ಕೊರೋನಾ ವೈರಸ್ ಕುರಿತು ಜಗತ್ತಿನೆಲ್ಲೆಡೆ ಜನಜಾಗೃತಿ ಮೂಡಿಸುವ ಕಾರ್ಯಗಳನ್ನು ಸರ್ಕಾರಗಳು, ಸಂಘ ಸಂಸ್ಥೆಗಳು ಮಾಡುತ್ತಲೇ ಇವೆ. ಇದೀಗ ವಿಶ್ವವಿಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರು ಜಾದೂ ಮೂಲಕವೇ ಕೊರೋನಾ ಜಾಗೃತಿ ಮೂಡಿಸಿದ್ದಾರೆ.
ಮಂಗಳೂರು(ಮಾ.22): ಕೊರೋನಾ ವೈರಸ್ ಕುರಿತು ಜಗತ್ತಿನೆಲ್ಲೆಡೆ ಜನಜಾಗೃತಿ ಮೂಡಿಸುವ ಕಾರ್ಯಗಳನ್ನು ಸರ್ಕಾರಗಳು, ಸಂಘ ಸಂಸ್ಥೆಗಳು ಮಾಡುತ್ತಲೇ ಇವೆ. ಇದೀಗ ವಿಶ್ವವಿಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರು ಜಾದೂ ಮೂಲಕವೇ ಕೊರೋನಾ ಜಾಗೃತಿ ಮೂಡಿಸಿದ್ದಾರೆ. ಅವರ ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
undefined
‘‘ವೈರಸ್ ಇರುವವರು ಸೀನಿದಾಗ ಕೆಮ್ಮಿದಾಗ, ಅವರ ಸಂಪರ್ಕಕ್ಕೆ ಬಂದಾಗ ಸೋಂಕು ಹರಡುತ್ತದೆ. ಇದನ್ನು ತಡೆಗಟ್ಟಲು ದೊಡ್ಡ ದಾರಿ ಎಂದರೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು. ಇಂಥ ಮುನ್ನೆಚ್ಚರಿಕೆಗಳಲ್ಲಿ ಒಂದು ಹ್ಯಾಂಡ್ ಸ್ಯಾನಿಟೈಸರ್ ಬಳಕೆ. ಹ್ಯಾಂಡ್ ಸ್ಯಾನಿಟೈಸರ್‌ನಿಂದ ಅಥವಾ ಸಾಬೂನಿನಿಂದ ಕೈಗಳನ್ನು ಸರಿಯಾಗಿ ತೊಳೆದುಕೊಂಡರೆ ಕೊರೋನಾ ವೈರಸ್ ಮಾಯ’’ ಎನ್ನುವ ಜಾಗೃತಿ ಸಂದೇಶ ನೀಡುತ್ತಲೇ ಅವರು ತಮ್ಮ ಕೈಯಲ್ಲಿದ್ದ ‘ಕೊರೋನಾ’ ಬರಹವುಳ್ಳ ಟವೆಲ್‌ನ್ನು ಮಾಯ ಮಾಡುತ್ತಾರೆ. ಸ್ಯಾನಿಟೈಸರ್ ಮೂಲಕ ಟವಲ್‌ಗೆ ಸ್ಪ್ರೇ ಮಾಡಿದ್ದಷ್ಟೇ ಟವೆಲ್ ಮಾಯ!
‘ಮಹಾಮಾರಿ ಕೊರೋನಾದಿಂದ ಬಚಾವ್ ಆಗಲು ಇದೊಂದೆ ಪರಿಹಾರ’
ರೋಗ ಬಾರದಂತೆ ತಡೆಯುವುದೇ ಅತ್ಯಂತ ಉತ್ತಮ ದಾರಿ. ಹಾಗಾಗಿ ಮಾಸ್ಕ್ ಧರಿಸೋಣ, ರೋಗ ಪೀಡಿತರಿಂದ ದೂರ ಇರೋಣ. ಸೀನುವಾಗ ಕರವಸ್ತ್ರ ಅಡ್ಡ ಹಿಡಿಯೋಣ, ರೋಗ ಲಕ್ಷಣ ಕಂಡುಬಂದವರಿಗೆ ತಕ್ಷಣ ವೈದ್ಯರನ್ನು ಸಂಪರ್ಕಿಸೋಣ, ಸದ್ಯಕ್ಕೆ ಸಾಮಾಜಿಕ ಸಂಪರ್ಕ ಕಡಿತಗೊಳಿಸಿ ಮನೆಯಲ್ಲಿರೋಣ ಎನ್ನುವ ಸಂದೇಶವನ್ನೂ ಅವರು ನೀಡಿದ್ದಾರೆ.