ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ರೈಲು ಸಿಕ್ಕಿಹಾಕಿಕೊಂಡಿದೆ ಎಂದು ವೈರಲ್ ಆಗಿರುವ ವಿಡಿಯೋ ಸತ್ಯಕ್ಕೆ ದೂರವಾದದ್ದು ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ರೈಲು ನಿಲ್ಲಿಸಲಾಗಿದ್ದು, ಸುಗಮ ಸಂಚಾರಕ್ಕಾಗಿ ರೈಲ್ವೆ ಗೇಟ್ ತೆರೆದು ವಾಹನಗಳನ್ನು ಸಂಚರಿಸಲು ಅವಕಾಶ ನೀಡಲಾಗಿತ್ತು.
ಬೆಂಗಳೂರು (ಸೆ.26): ದೇಶದಲ್ಲಿ ಅತ್ಯಂತ ಹೆಚ್ಚು ಟ್ರಾಫಿಕ್ ಜಾಮ್ ಉಳ್ಳ ನಗರವಾಗಿ ಸಿಲಿಕಾನ್ ಸಿಟಿ ಬೆಂಗಳೂರು ಬೆಳೆಯುತ್ತಿದೆ. ಅದಕ್ಕೆ ಪೂರಕವೆಂಬಂತೆ ಬೆಂಗಳೂರಿನಲ್ಲಿ ವಾಹನಗಳ ಟ್ರಾಫಿಕ್‌ನಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡ ರೈಲು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ರೈಲ್ವೆ ಇಲಾಖೆಯ ಅಧಿಕಾರಿಗಳು ಅದು ಹಾಗಲ್ಲ ಎನ್ನುತ್ತಲೇ ಅಸಲಿ ಸತ್ಯವನ್ನು ಹೇಳಿದ್ದಾರೆ.
ಈ ಕುರಿತು ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು, ಬೆಂಗಳೂರಿನಲ್ಲಿ ರೈಲು ಟ್ರ್ಯಾಕ್ ಹಾದು ಹೋಗಿರುವ ಮಾರ್ಗದಲ್ಲಿ ರೈಲನ್ನು ನಿಲ್ಲಿಸಲಾಗಿದ್ದು, ಅದರ ಮುಂದೆ ವಾಹನಗಳು ಗೇಟ್ ಅನ್ನು ದಾಟುತ್ತಿವೆ. ಇದನ್ನು ನೋಡಿದ ನೆಟ್ಟಿಗ ಸುಧೀರ್ ಚಕ್ರವರ್ತಿ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬೆಂಗಳೂರು ಟ್ರಾಫಿಕ್ ಜಾಮ್‌ನಲ್ಲಿ ರೈಲು ಸಿಕ್ಕಿಕೊಂಡಿದೆ. ವಾಹನ್ಳು ನಿಧಾನವಾಗಿ ಚಲಿಸುತ್ತಿದ್ದು, ಇದಕ್ಕಾಗಿ ರೈಲನ್ನು ನಿಲ್ಲಿಸಿದೆ ಎಂದು ವಿಡಿಯೋವನ್ನು ಹಂದಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
undefined
ಇದನ್ಮೂ ಓದಿ: ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣಾದ ರೈಲು, ಇದು ಅಚ್ಚರಿಯಾದರೂ ಸತ್ಯ!
ಅಸಲಿ ಸತ್ಯಾಂಶವೇನೆಂದರೆ, ಬೆಂಗಳೂರು ನಗರದಲ್ಲಿ ವಾಹನಗಳ ಸಂಚಾರ ದಟ್ಟಣೆಯಿಮದಾಗಿ ಈ ರೈಲನ್ನು ನಿಲ್ಲಿಸಲಾಗಿಲ್ಲ. ಈ ರೈಲ್ವೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ರೈಲನ್ನು ನಿಲ್ಲಿಸಲಾಗಿತ್ತು ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ರೈಲು ಕೆಲ ಹೊತ್ತಿನವರೆಗೂ ಮುಂದಕ್ಕೆ ಹೋಗಲಾಗದ ಕಾರಣ ಇದರ ಮುಂಬದಿಯೇ ಇದ್ದ ರೈಲ್ವೆ ಗೇಟ್ ಅನ್ನು ತೆರದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರೈಲು ಗೇಟಿಗೆ ಸ್ವಲ್ಪ ದೂರದಲ್ಲಿ ರೈಲನ್ನು ನಿಲ್ಲಿಸಲಾಗಿದ್ದು, ಅದರ ಮುಂದೆ ವಾಹನಗಳು ನಿಧಾನವಾಗಿ ದಾಟುತ್ತಿವೆ. ಹೀಗಾಗಿ, ರೈಲ್ವೆ ಗೇಟ್‌ಗಳನ್ನು ಅಗಲವಾಗಿ ತೆರೆದಿಟ್ಟು ರೈಲು ಹಳಿ ದಾಟಲು ಅನುಕೂಲ ಮಾಡಿಕೊಡಲಾಗಿದೆ. ಆದರೆ, ಇದನ್ನು ಟ್ರಾಫಿಕ್ ಉದ್ದೇಶಕ್ಕೆ ರೈಲಿ ನಿಲ್ಲಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ಮೂ ಓದಿ: ಮಹಾಲಕ್ಷ್ಮಿ ಕೊಲೆಗೆ ಭೀಕರ ಟ್ವಿಸ್ಟ್ ಬಿಚ್ಚಿಟ್ಟ ಡೆತ್ ನೋಟ್: ದೇಹ ಕತ್ತರಿಸಲು ಆಕ್ಸಲ್ ಬ್ಲೇಡ್ ಬಳಕೆ!
'ರೈಲು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿಲ್ಲ, ತಾಂತ್ರಿಕ ದೋಷದಿಂದ ಮುನ್ನೆಕೊಳ್ಳಾಲ ಗೇಟ್ ಬಳಿ ನಿಲ್ಲಿಸಲಾಗಿದೆ. ಲೊಕೊ ಪೈಲಟ್‌ಗೆ ರೈಲಿನ ಶಬ್ದ ಕೇಳಿ ರೇಕ್‌ನಲ್ಲಿ ಏನೋ ಅಡಚಣೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಿ ತಾಂತ್ರಿಕ ಮಾಹಿತಿ ನೀಡಿದ್ದಾರೆ. ತಾಂತ್ರಿಕ ತಂಡ ಬಂದು ಪರಿಶೀಲನೆ ಮಾಡುವವರೆಗೆ ಅಲ್ಲಿ ರೈಲನ್ನು ನಿಲ್ಲಿಸಲಾಯಿತು. ಜೊತೆಗೆ, ರೈಲ್ವೆ ಹಳಿಗೆ ಮುಚ್ಚಲಾಗಿದ್ದ ಗೇಟನ್ನು ತೆರೆದು ಸಂಚಾರ ದಟ್ಟಣೆಯನ್ನು ತಪ್ಪಿಸಲು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ವೀಡಿಯೋದಲ್ಲಿ ಕಂಡುಬಂದ ರೈಲು ಯಶವಂತಪುರ-ಕೊಚುವೇಲಿ ಗರೀಬ್ ರಥ ಎಕ್ಸ್‌ಪ್ರೆಸ್ ರೈಲು ಎಂದು ತಿಳಿಸಿದರು.