ಬೆಂಗಳೂರು: ವಾಯುಪಡೆ ವಿಮಾನ ಪತನದ ಬೆನ್ನಲ್ಲೇ ಸೇನಾ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ

Published : Feb 05, 2019, 05:30 PM ISTUpdated : Feb 05, 2019, 05:31 PM IST
ಬೆಂಗಳೂರು: ವಾಯುಪಡೆ ವಿಮಾನ ಪತನದ ಬೆನ್ನಲ್ಲೇ ಸೇನಾ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ

ಸಾರಾಂಶ

ಭಾರತೀಯ ಸೇನಾಗೆ ಸೇರಿದ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಬೆಂಗಳೂರು ಗ್ರಾಮಾಂತ ಜಿಲ್ಲೆಯ  ತಟ್ಟಗುಪ್ಪೆ ಬಳಿ ಲ್ಯಾಂಡಿಗ್ ಆಗಿದೆ.

ಬೆಂಗಳೂರು, [ಫೆ.05]: ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇನಾ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಟ್ಟಗುಪ್ಪೆ ಬಳಿ ನಡೆದಿದೆ. 

ಬೆಂಗಳೂರು -ಕನಕಪುರ ರಸ್ತೆಯ ಕಗ್ಗಲೀಪುರ ಸಮೀಪದ ತಟ್ಟಗುಪ್ಪೆ ಬಳಿಯ ಕರಡಿಮನೆ ರಸ್ತೆ ಬಳಿ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. 

ಪತನಗೊಂಡ HAL ವಿಮಾನ: ಪೈಲಟ್ ಸಾವು

ಎಚ್ ಎ ಎಲ್ ನಿಂದ ಹೊರಟಿದ್ದ ಇಂಡಿಯನ್ ಆರ್ಮಿಗೆ ಸೇರಿದ ತರಬೇತಿ ಸೇನಾ ವಿಮಾನವಾಗಿದೆ. ಹೆಲಿಕ್ಯಾಪ್ಟರ್ ನಲ್ಲಿ ಫೈಲೆಟ್ ರಮೇಶ್  ಹಾಗೂ ಮತ್ತೋರ್ವರು ತರಬೇತಿ ಪಡೆಯುತಿದ್ದರು.  ಈ ವೇಳೆ ಇಂಜಿನ್ ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು ಯಾವುದೇ ಅವಘಡ ಸಂಭವಿಸಿಲ್ಲ. 

ಸ್ಥಳಕ್ಕೆ ಹೆಲಿಕ್ಯಾಪ್ಟರ್ ನ ಇಂಜಿನ್ ರಿಪೇರಿ ಮಾಡಲು ಮತ್ತೊಂದು ಹೆಲಿಕ್ಯಾಪ್ಟರ್ ಮೂಲಕ ಎಚ್ ಎ ಎಲ್ ನಿಂದ ಈಗಾಗಲೇ ತಾಂತ್ರಿಕ ತಜ್ಞರು ಆಗಮಿಸಿದ್ದು ಇಂಜಿನ್ ಸರಿಪಡಿಸುವ ಕಾರ್ಯ ನಡೆಸ್ತಿದ್ದಾರೆ. ಘಟನಾ ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿದ್ದಾರೆ.

ಮೊನ್ನೆ ಫೆಬ್ರವರಿ 1ರಂದು HALಗೆ ಸೇರಿದ್ದ ವಾಯುಪಡೆ ವಿಮಾನ ಪತನಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

PREV
click me!

Recommended Stories

ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!
ಬೆಂಗಳೂರು ಜನತೆಗೆ ಶೀಘ್ರವೇ ದೊಡ್ಡ ಮುಕ್ತಿ, ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ತಿಂಗಳೊಳಗೆ ಸಂಚಾರ ಮುಕ್ತ!