ಗ್ಯಾರಂಟಿ ಯೋಜನೆಗಳ ಸಮಾವೇಶದ ನೆಪದಲ್ಲಿ ಸಮಾವೇಶದ ಸಮಿತಿಯವರು ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದು, ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಿಂದ ಮಾಹಿತಿ ಪಡೆಯಲಾಗಿದೆ. ಈ ದಾಖಲೆಗಳಿಂದ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಈ ದಾಖಲೆಗಳನ್ನು ಲಗತ್ತಿಸಿ ದೂರು ನೀಡಿರುವುದಾಗಿ ಸ್ಪಷ್ಟಪಡಿಸಿದ ಆರ್‌ಟಿಐ ಕಾರ್ಯಕರ್ತ ಮಾಬುಸಾಬ್ ಯರಗುಪ್ಪಿ
ನವಲಗುಂದ(ಸೆ.26): ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೇರಿ ಐವರು ಅಧಿಕಾರಿಗಳ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಕುರಿತು ಆರ್‌ಟಿಐ ಕಾರ್ಯಕರ್ತ ಮಾಬುಸಾಬ್ ಯರಗುಪ್ಪಿ ದೂರನ್ನು ನೀಡಿದ್ದು, ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಬುಸಾಬ್, ಗ್ಯಾರಂಟಿ ಯೋಜನೆಗಳ ಸಮಾವೇಶದ ನೆಪದಲ್ಲಿ ಸಮಾವೇಶದ ಸಮಿತಿಯವರು ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದು, ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಿಂದ ಮಾಹಿತಿ ಪಡೆಯಲಾಗಿದೆ. ಈ ದಾಖಲೆಗಳಿಂದ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಈ ದಾಖಲೆಗಳನ್ನು ಲಗತ್ತಿಸಿ ದೂರು ನೀಡಿರುವುದಾಗಿ ಸ್ಪಷ್ಟಪಡಿಸಿದರು.
ಧಾರವಾಡ ಡಿಸಿ ದಿವ್ಯ ಪ್ರಭು ಅವರಿಗೆ ಕಂದಾಯ ಇಲಾಖೆಯಿಂದ ವರ್ಷದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ!
ಏನಿದು ಪ್ರಕರಣ?:
ಧಾರವಾಡ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಐದು ಸಮಾವೇಶಗಳನ್ನು ಸರ್ಕಾರದಿಂದ ನಡೆಸಲಾಗಿದೆ. ಫೆ. 3ರಂದು ಹುಬ್ಬಳ್ಳಿ ರೈಲ್ವೆ ಮೈದಾನ, ಫೆ. 5ರಂದು ಧಾರಾವಾಡ ಕರ್ನಾಟಕ ಕಾಲೇಜು ಮೈದಾನ, ಫೆ. 24ರಂದು ನವಲಗುಂದದ ಮಾಡೆಲ್ ಹೈಸ್ಕೂಲ್ ಮೈದಾನ, ಮಾ. 9ರಂದು ಕುಂದಗೋಳ ಹಾಗೂ ಮಾ.11ರಂದು ಕಲಘಟಗಿಯಲ್ಲಿ ಸಮಾವೇಶ ನಡೆಸಲಾಗಿದೆ. ಒಂದು ಕಾರ್ಯಕ್ರಮಕ್ಕೂ ಲಕ್ಷಾಂತರ ರೂ. ಖರ್ಚು ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿತ್ತು. ಫಲಾನುಭವಿಗಳ ಸಮಾವೇಶವನ್ನು ನಡೆಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ನಡೆದಸಮಾವೇಶಗಳ ಉಸ್ತುವಾರಿಯನ್ನು ಜಿಲ್ಲಾಧಿಕಾರಿ ವಹಿಸಿದ್ದು, ಲೆಕ್ಕಪತ್ರದಲ್ಲಿ ಅವ್ಯವಹಾರ ಆಗಿದ್ದು ಕಂಡು ಬಂದಿದೆ. ಹೀಗಾಗಿ ಲೋಕಾಯುಕ್ತದಲ್ಲಿ ದೂರು ನೀಡಲು ಮುಖ್ಯ ಕಾರಣ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಡಾ. ಈಶ್ವರ ಉಳ್ಳಾಗಡ್ಡಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ, ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ ವಿರುದ್ಧ ದೂರು ದಾಖಲಾಗಿದೆ.
ಯಾವ ಸಮಾವೇಶಕ್ಕೆ ಎಷ್ಟು ಖರ್ಚು ಪಟ್ಟಿ:
ನವಲಗುಂದದಲ್ಲಿನ ಸಮಾವೇಶಕ್ಕೆ ಉಪಹಾರ, ಬಸ್ ವ್ಯವಸ್ಥೆ ಹಾಗೂ ಸೌಂಡ್ ಸಿಸ್ಟಮ್ನಗಾಗಿ ಈ 87,93,004, ಧಾರವಾಡಲ್ಲಿ ನಡೆದ ಸಮಾವೇಶಕ್ಕೆ ಈ 1,37,50,133, ಹುಬ್ಬಳ್ಳಿಯಲ್ಲಿ ನಡೆದ ಸಮಾವೇ ಶದಲ್ಲಿ ಉಪಹಾರ, ಸೌಂಡ್ ಸಿಸ್ಟಮ್ ಹಾಗೂ ಬಸ್ ವ್ಯವಸ್ಥೆಗಾಗಿ ₹ 1,24,20,041, ಕಲಘಟಗಿಯಲ್ಲಿನ ಸಮಾವೇಶಕ್ಕೆ ೮ 57,26,400, ಕುಂದಗೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ೬ 54,26,400 ಖರ್ಚಾಗಿದೆ ಎಂದು ದಾಖಲೆಗಳು ತೋರಿಸುತ್ತವೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಧಾರವಾಡದ್ಯಂತ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ
ದಿನಾಂಕಗಳ ವ್ಯತ್ಯಾಸ:
ಬಿಲ್ ತೆಗೆಯಲು ಲಗತ್ತಿಸಿರುವ ದಾಖಲೆಗಳಲ್ಲಿ ಸಮಾವೇಶ ನಡೆದ ದಿನಾಂಕ, ಬಿಲ್‌ನಲ್ಲಿ ನಮೂದಿಸಿರುವ ದಿನಾಂಕಗಳಲ್ಲಿ ವ್ಯತ್ಯಾಸವಾಗಿದೆ. ಜತೆಗೆ ಹೋಟೆಲ್‌ನ ಜಿಎಸ್‌ಟಿ ನಂಬರ್ ಕೂಡ ಬಿಲ್‌ನಲ್ಲಿ ನಮೂದಾಗಿಲ್ಲ. ಸಾರ್ವ ಜನಿಕರ ದುಡ್ಡನ್ನು ಅವ್ಯವಹಾರ ಮಾಡಲಾಗಿದೆ. ಈ ಕುರಿತು ಲೋಕಾಯುಕ್ತದಿಂದ ತನಿಖೆ ನಡೆಸಬೇಕು. ಅಂದಾಗ ಮಾತ್ರ ಸತ್ಯಾಸತ್ಯತೆ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ದೂರು ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮಲ್ಲಿಕಾರ್ಜುನ ಸ್ವಾಮಿ ಮಠಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯಾರಾರ ಮೇಲೆ ದೂರು
ಜಿಲ್ಲಾಧಿಕಾರಿ ದಿವ್ಯ ಪ್ರಭು, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಡಾ. ಈಶ್ವರ ಉಳ್ಳಾಗಡ್ಡಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿ ರ್ವಾಹಕ ಅಭಿಯಂತರ ವಿಜಯಕುಮಾರ, ಮಹಾನಗರ ಪಾಲಿಕೆ ಮುಖ್ಯಲೆಕ್ಕಾಧಿಕಾರಿ ವಿಶ್ವನಾಥ ವಿರುದ್ಧ ದೂರು ದಾಖಲಾಗಿದೆ.