Vijayapura: ಕುಡಿದು ವಾಹನ ಸಮೇತ ರಸ್ತೆಗಿಳಿದ್ರೆ ಹುಷಾರ್: ಸ್ವತಃ ಎಸ್ಪಿಯಿಂದಲೇ ರಿಯಾಲಿಟಿ ಚೆಕ್!

By Govindaraj S  |  First Published Oct 20, 2023, 2:57 PM IST

ಗುಮ್ಮಟನಗರಿಯಲ್ಲಿ ರಾತ್ರಿ ವೇಳೆ ಕುಡಿದು ದ್ವೀಚಕ್ರ‌ ಸೇರಿ ಕಾರ್‌ಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿತ್ತು. ಕುಡಿದು ವಾಹನ ಚಾಲನೆಯಿಂದ ನಗರ ಪ್ರದೇಶದಲ್ಲಿ ಅಪಘಾತಗಳ ಸಂಖ್ಯೆಗಳು ಕೂಡ ಹೆಚ್ಚಾಗಿದ್ವು.


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಅ.20): ಗುಮ್ಮಟನಗರಿಯಲ್ಲಿ ರಾತ್ರಿ ವೇಳೆ ಕುಡಿದು ದ್ವೀಚಕ್ರ‌ ಸೇರಿ ಕಾರ್‌ಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿತ್ತು. ಕುಡಿದು ವಾಹನ ಚಾಲನೆಯಿಂದ ನಗರ ಪ್ರದೇಶದಲ್ಲಿ ಅಪಘಾತಗಳ ಸಂಖ್ಯೆಗಳು ಕೂಡ ಹೆಚ್ಚಾಗಿದ್ವು. ಇದನ್ನ ಅರಿತ ವಿಜಯಪುರ ಎಸ್ಪಿ ಹೃಷಿಕೇಶ್ ಸೋನಾವಣೆ ತಾವೇ ಸ್ವತಃ ತಪಾಸಣೆಗೆ ಇಳಿದಿದ್ದಾರೆ. ರಾತ್ರಿ ಬೈಕ್, ಕಾರ್‌ಗಳಲ್ಲಿ ಓಡಾಡುವವರ ಹಿಡಿದು ಪರೀಕ್ಷೆಗೊಳಪಡೆಸಿದ್ದಾರೆ. ಎರಡೇ ದಿನದಲ್ಲಿ 70ಕ್ಕು ಅಧಿಕ ಡ್ರಿಂಕ್ ಆಂಡ್ ಡ್ರೈವ್ ಪ್ರಕರಣ ದಾಖಲಾಗಿವೆ.

Latest Videos

undefined

ಕುಡಿದು ವಾಹನ ಚಾಲನೆ ಮಾಡಿದ್ರೆ ಹುಷಾರ್: ವಿಜಯಪುರದಲ್ಲಿ ರಾತ್ರಿ ಹೊತ್ತು ಕುಡಿದು ವಾಹನ ಚಾಲನೆ  ವಾಹನ ಸವಾರರೇ ಇನ್ಮುಂದೇ ಹುಷಾರ್ ಆಗಿರಬೇಕಿದೆ. ನಶೆಯಲ್ಲಿ ವಾಹನ ಚಾಲನೆ ಮಾಡ್ತಿದ್ರೆ ದಂಡ ಬೀಳೋದು ಪಕ್ಕಾ.. ಈ ನಡುವೆ ಕುಡುಕ ವಾಹನ ಚಾಲಕರ ಪತ್ತೆ ಸ್ವತಃ ಎಸ್ಪಿಯೇ ರಸ್ತೆಗಿಳಿಸಿದ್ದಾರೆ‌. ಹೌದು ಕುಡಿದ ಮತ್ತಿನಲ್ಲಿ‌ ವಾಹನ ಚಾಲನೆಯಿಂದ ವಿಶೇಷವಾಗಿ ರಾತ್ರಿ ಹೊತ್ತು ಹೆಚ್ಚು ಅಪಘಾತ ಪ್ರಕರಣಗಳು ಸಂಭವಿಸುತ್ತಿರುವ ಬೆನ್ನೆಲ್ಲೇ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಎಸ್ಪಿ ಹೃಷಿಕೇಶ್ ಸೊನಾವನೆ ಮಾರ್ಗದರ್ಶನದಲ್ಲಿ ರಾತ್ರಿ ಗಸ್ತು‌ ಚುರುಕುಗೊಳಿಸಿದ್ದು ಕುಡಿದು ವಾಹನ ಸಮೇತ ರಸ್ತೆಗೆ ಇಳಿಯುವವರಿಗೆ ಭರ್ಜರಿ ದಂಡ ಬಿದ್ದಿದೆ. 

ಕಾಂಗ್ರೆಸ್‌ ಸರ್ಕಾರ ತನ್ನಿಂದ ತಾನೇ ಬಿದ್ದರೂ ಆಶ್ಚರ್ಯವಿಲ್ಲ: ಮಾಜಿ ಸಚಿವ ಬಿ.ಸಿ.ಪಾಟೀಲ್‌

ಎರಡೇ ದಿನದಲ್ಲಿ 70ಕ್ಕು ಅಧಿಕ ಡ್ರಿಂಕ್ ಡ್ರೈವ್ ಕೇಸ್ ಪತ್ತೆ: ರಾತ್ರಿ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದೆ, ಇದ್ರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಎಸ್ಪಿ ಹೃಷಿಕೇಶ್ ಸೊನಾವನೆ, ನಗರದಲ್ಲಿ ತಾವೇ ಸ್ವತಃ ಡ್ರಿಂಕ್ ಆಂಡ್ ಕೇಸ್ ಪತ್ತೆಗೆ ಇಳಿದಿದ್ದಾರೆ.  ವಿಜಯಪುರ ನಗರದ ಗಾಂಧಿ ವೃತ, ಶಿವಾಜಿ ವೃತ್ತ, ಅಂಬೇಡ್ಕರ್ ಸರ್ಕಲ್‌, ಬಸ್ ನಿಲ್ದಾಣ ಪ್ರಮುಖ ರಸ್ತೆಗಳಲ್ಲಿ ತಾವೇ ಸ್ವತಃ ರಾತ್ರಿ ಗಸ್ತು ತಿರುಗಿ ಪ್ರಕರಣಗಳನ್ನ ಪತ್ತೆ ಹಚ್ಚಿದ್ದಾರೆ. ಬುಧವಾರ ರಾತ್ರಿ 30 ಕೇಸ್ ಹಾಗೂ ಗುರುವಾರ ರಾತ್ರಿ 40 ಡ್ರಂಕ್ ಅ್ಯಂಡ್ ಡ್ರೈವ್ ಕೇಸ್ ಗಳನ್ನು‌ ದಾಖಲಿಸಲಾಗಿದೆ‌.

ನನ್ನ, ಸತೀಶಣ್ಣ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಕುಡಿದು ವಾಹನ ಚಲಾಯಿಸಿದ್ರೆ ಹುಷಾರ್ ಎಂದ ಎಸ್ಪಿ ಹೃಷಿಕೇಶ್: ಈ ಕುರಿತು ಮಾಹಿತಿ ಹಂಚಿಕೊಂಡಿರುವ ಎಸ್ಪಿ ಹೃಷಿಕೇಶ್ ಸೋನಾವಣೆ ರಾತ್ರಿ ಹೊತ್ತು ಕುಡಿದು ವಾಹನ ಚಲಾಯಿಸುವವರಿಗೆ ಕೊನೆಯ ಎಚ್ಚರಿಕೆ ನೀಡಿದ್ದಾರೆ. ಕುಡಿದು ವಾಹನ ಸಮೇತ ರಸ್ತೆಗೆ ಬಂದ್ರೆ ದಂಡ ಪಿಕ್ಸ್ ಎಂದಿದ್ದಾರೆ. ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳಿಗೆ ಪೂರ್ಣ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ರಾತ್ರಿ ಹೊತ್ತು ಚುರುಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ.  ಇನ್ನುಂದೆ ಪೊಲೀಸರ ರಾತ್ರಿ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

click me!