'ನಂಗೆ ಡಿಕೆಶಿ ಸರ್ಟಿಫಿಕೇಟ್ ಬೇಕಾಗಿಲ್ಲ, ಅವ್ರೇನು ಎಂದು ದೇಶವೇ ನೋಡ್ತಿದೆ'..!

By Web DeskFirst Published Nov 28, 2019, 2:57 PM IST
Highlights

ಡಿ. ಕೆ. ಶಿವಕುಮಾರ್ ಏನು ಎಂಬುದನ್ನು ದೇಶವೇ ನೋಡುತ್ತಿದೆ. ನನಗೆ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಹೇಳಿದ್ದಾರೆ. ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿಗೆ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ.

"

ಚಿಕ್ಕಬಳ್ಳಾಪುರ(ನ.28): ಡಿ. ಕೆ. ಶಿವಕುಮಾರ್ ಏನು ಎಂಬುದನ್ನು ದೇಶವೇ ನೋಡುತ್ತಿದೆ. ನನಗೆ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಹೇಳಿದ್ದಾರೆ. ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿಗೆ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಡಿ. ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಡಿಕೆ ಶಿವಕುಮಾರ್ ಏನು ಅಂತಾ ಇಡೀ ದೇಶವೇ ನೋಡುತ್ತಿದೆ. ಡಿಕೆಶಿ ಬಗ್ಗೆ ದೇಶದ ಸಂಸ್ಥೆಗಳಿಗೆ, ವ್ಯವಸ್ಥೆಗೆ ಗೊತ್ತಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಕಣ್ಣೀರು ನಮ್ಮ ಪೇಟೆಂಟ್, ಎಲ್ಲದಕ್ಕೂ ಹಲ್ಲು ಬಿಡೋದಲ್ಲ: ಎಚ್‌ಡಿಕೆ ಟಾಂಗ್

ಚಿಕ್ಕಬಳ್ಳಾಪುರ ತಾಲೂಕು ಮಂಚನಬಲೆ ಗ್ರಾಮದಲ್ಲಿ ಸುಧಾಕರ್ ವಾಗ್ದಾಳಿ ನಡೆಸಿದ್ದು, ನಾನು ಏನು ಅಂತಾ  ಜನರೇ ಸರ್ಟಿಫಿಕೇಟ್ ಕೊಡ್ತಾರೆ. ಡಿಕೆ ಶಿವಕುಮಾರ್ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ. ಇಲ್ಲಿನ ಉದ್ಯಮಿಗಳಿಗೆ ನಾನು ಏನು ಅಂತಾ ಗೊತ್ತಿದೆ. ಕನಕಪುರದಲ್ಲಿ ಡಿಕೆಶಿ ಏನು ಅಂತಾ ಅಲ್ಲಿನ ಉದ್ಯಮಿಗಳಿಗೆ ಗೊತ್ತಿದೆ ಎಂದಿದ್ದಾರೆ.

ಸುಧಾಕರ್ ದೊಡ್ಡ ಫ್ರಾಡ್, ಕ್ರಷರ್ ಮಾಲೀಕರಿಂದ ಹಫ್ತಾ ವಸೂಲಿ ಮಾಡ್ತಾರೆ ಎಂಬ ಡಿಕೆಶಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಬಾಯಲ್ಲಿ ಬರುವ ಸಂಸ್ಕೃತ ಅವರ ಹಿನ್ನೆಲೆಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.

ಸುಳ್ಳು ಹೇಳಿ ಕುತ್ತಿಗೆ ಹಿಸುಕುತ್ತೀರಾ..? ಎಚ್‌ಡಿಕೆಗೆ ನಾರಾಯಣ ಗೌಡ ಟಾಂಗ್

ಗೆದ್ದ ಮೊದಲ ಸಲವೇ ಸುಧಾಕರ್ ಮಂತ್ರಿ ಸ್ಥಾನ ಕೇಳಿದ್ರು ಎಂಬ ಡಿಕೆಶಿ ಆರೋಪ ವಿಚಾರ ಸುಧಾಕರ್ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಇವ್ರಿಗೇನೂ ಆಸೆ ಇಲ್ವಾ ? ರಾಜಕೀಯದಲ್ಲಿ ಏನಾಗ್ಬೇಕು ಅಂತ ಡಿಕೆಶಿಗೆ ಕಲ್ಪನೆ ಇಲ್ವಾ? ರಾಜಕೀಯಕ್ಕೆ ಬರೋದು ಒಂದು ಅವಕಾಶ ತಗೊಂಡು ಜನಪರ ಕಾರ್ಯ‌ ಮಾಡಲು. ಮಂತ್ರಿ ಸ್ಥಾನ ಕೇಳೋದು ತಪ್ಪಲ್ಲ. ಡಿಕೆಶಿ 28 ಕ್ಕೇ ಮಂತ್ರಿಯಾದೆ ಎನ್ನುತ್ತಾರೆ. ನಾನು ಶಾಸಕನಾಗಿದ್ದೇ 38 ವರ್ಷಕ್ಕೆ. ಅವರ್ಯಾಕೆ ಸಚಿವರಾದ್ರು ಮತ್ತೆ ? ಎಂದು ಪ್ರಶ್ನಿಸಿದ್ದಾರೆ.

ತಮ್ಮಣ್ಣಗೆ ಕಾಮಾಟಿಪುರ ಗೊತ್ತಿದೆ ಅಂದ್ರೆ ಅವರಿಗೆ ಅನುಭವವಿರಬೇಕು: ನಾರಾಯಣ ಗೌಡ

ಇಷ್ಟು ಸಣ್ಣ ಮಟ್ಟದಲ್ಲಿ ಮಾತಾಡೋದು ಡಿಕೆಶಿ ವ್ಯಕ್ತಿತ್ವಕ್ಕೆ ಸರಿ ಹೊಂದಲ್ಲ.  ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ನವ್ರು ಮತ ಹಾಕಿ ಎಂಬ ಡಿಕೆಶಿ ಕರೆ ವಿಚಾರವಾಗಿ ಪ್ರತಿಕ್ರಿಯಿಸಿ, ಉಪಚುನಾವಣೆಯಲ್ಲಿ ಎರಡೂ ಪಕ್ಷಗಳೂ ಒಪ್ಪಂದ ಮಾಡಿಕೊಂಡಿವೆ. ಇವರಿಬ್ರೂ ಒಂದು ಮುಖ ಎರಡು ನಾಣ್ಯ ಅಷ್ಟೇ. ಚುನಾವಣೆ ಹತ್ತಿರ ಬಂದಂತೆ ಇಬ್ಬರಲ್ಲಿ ಒಬ್ಬ ಅಭ್ಯರ್ಥಿ ವಾಪಸ್ ತಗೋತಾರೆ ನೋಡುತ್ತಿರಿ. ನಾನು ಕನಕಪುರ ಮೆಡಿಕಲ್ ಕಾಲೇಜು ಕಿತ್ಕೊಂಡಿಲ್ಲ. ನಮಗೆ ಮಂಜೂರಾದ ಕಾಲೇಜಿಗೆ ಕುಮಾರಸ್ವಾಮಿ ಅನುದಾನ ಕೊಡ್ಲಿಲ್ಲ. ಯಡಿಯೂರಪ್ಪ ಗೆ ಕೇಳ್ಕೊಂಡೆ ಅನುದಾನ ಕೊಟ್ಟರು. ನಾನು ಯಾರ ತಂಟೆಗೂ ಹೋಗಿಲ್ಲ ಎಂದು ಉತ್ತರಿಸಿದ್ದಾರೆ.

'ಸರ್ಕಾರದ ಮನೆ ತೆಗೆಯದ್ದಕ್ಕೆ ರೂಂ ಮಾಡಿದ್ದೆ, ನಿಮ್ಮ ಥರ ರಾಸಲೀಲೆಗಲ್ಲ'..!

click me!