ಬೆಂಗಳೂರು ನಗರವನ್ನು ಮಾ.31ರವರೆಗೂ ಸಂಪೂರ್ಣ ಬಂದ್ ಮಾಡಿ| ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಗೆ ಪತ್ರ ಬರೆದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್|ಈಗಾಗಲೇ ವಿದೇಶದಿಂದ ಸುಮಾರು 80 ಸಾವಿರ ಜನ ಕರ್ನಾಟಕಕ್ಕೆ ಬಂದಿದ್ದಾರೆ| ಇವರಿಂದ ಕೊರೋನಾ ಸೋಂಕು ಮತ್ತಷ್ಟು ಜನಕ್ಕೆ ಹರಡುವ ಸಾಧ್ಯತೆ|
ಬೆಂಗಳೂರು[ಮಾ. 22]: ಕೊರೋನಾ ಸೋಂಕು ಹರಡುವುದನ್ನು ತಡೆಯಲು ಬೆಂಗಳೂರು ನಗರವನ್ನು ಮಾ.31ರವರೆಗೂ ಸಂಪೂರ್ಣ ಬಂದ್ ಮಾಡುವಂತೆ ಕೋರಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಮೇಯರ್ ಗೌತಮ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಕೊರೋನಾ ಕಾಟ: ಕಬ್ಬನ್ ಪಾರ್ಕ್‌ಗೆ ಪ್ರವೇಶ ನಿರ್ಬಂಧ
ವಿಶ್ವದ ಬಹುತೇಕ ದೇಶಗಳಲ್ಲಿ ಹರಡುತ್ತಿರುವ ಕೊರೋನಾ ಸೋಂಕು ನಗರದ ಜನರಲ್ಲಿ ಭೀತಿಯನ್ನುಂಟು ಮಾಡುತ್ತಿದೆ. ಈಗಾಗಲೇ ವಿದೇಶದಿಂದ ಸುಮಾರು 80 ಸಾವಿರ ಜನ ಕರ್ನಾಟಕಕ್ಕೆ ಬಂದಿದ್ದಾರೆ. ಇವರಿಂದ ಕೊರೋನಾ ಸೋಂಕು ಮತ್ತಷ್ಟು ಜನಕ್ಕೆ ಹರಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮೂಹಿಕವಾಗಿ ಸೇರುವುದನ್ನು ತಡೆಯಬೇಕು.
ಕೊರೋನಾ ಕಾಟ: ಧಾರವಾಡದ ವ್ಯೆಕ್ತಿಗೆ ಕೋವಿಡ್ 19 ಸೋಂಕು ದೃಢ
ಈಗಾಗಲೇ ಮಾಲ್‌ಗಳು, ಚಿತ್ರಮಂದಿರಗಳು, ಮಾರುಕಟ್ಟೆಗಳು ಬಂದ್ ಘೋಷಣೆ ಮಾಡಲಾಗಿದೆ. ಜೊತೆಗೆ, ಬೆಂಗಳೂರು ನಗರದಲ್ಲಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಬೇಕು. ಜೊತೆಗೆ, ಮಾ.31ರ ವರೆಗೂ ಸಂಪೂರ್ಣ ಜನ ಸಂಚಾರ ಇಲ್ಲದಂತೆ ನಿರ್ಬಂಧ ವಿಧಿಸಬೇಕು. ಅಲ್ಲದೆ, ಸೋಂಕು ತಡೆಯಲು ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.