ದೀಪಾವಳಿ ಮುಗಿಯುತ್ತಿದ್ದಂತೆ ಬೆಂಗ್ಳೂರಲ್ಲಿ ಕೊರೋನಾ ಹೆಚ್ಚಳ..!

Kannadaprabha News   | Asianet News
Published : Nov 10, 2021, 09:32 AM ISTUpdated : Nov 10, 2021, 10:40 AM IST
ದೀಪಾವಳಿ ಮುಗಿಯುತ್ತಿದ್ದಂತೆ ಬೆಂಗ್ಳೂರಲ್ಲಿ ಕೊರೋನಾ ಹೆಚ್ಚಳ..!

ಸಾರಾಂಶ

*  ಮೈಕ್ರೋ ಕಂಟೈನ್ಮೆಂಟ್‌ ಸಂಖ್ಯೆ 55ಕ್ಕೆ ಇಳಿಕೆ  *  ದೈನಂದಿನ ಕೇಸು 9 ತಿಂಗಳ ಕನಿಷ್ಠ *  ಮತ್ತೊಮ್ಮೆ ಕೊರೋನಾ ಸೋಂಕು ಸ್ಫೋಟಗೊಳ್ಳುವ ಆತಂಕ   

ಬೆಂಗಳೂರು(ನ.10):  ದೀಪಾವಳಿ ಹಬ್ಬದ ಮುಗಿದ ಬೆನ್ನಲ್ಲೇ ನಗರದಲ್ಲಿ ಕೋವಿಡ್‌(Covid19) ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಮಂಗಳವಾರ 187 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ(Death).

"

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,53,177ಕ್ಕೆ ಏರಿಕೆಯಾಗಿದೆ. ಇದೇ ವೇಳೆ 59 ಪುರುಷರು, 47 ಮಹಿಳೆಯರು ಸೇರಿದಂತೆ 106 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,30,380ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 16,298ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸದ್ಯ 6498 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.

Covid19 Vaccine| ಮುಂದಿನ ವಾರದಿಂದ ಮಕ್ಕಳಿಗೂ ಕೋವಿಡ್‌ ಲಸಿಕೆ?

ಮೈಕ್ರೋ ಕಂಟೈನ್ಮೆಂಟ್‌ ಸಂಖ್ಯೆ ಇಳಿಕೆ:

ಪಾಲಿಕೆಯ ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌(Micro Containment) ಸಂಖ್ಯೆ 55ಕ್ಕೆ ಇಳಿಕೆಯಾಗಿದೆ. ಬೊಮ್ಮನಹಳ್ಳಿ 23, ಯಲಹಂಕ 9, ಪಶ್ಚಿಮ 8, ದಕ್ಷಿಣ ವಲಯ 7, ಮಹದೇವಪುರ 5, ಪೂರ್ವ 4 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ರಾಜರಾಜೇಶ್ವರಿ ನಗರ, ದಾಸರಹಳ್ಳಿ ವಲಯಗಳು ಮೈಕ್ರೋ ಕಂಟೈನ್ಮೆಂಟ್‌ ಮುಕ್ತವಾಗಿದೆ ಎಂದು ಬಿಬಿಎಂಪಿ(BBMP) ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

10126 ಕೇಸು, 332 ಸಾವು: ದೈನಂದಿನ ಕೇಸು 9 ತಿಂಗಳ ಕನಿಷ್ಠ

ನವದೆಹಲಿ: ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 10,126 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಇದು 266 ದಿನಗಳ ಕನಿಷ್ಠವಾಗಿದೆ. ಇದೇ ವೇಳೆಯಲ್ಲಿ 332 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 4.61 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಸಕ್ರಿಯ ಪ್ರಕರಣಗಳು 1.40 ಲಕ್ಷಕ್ಕೆ ಇಳಿದಿದ್ದು, ಇದು 263 ದಿನಗಳ ಕನಿಷ್ಠವಾಗಿದೆ. ಕಳೆದ 1 ತಿಂಗಳಿನಿಂದ ದೈನಂದಿನ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2,188 ಸೋಂಕಿತರು ಗುಣಮುಖರಾಗಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ.1.25ರಷ್ಟಿದೆ. ಈವರೆಗೆ ದೇಶದಲ್ಲಿ 109.08 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

'ಕೈ ಮುಗಿಯುತ್ತೇನೆ, ಮುಸ್ಲಿಮರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ'

ದೀಪಾವಳಿ ಬಳಿಕ ಸೋಂಕು ಸ್ಫೋಟ : ತಜ್ಞರ ಎಚ್ಚರಿಕೆ

ಭಾರತದಲ್ಲಿ (India) ಕಳೆದ ಕೆಲ ದಿನಗಳಿಂದ ಕೋವಿಡ್‌ (Covid) ಪ್ರಕರಣಗಳು ನಿಯಂತ್ರಣದಲ್ಲಿದ್ದರೂ ದೀಪಾವಳಿ ಸೇರಿ ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸೋಂಕು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ.

ಈ ನಡುವೆ ಹಬ್ಬಗಳ (Festival) ಕಾರಣದಿಂದ ಬಹುತೇಕ ರಾಜ್ಯಗಳ ಜನರು ಮಾಸ್ಕ್‌ (Mask), ಸಾಮಾಜಿಕ ಅಂತರ (Social Distance) ಸೇರಿ ಎಲ್ಲಾ ಕೋವಿಡ್‌ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮಾರುಕಟ್ಟೆಯಲ್ಲಿ ಕಿಕ್ಕಿರಿದು ಸೇರುತ್ತಿದ್ದಾರೆ. ಹೀಗಾಗಿ ದೀಪಾವಳಿ (Deepavali) ನಂತರ ಕೋವಿಡ್‌ (Covid) ಸ್ಫೋಟಗೊಳ್ಳಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು.  ಒಟ್ಟಾರೆ ದೇಶದಲ್ಲಿ ಕೊರೋನಾ ಕೇಸ್‌ಗಳಲ್ಲಿ ಕಡಿಮೆಯಾದರೆ ಬೆಂಗಳೂರಿನಲ್ಲಿ(Bengaluru) ಮಾತ್ರ ಪಾಸಿಟಿವ್‌ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. 

ದಾಖಲೆ ಜನ ಸಂಚಾರ

ಕೋವಿಡ್‌ (Covid) ಮೊದಲ ಹಾಗೂ ಎರಡನೇ ಅಲೆಯ ಹೊಡೆತದಿಂದ ಮಂಕಾಗಿದ್ದ ಪ್ರವಾಸೋದ್ಯಮ (Tourism), ರಸ್ತೆ (Road) ಹಾಗೂ ವಿಮಾನ ಸಂಚಾರ (Flught) ಈಗ ಸಹಜ ಸ್ಥಿತಿಗೆ ಮರಳಿದೆ. ಮೂರೂ ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲೆ ಪ್ರಮಾಣದ ಚಟುವಟಿಕೆ ಹಾಗೂ ವಹಿವಾಟು ನಡೆದಿರುವುದೇ ಬಹುತೇಕ ಎಲ್ಲ ವಲಯಗಳ ಚೇತರಿಕೆ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.
 

PREV
Read more Articles on
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ