ಹಾಸನ (ನ.10): ಹಾಸನ (hassan) ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ಅವರು ಮಾಡಿದಷ್ಟುಅನ್ಯಾಯವನ್ನು ಇನ್ಯಾರು ಮಾಡಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ (HD revanna) ಗಂಭೀರ ಆರೋಪ ಮಾಡಿದರು.
ಎಚ್.ಡಿ.ಕುಮಾರಸ್ವಾಮಿ (HD kumaraswamy) ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಸಾಕಷ್ಟು ನೀರಾವರಿ ಯೋಜನೆಗಳು ಹಾಗೂ ಅನುದಾನಗಳನ್ನು ಯಡಿಯೂರಪ್ಪ ಕಾಲದಲ್ಲಿ ತಡೆಹಿಡಿಯಲಾಯಿತು.
ಇದರಿಂದ ಜಿಲ್ಲೆಗೆ ಸಾಕಷ್ಟುಅನ್ಯಾಯವಾಗಿದೆ ಎಂದು ದೂರಿದರು. ಶಿವಮೊಗ್ಗ (Shivamogga) ರೀತಿಯಲ್ಲೇ ಹಾಸನ (hassan) ವಿಮಾನ ನಿಲ್ದಾಣ ಮಾಡಬೇಕು. ಜಟಕಾಬಂಡಿ ಓಡಾಡುವ ರೀತಿ ಮಾಡಬಾರದು ಎಂದು ಆಗ್ರಹಿಸಿದರು.
ಕಾಂಗ್ರೆಸ್ ತಪ್ಪಿನಿಂದ ಬಿಜೆಪಿಗೆ ಅಧಿಕಾರ : ಕಾಂಗ್ರೆಸ್‌ನ ತಪ್ಪಿನಿಂದಾಗಿ ರಾಜ್ಯದಲ್ಲಿ ಬಿಜೆಪಿ(BJP) ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೋಮುವಾದಿ ಪಕ್ಷವನ್ನು ದೂರ ಇಡಲು ಜಾತ್ಯತೀತ ಪಕ್ಷ ಒಗ್ಗೂಡುವುದು ಅಗತ್ಯ ಎಂಬುದು ನಮ್ಮ ಆಶಯ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ(HD Revanna) ಹೇಳಿದ್ದರು.
ಕಾಂಗ್ರೆಸ್(Congress) ಇಬ್ಬಗೆ ನೀತಿಯಿಂದ ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ ಎಂದು ತಿಳಿಸಿದ್ದಾರೆ. ಚುನಾವಣೆ(Election) ಬಂದಾಗ ಮಾತ್ರ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ(Minorities) ಬಗ್ಗೆ ಹೆಚ್ಚು ಪ್ರೀತಿ ಪ್ರಾರಂಭವಾಗುತ್ತದೆ. ರಾಜ್ಯದಲ್ಲಿ(Karnataka) ಈಗ ಇರುವುದು ಕಾಂಗ್ರೆಸ್ ಪಕ್ಷದಲ್ಲಿರುವುದು ಡುಪ್ಲಿಕೇಟ್ ಕಾಂಗ್ರೆಸ್ಸಿಗರು, ಅವರಿಂದಲೇ ಕಾಂಗ್ರೆಸ್‌ಗೆ ಈ ಸ್ಥಿತಿ ಬಂದಿದೆ ಎಂದರು.
2023ಕ್ಕೆ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ :
ಕಾಂಗ್ರೆಸ್ಸಿಗೆ (Congress) ಯೋಗ್ಯ ಅಭ್ಯರ್ಥಿ ಸಿಗದೆ ಜೆಡಿಎಸ್ (JDS) ಅಭ್ಯರ್ಥಿಯನ್ನು ತೆಗೆದುಕೊಂಡು ಹೋಗಿದೆ. ಅದು ನಂಬಿಕೆ ದ್ರೋಹಿಗಳ ಪಕ್ಷ ಎಂದು ಶಾಸಕ ಎಚ್.ಡಿ.ರೇವಣ್ಣ (Revanna) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ. ಸೂಟ್‌ಕೇಸ್ ಸಂಸ್ಕೃತಿ ಜೆಡಿಎಸ್‌ಗೆ ಬೇಕಿಲ್ಲ. ಅದು ಕಾಂಗ್ರೆಸ್ ಸಂಸ್ಕೃತಿ ಎಂದು ತಿಳಿಸಿದರು.
ದೇವೇಗೌಡ (HD Devegowda), ಕುಮಾರಸ್ವಾಮಿ (HD Kumaraswamy), ಜೆಡಿಎಸ್‌ಗೆ ಬೈಯದೇ ಇದ್ದರೆ ಕಾಂಗ್ರೆಸ್ಸಿಗರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಕಾಂಗ್ರೆಸ್ ನಂಬಿಕೆದ್ರೋಹಿಗಳ ಪಕ್ಷ ಎಂದು ಜರಿದರು. 2023ರಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದ್ದು, ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಕಸ ಹೊಡೆಯುತ್ತಿದ್ದರು ಎಂಬ ಜಮೀರ್ (zameer) ಹೇಳಿಕೆ ಪ್ರಸ್ತಾಪಿಸಿದ ಅವರು, ನಾವು ರೈತರು, ಜಮೀನಿನಲ್ಲಿ ಕಸ ಹೊಡಿತೀವಿ. ಎಲ್ಲ ಕೆಲಸವನ್ನು ಮಾಡುತ್ತೇವೆ. ಜಮೀರ್ ಹಾಗೇ ನಾವಲ್ಲ ಎಂದರು.
ರೇವಣ್ನ ಸಿಡಿಮಿಡಿ : ಕಾಂಗ್ರೆಸ್‌ಗೆ (congress) ತಾಕತ್ತಿದ್ದರೆ ಮುಂದಿನ ಚುನಾವಣೆ ನಂತರ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಘೋಷಣೆ ಮಾಡಲಿ ನೋಡೋಣ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಸವಾಲು ಹಾಕಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಪರಿಸ್ಥಿತಿ ಎದುರಿಸುತ್ತಿದೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎನ್ನುತ್ತಿದ್ದ ಕಾಂಗ್ರೆಸ್ ನಾಯಕರೇ ಈಗ ಬಿಜೆಪಿ (BJP) ಶಾಸಕರನ್ನು ಪಕ್ಷಕ್ಕೆ ಸೆಳೆಯುತ್ತಿದ್ದಾರೆ.
ರೇವಣ್ಣ ಸಿಡಿಮಿಡಿ
ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸಾಬೀತಾಗುತ್ತದೆ ಎಂದರು. ಇದೇ ವೇಳೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ(Assembly Election) ಹಾಸನ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡುತ್ತಾರೆಂಬ ಪತ್ರಕರ್ತರ ಪ್ರಶ್ನೆಗೆ ಹಾಸನಾಂಬೆ, ಲಕ್ಷ್ಮೀನರಸಿಂಹ ಸೇರಿ ನಮ್ಮ ಮನೆ ದೇವರು ಯಾರಿಗೆ ಆಶೀರ್ವಾದ ನೀಡುತ್ತಾರೋ ಅವರಿಗೆ ಟಿಕೆಟ್ ಸಿಗಲಿದೆ ಎಂದು ರೇವಣ್ಣ ಒಗಟಿನ ಉತ್ತರ ನೀಡಿದರು.
ಜೆಡಿಎಸ್ ನಾಯಕರು ಒಬ್ಬರಿಂದೊಬ್ಬರಂತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಇದರಿಂದ ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ ಕೆರಳಿದ್ದು, ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ನಾಯಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಯತ್ನವಾಗ್ತಿದೆ. ಕಾಂಗ್ರೆಸ್‌ಗೆ ಈ ಸ್ಥಿತಿ ಬಂತು ಎಂದು ನನಗೆ ವ್ಯಥೆ ಆಗುತ್ತೆ ಎಂದರು