೆಗೆದುಕೊಂಡು ಹೋಗಲಿಲ್ಲ ಇದನ್ನರಿತ ಭಾರತ ಸೈನ್ಯವು ಸಕಲ ಮಾರ್ಯಾದೆಯೊಂದಿಗೆ ಗೌರವ ಪೂರ್ವಕವಾಗಿ ಸೈನಿಕರ ಶವದ ಅಂತ್ಯಸಂಸ್ಕಾರ ಮಾಡಿದರು ಇದು ಭಾರತೀಯ ಸೈನಿಕರ ಮಾನವೀಯತೆ ಎಂದು ಮಾಜಿ ಸೈನಿಕ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ರೋಟರಿ ಸಂಸ್ಥೆ ಗ್ರೀನ್‌ವೇ ಯಳಂದೂರು ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಟಲ್ ಬಿಹಾರಿ ವಾಜಪೇಯಿಯವರು ಭಾರತದ ಪ್ರಧಾನಿಯಾಗಿದ್ದ ಸಮಯದಲ್ಲಿ ನಡೆದ ಕಾರ್ಗಿಲ್ ಯುದ್ದವು ಪಾಕಿಸ್ತಾನ ಮತ್ತು ಭಾರತ ದೇಶದ ನಡುವೆ ನಡೆದ ಯುದ್ದವಾಗಿದೆ. ಎರಡು ದೇಶಗಳು ಪರಸ್ಪರ ಸ್ನೇಹಮಯವಾಗಿರೋಣ ಎಂದು ಮಾತು ಕೊಟ್ಟ ಪಾಕಿಸ್ತಾನವನ್ನು ಭಾರತವು ನಂಬಿತ್ತು ಆದರೆ ನಮ್ಮ ನಂಬಿಕೆ ವಿರುದ್ದವಾಗಿ ಪಾಕ್ ನಡೆದುಕೊಂಡಿತು ಈ ಯುದ್ದವು ಪಾಕಿಸ್ತಾನ ದೇಶದ ನಂಬಿಕೆದ್ರೋಹದ ಯುದ್ದವಾಗಿದೆ ಎಂದರು.

Latest Videos

18ಸಾವಿರ ಎತ್ತರದ ಕಾರ್ಗಿಲ್ ಪ್ರದೇಶದಲ್ಲಿ ನಮ್ಮ ಭಾರತದ ಆರು ಜನ ಸೈನಿಕರನ್ನು ಕತ್ತುಕೊಯ್ದು ನಾಲಿಗೆ ಸೀಳಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಆರು ಜನ ಸೈನಿಕರ ಮೃತದೇಹವನ್ಬು ಅಮಾನವೀಯವಾಗಿ ಚೀಲದಲ್ಲಿ ಕಟ್ಟಿಎಸೆದರು ನಮ್ಮ ದೇಶದ ಎರಡು ವಿಮಾನವನ್ನು ವಶಪಡಿಸಿಕೊಳ್ಳಲಾಯಿತು ಎಂದು ಯುದ್ದದ ಕಾರಣದ ಕ್ರೂರತೆಯನ್ನು ಬಿಡಿಸಿ ಹೇಳಿದರು. ಈ ಯುದ್ದದಲ್ಲಿ ನಮ್ಮ ದೇಶದ 550 ಸೈನಿಕರು ಭಾರತಮಾತೆಯ ರಕ್ಷಣೆಗೆ ಪ್ರಾಣತ್ಯಾಗ ಮಾಡಿದರು ಎಂದರು.

ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಂಗಾರನಾಯಕ ಮಾತನಾಡಿ, ಸೈನಿಕರು ನಮ್ಮ ದೇಶದ ರಕ್ಷಕರು, ಭಾರತದೇಶದ ಜನರು ಶಾಂತಿ, ನೆಮ್ಮದಿ ಹಾಗೂ ಸಂತೋಷದಿಂದ ಬದುಕುತ್ತಿರುವುದು ನಮ್ಮ ಸೈನಿಕರು ಗಡಿಯಲ್ಲಿ ದೇಶವನ್ನು ಕಾಯುತ್ತಿರುವುದರಿಂದ ಎಂದು ಸೈನಿಕರ ತ್ಯಾಗವನ್ನು ಬಣ್ಣಿಸಿದರು. ಇಂದು ತ್ಯಾಗ ಬಲಿದಾನದ ದಿವಸವಾಗಿದೆ ಭಾರತದ ಗಡಿಯಲ್ಲಿ ನಮ್ಮ ಸೈನಿಕರು ಚಳಿ, ಮಳೆಯನ್ನು ಲೆಕ್ಕಿಸದೇ ಭಾರತೀಯ ಜನತೆಯ ಹಾಗೂ ದೇಶದ ರಕ್ಷಣೆಗೆ ಟೊಂಕಕಟ್ಟಿಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ರೋಟರಿ ಸಂಸ್ಥೆಯ ಮುಂದಿನ ಅಧ್ಯಕ್ಷ ಡಾ. ಸಾಗರ್‌ ಮಾತನಾಡಿ, ಗುಂಡಿಗೆ ಇರುವವರು ಗಡಿಯಲ್ಲಿ ಹೋರಾಡುತ್ತಾರೆ ಗುಂಡಿಗೆ ಇಲ್ಲದವರು ಗುಡಿಯಲ್ಲಿ ಪೂಜೆ ಮಾಡುತ್ತಾರೆ. ಸೈನಿಕರಾಗುವುದಕ್ಕೆ ಗುಂಡಿಗೆ ಇರಬೇಕು ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸೈನಿಕ ಪುಟ್ಟಸ್ವಾಮಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಪುಟ್ಟಸ್ವಾಮಿಯವರು ಗಿಡಕ್ಕೆ ನೀರೆರೆದು ಕಾರ್ಯಕ್ರಮವನ್ನು ಉದ್ಘಾಟಿಸಿದರು

ರೋಟರಿ ಸಂಸ್ಥೆಯ ಅಧ್ಯಕ್ಷರಾದ ವೈ.ಡಿ ಸೂರ್ಯನಾರಾಯಣ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ರೋಟರಿ ಸಂಸ್ಥೆಯ ಕಾರ್ಯದರ್ಶಿ ಯರಿಯೂರು ಜಯಣ್ಣಸ್ವಾಗತಿಸಿದರು, ನಿಕಟಪೂರ್ವ ಅಧ್ಯಕ್ಷ ಪಿ.ಮಾದೇಶ… ಉಪ್ಪಾರ್‌, ರೋಟರಿ ಸಂಸ್ಥೆಯ ಸದಸ್ಯರಾದ ಬಂಗಾರು, ಸುರೇಶ…, ಪರಮೇಶ…, ಡಾ.ಸಾಗರ್‌, ಸಿದ್ದರಾಜು, ನಟರಾಜು ವೈ ಬಿ. ಪುಟ್ಟರಾಜು , ರಂಗರಾಮು, ಕಾಲೇಜಿನ ಬೋಧಕವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

click me!